ಮುಂಬೈ:ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಪ್ರತಿನಿತ್ಯ ಸಾವಿರಾರು ಸೋಂಕಿತರು ಸಾವನ್ನಪ್ಪುತ್ತಿದ್ದ, ಆ ಶವಗಳ ಅಂತ್ಯಸಂಸ್ಕಾರವೇ ದೊಡ್ಡ ಸವಾಲಾಗಿದೆ. ಅದೇ ಹಿನ್ನೆಲೆಯಲ್ಲಿ ಒಂದೇ ಆ್ಯಂಬುಲೆನ್ಸ್​ ಒಳಗೆ 22 ಕರೊನಾ ಸೋಂಕಿತರ ಶವಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಬೀಡ್​ ಜಿಲ್ಲೆಯಲ್ಲಿ ಒಂದೇ ಆ್ಯಂಬುಲೆನ್ಸ್​ನಲ್ಲಿ 22 ಸೋಂಕಿತರ ಶವಗಳನ್ನು ತುಂಬಿಸಿ, ಅದನ್ನು ಸ್ಮಶಾನಕ್ಕೆ ಒಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರು. ದೃಶ್ಯವನ್ನು ಕೆಲ ಸೋಂಕಿತರ ಸಂಬಂಧಿಗಳು ವಿಡಿಯೋ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೊಬೈಲ್​ಗಳನ್ನು ಪೊಲೀಸರು ಕಸಿದಿಟ್ಟುಕೊಂಡಿದ್ದಾರೆ. ಅಂತ್ಯಕ್ರಿಯೆಯಾದ ನಂತರ ಮೊಬೈಲ್​ ವಾಪಾಸು ಮಾಡಿದ್ದಾರೆ ಎಂದು ಘಟನೆಯನ್ನು ಕಣ್ಣಾರೆ ಕಂಡ ಕೆಲವರು ಹೇಳಿದ್ದಾರೆ.
ಆ್ಯಂಬುಲೆನ್ಸ್​ನಲ್ಲಿದ್ದ ಶವಗಳಲ್ಲಿ 14 ಶವಗಳು ಶನಿವಾರ ಸತ್ತವರದ್ದಾಗಿದ್ದರೆ ಇನ್ನುಳಿದ ಶವಗಳು ಭಾನುವಾರ ಸತ್ತವರದ್ದು ಎನ್ನಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆದ್ದ ಜಿಲ್ಲಾಡಳಿತ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದೆ. (ಏಜೆನ್ಸೀಸ್)
ನಾಳೆಯಿಂದ ನೌಕರರಿಗಾಗಿ ಬಸ್‌ ಇರುತ್ತಾ? ಕೆಲಸಕ್ಕೆ ಹೋಗಲು ಪಾಸ್‌ ಬೇಕಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ ನೋಡಿ…

ಫನ್​ ಬಕೆಟ್​ ಭಾರ್ಗವನ ಮೊಬೈಲ್​ ರಹಸ್ಯ: ಆರೋಪಿ ಬಗ್ಗೆ ಯಾರಿಗೂ ತಿಳಿಯದ ಸಂಗತಿಗಳನ್ನು ಬಿಚ್ಚಿಟ್ಟ ವಕೀಲೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
