ನವದೆಹಲಿ:ಜಮ್ಮು- ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ನಿರಂತರವಾಗಿ ಯತ್ನಿಸುತ್ತಿರುವ ಪಾಕಿಸ್ತಾನ, ಕಾಶ್ಮೀರದ ಯುವಕರಿಗೆ ವೀಸಾ ನೀಡಿ ತನ್ನ ದೇಶಕ್ಕೆ ಕರೆಸಿಕೊಂಡು ಉಗ್ರ ದಾಳಿ ತರಬೇತಿ ನೀಡುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ದಳ ನೀಡಿದೆ. ಪಾಕ್​ನ ವೀಸಾ ಪಡೆದಿರುವ ಕಾಶ್ಮೀರದ ಸುಮಾರು 218 ಯುವಕರು ಕಾಣೆಯಾಗಿದ್ದಾರೆ. 2017ರ ಜನವರಿಯಿಂದ ಕಾಶ್ಮೀರ ಮೂಲದ 399 ಯುವಕರಿಗೆ ಪಾಕಿಸ್ತಾನ ವೀಸಾ ನೀಡಿದೆ. ಆದರೆ ಇದರಲ್ಲಿ 218 ಮಂದಿ ಎಲ್ಲಿದ್ದಾರೆ ಎಂಬುದು ಪತ್ತೆಯಾಗುತ್ತಿಲ್ಲ. 2019ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ರೀತಿಯಲ್ಲೇ ಮತ್ತಷ್ಟು ದಾಳಿಗಳನ್ನು ನಡೆಸುವ ಸಲುವಾಗಿ ಈ ಯುವಕರಿಗೆ ಪಾಕ್ ತರಬೇತಿ ನೀಡುತ್ತಿದೆ. ಜತೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ವೀಸಾ ಪಡೆದು ಪಾಕ್​ಗೆ ಹೋಗಿ ಭಯೋತ್ಪಾದನಾ ತರಬೇತಿ ಪಡೆದು, ಕಾಶ್ಮೀರಕ್ಕೆ ನುಸುಳಿದ್ದ ಹಲವು ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಪಾಕಿಸ್ತಾನ ರಾಯಭಾರ ಅಧಿಕಾರಿಗಳು ಗೂಢಚರ್ಯು ನಡೆಸುತ್ತಿರುವ ಸಂಶಯ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯಲ್ಲಿ ಸಿಬ್ಬಂದಿಯನ್ನು ಶೇ. 50 ಕಡಿಮೆಗೊಳಿಸಿ ಎಂದು ಕಳೆದ ವಾರ ಭಾರತ ಸೂಚಿಸಿದೆ. ಗೂಢಚರ್ಯು ನಡೆಸುತ್ತಿದ್ದ ವೇಳೆಯೇ ಸಿಕ್ಕಿಬಿದ್ದಿದ್ದ ಇಬ್ಬರನ್ನು ಕಳೆದ ತಿಂಗಳು ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ;ಭಾರತದ ನೆರವಿಗೆ ಬರಲಿದೆ ಅಮೆರಿಕ ಸೇನೆ; ಚೀನಾ ಸವಾಲು ಎದುರಿಸಲು ನಿಯೋಜನೆ
ಮಾವೋವಾದಿ ಗುಂಪುಗಳಿಗೆ ಅಪ್ರಾಪ್ತರ ನೇಮಕ:ಜಮ್ಮು- ಕಾಶ್ಮೀರ, ಛತ್ತೀಸಗಢ ಸೇರಿ ಭಾರತದ ವಿವಿಧೆಡೆ ನಕ್ಸಲ್, ಮಾವೋವಾದಿಯಂತಹ ಗುಂಪುಗಳು ನಿರಂತರವಾಗಿ ಅಪ್ರಾಪ್ತ ಮಕ್ಕಳನ್ನು ತಮ್ಮ ಗುಂಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿವೆ ಎಂದು ಅಮೆರಿಕದ ಮಾನವ ಕಳ್ಳಸಾಗಣೆ ಕುರಿತಾದ ವರದಿಯೊಂದು ತಿಳಿಸಿದೆ. ಜಮ್ಮು- ಕಾಶ್ಮೀರದಲ್ಲಿ ಸಶಸ್ತ್ರ ಗುಂಪುಗಳು 14 ವರ್ಷದ ಮಕ್ಕಳನ್ನು ತಮ್ಮ ಕೃತ್ಯಗಳಿಗೆ ಬಳಸಿಕೊಳ್ಳುತ್ತಿವೆ. ಮಾವೋವಾದಿ ಗುಂಪುಗಳು ವಿಶೇಷವಾಗಿ ಛತ್ತೀಸ್​ಗಢ ಮತ್ತು ಜಾರ್ಖಂಡ್​ನಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಒತ್ತಾಯಪೂರ್ವಕವಾಗಿ ತಮ್ಮ ಗುಂಪಿಗೆ ಸೇರಿಸಿಕೊಂಡು ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಾಶ್ಮೀರದಲ್ಲಿ ಮೂವರು ಉಗ್ರರು ಹತ:ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಉಗ್ರರು ಅಡಗಿದ್ದ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಪುಲ್ವಾಮಾದ ಚೆವಾದಲ್ಲಿ ಶೋಧ ಕಾರ್ಯ ಪ್ರಾರಂಭಿಸಿದ್ದವು. ಈ ವೇಳೆ ಯೋಧರ ಮೇಲೆ ಉಗ್ರರು ಗುಂಡು ಹಾರಿಸಿದರು. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ.
ಇದನ್ನೂ ಓದಿ:ಪಾಕ್​ ರಾಯಭಾರ ಕಚೇರಿ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯಲು ಸೂಚನೆ ಕೊಟ್ಟಿದ್ದೇಕೆ ಭಾರತ?
ಪಾಕ್​ಗೆ ಭಾರತದ ದಾಳಿ ಭೀತಿ?:ಭಾರತ ಮತ್ತು ಚೀನಾ ಮಧ್ಯೆ ಲಡಾಖ್ ಗಡಿ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆಯೇ ಕಾಶ್ಮೀರದಲ್ಲಿ ನಿರಂತರವಾಗಿ ಕದನವಿರಾಮ ಉಲ್ಲಂಘಿಸು ತ್ತಿರುವ ಪಾಕಿಸ್ತಾನಕ್ಕೀಗ ಭಾರತದ ಪ್ರತಿದಾಳಿಯ ಭಯ ಸೃಷ್ಟಿಯಾಗಿದೆ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಆಸ್ಪತ್ರೆಯಲ್ಲಿ ತನ್ನ ಸೈನಿಕರಿಗೆ ಶೇ. 50 ಹಾಸಿಗೆಗಳನ್ನು ಮೀಸಲಿರಿಸಿದೆ ಎಂದು ತಿಳಿದುಬಂದಿದೆ.
ಸಿಆರ್​ಪಿಎಫ್ ಯೋಧ ಹುತಾತ್ಮ:ಜಮ್ಮು- ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹೆದ್ದಾರಿ ಯಲ್ಲಿ ನಿಯೋಜಿಸಲಾಗಿರುವ ಸಿಆರ್​ಪಿಎಫ್ ಗಸ್ತು ಪಡೆ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆ ಸಿದ್ದು, ಘಟನೆಯಲ್ಲಿ ಸಿಆರ್​ಪಿಎಫ್​ನ ಓರ್ವ ಯೋಧ ಹುತಾತ್ಮನಾಗಿದ್ದು, ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ.
ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
