ನವದೆಹಲಿ:ವಿಮಾನ ಹಾಗೂ ರೈಲ್ವೆ ತಯಾರಿಕಾ ಕಂಪನಿ ಕೆನಡಾದ ಬೊಂಬಾರ್ಡಿಯರ್​, ಫ್ರಾನ್ಸ್​ನ ರೈಲ್ವೆ ದಿಗ್ಗಜ ಅಲ್​ಸ್ಟಾಮ್​ ಹಾಗೂ ಜರ್ಮ ನಿಯ ದೈತ್ಯ ಸೀಮನ್ಸ್​ ಕಂಪನಿಗಳು ಭಾರತದಲ್ಲಿ ರೈಲು ಓಡಿಸೋಕೆ ಸಜ್ಜಾಗಿವೆ.
ದೇಶೀಯ ಸಾರ್ವಜನಿಕ ವಲಯದ ಕಂಪನಿಗಳಾದ ಬಿಎಚ್​​ಇಎಲ್​, ಎನ್​ಐಐಎಫ್​ ಕಂಪನಿಗಳು ಕೂಡ ನಾವೇನು ಕಮ್ಮಿಯಿಲ್ಲ ಎನ್ನುವಂತೆ ಈ ವಿದೇಶಿ ಕಂಪನಿಗಳೊಂದಿಗೆ ಪೈಪೋಟಿಗೆ ಇಳಿದಿವೆ.
ಇದನ್ನೂ ಓದಿ;ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ
ಖಾಸಗಿಯವರಿಗೂ ರೈಲು ಓಡಿಸಲು ಅವಕಾಶ ನೀಡಿ ಭಾರತೀಯ ರೈಲ್ವೆ ಇಲಾಖೆ ಕರೆದಿರುವ ಟೆಂಡರ್​ನಲ್ಲಿ 23ಕ್ಕೂ ಕಂಪನಿಗಳು ಆಸಕ್ತಿ ತೋರಿಸಿವೆ. ರೈಲನ್ನು ಖರೀದಿಸುವ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯುವ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಇಷ್ಟೆಲ್ಲ ಸಂಸ್ಥೆಗಳು ಟೆಂಡರ್​ನಲ್ಲಿ ಸ್ಪರ್ಧೆಗಿಳಿದಿವೆ ಎಂದು ವಿಶ್ಲೇಷಿಸಲಾಗಿದೆ.
ನಿರ್ವಹಣೆಯಲ್ಲಿ ಅತ್ಯಂತ ಸೂಕ್ತ ಎನಿಸುವ ಕಂಪನಿಗಳಿಗಷ್ಟೇ ಅವಕಾಶ ನೀಡಲಾಗುತ್ತದೆ ಜತೆಗೆ, ಪ್ರಯಾಣದ ಟಿಕೆಟ್​ ದರವನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಈ ಕಂಪನಿಗಳಿಗೆ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ;88 ಸಾವಿರಕ್ಕೂ ಅಧಿಕ ಬಿಎಸ್ಸೆನೆಲ್​ ನೌಕರರು ಮನೆಗೆ ಹೋಗ್ತಾರೆ; ಸಂಸ್ಥೆ ಖಾಸಗೀಕರಣ ಮಾಡ್ತಾರೆ …!
ಇಎಂಎಲ್​, ಐಆರ್​ಸಿಟಿಸಿ, ಸಿಎಎಫ್​, ಸ್ಟರ್ಲೈಟ್​, ಭಾರತ್​ ಫೋರ್ಜ್​, ಜೆಕೆಬಿ ಇನ್​ಫ್ರಾ, ತಿತಾಘರ್​ ವ್ಯಾಗನ್ಸ್​ ಲಿಮಿಟೆಡ್​ ಮೊದಲಾದ ಕಂಪನಿಗಳು ಪ್ರಮುಖವಾಗಿವೆ.
ಖಾಸಗಿಯವರಿಗೆ ಅವಕಾಶ ನೀಡುವ ಮೂಲಕ ಈ ಕ್ಷೇತ್ರದಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಚಂಡಿಗಢ್​, ಜೈಪುರ, ದೆಹಲಿ, ಮುಂಬೈ, ಪಟನಾ, ಪ್ರಯಾಗ್​ರಾಜ್​, ಸಿಕಂದರಾಬಾದ್​, ಹೌರಾ, ಚೆನ್ನೈ ವಲಯಗಳಲ್ಲಿ ಖಾಸಗಿ ರೈಲುಗಳು ಸಂಚರಿಸಲಿವೆ.
ಎರಡೇ ವಾರದಲ್ಲಿ 97 ಸಾವಿರ ಮಕ್ಕಳಲ್ಲಿ ಸೋಂಕು; ಶಾಲೆಗಳ ಮರು ಆರಂಭ ನಿರ್ಧಾರ ಹುಟ್ಟು ಹಾಕಿದೆ ಭಾರಿ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
