ನವದೆಹಲಿ:ಕಳೆದ 22 ವರ್ಷಗಳಿಂದಲೂ ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಕಚೇರಿಯು ಭಾರತೀಯ ಜನತಾ ಪಕ್ಷದ(ಬಿಜೆಪಿ) ತೆಕ್ಕೆಯಿಂದ ನಿರಂತರವಾಗಿ ಜಾರಿಕೊಳ್ಳುತ್ತಿದೆ. ಈ ಬಾರಿಯೂ ಇದೇ ಮುಂದುವರಿದ್ದಿದ್ದು ಸದ್ಯ ಬೆಳವಣಿಗೆಯ ಪ್ರಕಾರ ಒಟ್ಟು 70 ಕ್ಷೇತ್ರಗಳಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಚುನಾವಣಾ ಫಲಿತಾಂಶವು ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಮುನ್ನಡೆ ಮತ್ತು ಹಿನ್ನಡೆಯಲ್ಲಿರುವಾಗಲೇ ದೆಹಲಿಯ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್​ ತಿವಾರಿ ಅಂತಿಮ ಫಲಿತಾಂಶ ಹೊರಬೀಳುವವರೆಗೂ ಕಾಯಿರಿ ಎಂದು ತಮ್ಮ ಕಾರ್ಯಕರ್ತತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿಯು ಮತ್ತೊಮ್ಮೆ ದೆಹಲಿಯ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿಯುಕೊಳ್ಳಲಿದೆ. ಬಿಜೆಪಿ ಪಾಲಿಗೆ ಒಳ್ಳೆಯ ಬೆಳವಣಿಗೆಯೆಂದರೆ ಕಳೆದ ಬಾರಿ ಅಂದರೆ 2015ರಲ್ಲಿ ಕೇವಲ 3 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ ಈ ಬಾರಿಗೆ ನಾಲ್ಕು ಸ್ಥಾನಗಳಲ್ಲಿ ಜಿಗಿತಕಂಡು 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇನ್ನೊಂದೆಡೆ ಸದ್ಯದ ಟ್ರೆಂಟ್​ ನಿಜವಾದಲ್ಲಿ ಈ ಬಾರಿಯು ಪೊರಕೆ ಹಿಡಿದ ಆಪ್​ ದೆಹಲಿಯನ್ನು ಕ್ಲೀನ್​ ಸ್ವೀಪ್​ ಮಾಡುವ ಸಮೀಪದತ್ತ ಹೆಜ್ಜೆ ಹಾಕಿದೆ.
ಕೊನೆಯ ಬಾರಿಗೆ 1998ರಲ್ಲಿ ಬಿಜೆಪಿ ದೆಹಲಿಯ ಗದ್ದುಗೆಯನ್ನು ಏರಿತ್ತು. ಕೇವಲ 51 ದಿನಗಳವರೆಗೆ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್​ ಅವರು ಮುಖ್ಯಮಂತ್ರಿಯಾಗಿ ಬಿಜೆಪಿ ಸರ್ಕಾರವನ್ನು ಮುನ್ನಡೆಸಿದ್ದರು. ಇದಕ್ಕೂ ಮುನ್ನ 1993 ರಿಂದ 1998 ವರೆಗೆ ಬಿಜೆಪಿಯ ದಿವಂಗತ ಸಾಹೀಬ್​ ಸಿಂಗ್​ ವರ್ಮಾ ಮತ್ತು ಮದನ್​ ಲಾಲ್​ ಖುರಾನ್​ ಸಿಎಂ ಗಾದಿ ಏರಿದ್ದರು.
ಸಂವಿಧಾನ 73ನೇ ತಿದ್ದುಪಡಿ ಅನ್ವಯ ಬಿಜೆಪಿಯ ಮೂವರು ನಾಯಕರು ಸಿಎಂ ಆಗಿ ಮೂರು ಅವಧಿಯಂತೆ ಕಾರ್ಯ ನಿರ್ವಹಿಸಿದರು. ಬಳಿಕ 1998ರಲ್ಲಿ ಕಾಂಗ್ರೆಸ್​ನ ಶೀಲಾ ದೀಕ್ಷಿತ್​ ಅವರು ಅಧಿಕಾರದ ಚುಕ್ಕಾಣಿ ಹಿಡಿದರು. ಬಳಿಕ ಸತತವಾಗಿ 3 ಅವಧಿ(1998, 2003, 2013)ವರೆಗೂ ದೆಹಲಿಯ ಸಿಎಂ ಗಾದಿಯನ್ನು ಮುನ್ನಡೆಸಿದರು. ಇದಾದ ಬಳಿಕ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬಂದು ರಾಜಕೀಯ ತಿರುವುಗಳ ನಡುವೆ 48 ದಿನಗಳು ಮಾತ್ರ ಅಧಿಕಾರ ನಡೆಸಲು ಸಾಧ್ಯವಾಯಿತು. ಬಳಿಕ ಬರೋಬ್ಬರಿ ಒಂದು ವರ್ಷಗಳ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು.
ಬಳಿಕ 2015ರಲ್ಲಿ ಅಚ್ಚರಿಯ ಬೆಳವಣಿಗೆಯಂತೆ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷವು ದೆಹಲಿ ಚುನಾವಣೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿತು. 70 ಸ್ಥಾನಗಳಲ್ಲಿ ಬರೋಬ್ಬರಿ 67 ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿ ರಾಜಕೀಯ ಚಿತ್ರಣವನ್ನೇ ಬದಲಾಯಿತು.
ಇದೀಗ ಮತ್ತೊಮ್ಮೆ ದೆಹಲಿ ಗದ್ದುಗೆ ಏರಲು ಆಪ್​ ಸಿದ್ಧವಾಗಿದೆ. ಒಟ್ಟು 70 ಕ್ಷೇತ್ರಗಳಲ್ಲಿ ಆಪ್​ 63 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ವಿಜಯದ ಸಮೀಪದಲ್ಲಿದೆ. ಇತ್ತ ಬಿಜೆಪಿ ಕೇವಲ 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಶೇ. 39 ರಷ್ಟು ಮತ ಹಂಚಿಕೆಯನ್ನು ಬಿಜೆಪಿ ಪಡೆದುಕೊಂಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಚೇತರಿಕೆ ಕಂಡಿದೆ.
ಆದರೆ ಕಾಂಗ್ರೆಸ್​ ಪಾಲಿಗಂತೂ ಹಿಂದೆಂದೂ ಕಾಣದ ಹೀನಾಯ ಸ್ಥಿತಿ ಬಂದೊದಗಿದೆ. ಕಳೆದ ಬಾರಿಯ ಫಲಿತಾಂಶವನ್ನೇ ಈ ಬಾರಿಯು ಕಾಂಗ್ರೆಸ್​ ಎದುರು ನೋಡಿದೆ. ಶೂನ್ಯ ಸಂಪಾದನೆಯ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್​ ಒದ್ದಾಡುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
