ರಿಷಿಕೇಶ್:ಆನೆಯೊಂದು ಕಾಡಿನ ಬಳಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಯುವಕನನ್ನು ನೆಲಕ್ಕೆ ಕುಟ್ಟಿ ಕುಟ್ಟಿ ಸಾಯಿಸಿರುವ ಘಟನೆಯೊಂದು ಉತ್ತರಾಖಂಡ ರಾಜ್ಯದಿಂದ ವರದಿಯಾಗಿದೆ.
ಉತ್ತರಾಖಂಡ ರಾಜ್ಯದ ಫೂಲ್​ಚೆಟ್ಟಿ ಎಂಬ ಹಳ್ಳಿಯಲ್ಲಿ ಸಿಟ್ಟೇರಿದ್ದ ಆನೆಯೊಂದು ಕಪಿಲ್ ಎಂಬ 22 ವರ್ಷದ ಯುವಕನನ್ನು ಸೊಂಡಿಲಿನಿಂದ ಎತ್ತಿ ನೆಲಕ್ಕೆ ಮತ್ತೆ ಮತ್ತೆ ಕುಟ್ಟಿದೆ. ಆನೆಯ ಪ್ರಹಾರಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಲಕ್ಷ್ಮಣ ಝೂಲಾ ಪೊಲೀಸರು ತಿಳಿಸಿದ್ದಾರೆ. ಸೋಮವಾರ (ಫೆಬ್ರವರಿ 22) ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ.
ಇದನ್ನೂ ಓದಿ:ಹುಲಿಗೆ ಇಬ್ಬರು ಬಲಿ; ಹುಲಿ ಪತ್ತೆ ಕಾರ್ಯಾಚರಣೆ ಮುಂದುವರಿಕೆ, ಶಾಲಾ-ಕಾಲೇಜುಗಳಿಗೆ 2 ದಿನ ರಜೆ…
ಮೃತ ಕಪಿಲ್, ಉತ್ತರಪ್ರದೇಶದ ಬಿಜನೋರ್ ಜಿಲ್ಲೆಯ ಬರಲ್ ಎಂಬ ಹಳ್ಳಿಯ ನಿವಾಸಿಯಾಗಿದ್ದ. ಟ್ರಕ್​ ಒಂದರಲ್ಲಿ ಲಕ್ಷ್ಮಣ ಝೂಲಾದಿಂದ ನೀಲಕಂಠ ಕಡೆಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಕಪಿಲ್​​ನನ್ನು ಸಾಯಿಸಿದ ಆನೆ, ಟ್ರಕ್​ನ ವಿಂಡ್​ಸ್ಕ್ರೀನ್ ಒಡೆದು ಚಾಲಕನನ್ನು ಆಚೆಗೆ ಎಳೆಯಲು ಪ್ರಯತ್ನ ಪಟ್ಟಿತು. ಆತ ಅದಕ್ಕೆ ಸಿಗದಂತೆ ವಾಹನದ ಒಳಗೆ ಅವಿತುಕೊಂಡದ್ದರಿಂದ ಉಳಿದುಕೊಂಡ ಎನ್ನಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕಲ್ಲಿದ್ದಲು ಕಳ್ಳಸಾಗಾಣಿಕೆ ಸಿಬಿಐ ತನಿಖೆ : “ನನಗೆ ಏನೂ ಗೊತ್ತಿಲ್ಲ” ಎಂದ ರುಜಿರಾ ಬ್ಯಾನರ್ಜಿ

ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + three =
Remember me
