ಹೈದರಾಬಾದ್​:ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಐಐಟ​ ಹೈದರಾಬಾದ್​ನಲ್ಲಿ ಸ್ನಾತಕೋತರ ವಿದ್ಯಾರ್ಥಿನಿ ತಮ್ಮ ಹಾಸ್ಟೆಲ್​ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳ ಅಂತರದಲ್ಲಿ ಇದು ಎರಡನೇ ಸಾವು ಎಂದು ತಿಳಿದು ಬಂದಿದೆ.
ಓಡಿಶಾ ಮೂಲದ ಎಂಟೆಕ್​ ವಿದ್ಯಾರ್ಥಿನಿ ಮಮಿತಾ ನಾಯ್ಕ್​(21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಕಳೆದ ತಿಂಗಳು ಜುಲೈ 26ರಂದು ಮಮಿತಾ ಐಐಟಿ ಸೇರಿದ್ದರು. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಬಾರದೇ ಇರುವುದನ್ನೂ ಗಮನಿಸಿದ ಆಕೆಯ ಸ್ನೇಹಿತರು ಹಾಸ್ಟೆಲ್​ಗೆ ತೆರಳಿ ಪರಿಶೀಲಿಸಿದಾಗ ಘಟನೆ ಬಳಕಿಗೆ ಬಂದಿದೆ.
ಮಮಿತಾ ನಾಯ್ಕ್​ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್​ನೋಟ್​ ಬರೆದಿದ್ದು, ಮಾನಸಿಕ ಒತ್ತಡದಿಂದಾಗಿ ತಾನು ಈ ನಿರ್ಧಾರ ಮಾಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಇದರಲ್ಲಿ ಯಾರ ಒತ್ತಾಯವೂ ಇಲ್ಲ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:VIDEO| ಭದ್ರತೆಯನ್ನು ಲೆಕ್ಕಿಸದೆ ತಮನ್ನಾ ಜತೆ ಫೋಟೋ ತೆಗೆಸಿಕೊಳ್ಳಲು ಮುಂದಾದ ಅಭಿಮಾನಿ; ಮುಂದೇನಾಯ್ತು?
ಘಟನಾ ಸ್ಥಳಕ್ಕೆ ಭೇಟಿ ಸಂಗಾರೆಡ್ಡಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಐಐಟಿ ಹೈದರಾಬಾದ್​ ಕ್ಯಾಂಪಸ್​ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 17ರಂದು ನೆಲ್ಗೊಂಡ ನಿವಾಸಿ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ವಿದ್ಯಾರ್ಥಿ ಡಿ. ಕಾರ್ತಿಕ್​ ಎಂಬಾತ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ.
ಓದಿನ ಒತ್ತಡ , ಮಾನಸಿಕ ಹಿಂಸೆ, ಪರೀಕ್ಷೆಗಳಲ್ಲಿ ಹೆಚ್ಚ ಬ್ಯಾಕ್​ಲಾಗ್​ಗಳಾದ ಕಾರಣ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 10 =
Remember me
