ಚಂಡೀಗಢ:ಅಧಿಕ ವೇತನ ಮತ್ತು ಉದ್ಯೋಗ ಭದ್ರತೆಗಾಗಿ ಆಗ್ರಹಿಸಿ ವೃತ್ತಿಶಿಕ್ಷಣ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 15 ಜನ ಪ್ರತಿಭಟನಾಕಾರರು ಮತ್ತು 8 ಜನ ಪೊಲೀಸರಿಗೆ ತೀವ್ರ ಗಾಯಗಳುಂಟಾಗಿರುವ ಪ್ರಸಂಗ ವರದಿಯಾಗಿದೆ.
ಹರಿಯಾಣದ ಹಲವು ಜಿಲ್ಲೆಗಳಲ್ಲಿ ಹರಿಯಾಣ ವೊಕೇಷನಲ್ ಟೀಚರ್ಸ್​ ಅಸೋಸಿಯೇಷನ್​ ನೇತೃತ್ವದಲ್ಲಿ ವೃತ್ತಿಪರ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡುವಂತೆ ಹಾಗೂ ಉದ್ಯೋಗ ನೀಡುವಲ್ಲಿ ಗುತ್ತಿಗೆದಾರರ ಪಾತ್ರವನ್ನು ವಿರೋಧಿಸಿ ‘ಮಹಾ ಆಂದೋಲನ್​’ ನಡೆಯುತ್ತಿದೆ. ಸೋಮವಾರ ಸಂಜೆ ಪಂಚಕುಲದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಶಿಕ್ಷಕರ ಗುಂಪು ಚಂಡೀಗಡದ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ತಡೆಯುವ ಪ್ರಯತ್ನ ನಡೆಸಿದರು.
ಇದನ್ನೂ ಓದಿ:ಕ್ರಿಕೆಟ್​ ಬೆಟ್ಟಿಂಗ್​, ಜೂಜಿನಲ್ಲಿ ಹಣ ಕಳೆದ; ಸಾಲಬಾಧೆ ತಾಳದೆ ಸಾವಿಗೆ ಶರಣಾದ
ಹೋರಾಟಗಾರರು ಇದಕ್ಕೆ ಮಣಿಯದ ಕಾರಣ ಲಾಠಿ ಚಾರ್ಜ್​ ಮತ್ತು ವಾಟರ್​ ಕ್ಯಾನನ್​ಗಳ ಪ್ರಯೋಗಕ್ಕೆ ಪೊಲೀಸರು ಮುಂದಾದರು. ರೊಚ್ಚಿಗೆದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಮಾರಾಮಾರಿಯಲ್ಲಿ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಂಟು ಜನ ಪೊಲೀಸರಿಗೆ ಗಾಯಗಳುಂಟಾದವು. ಪ್ರತಿಭಟನಾಕಾರರಲ್ಲಿ 15 ಜನರಿಗೆ ಗಾಯಗಳುಂಟಾದವು ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ಫಾಲ್ಕೆ ಪ್ರಶಸ್ತಿ ಪಡೆದ ರಜನೀಕಾಂತ್;​ ಕರ್ನಾಟಕ ಸಾರಿಗೆ ಬಸ್​ ಚಾಲಕನ್ನನ್ನು ನೆನೆದರು!

ಬನಿಯನ್ನಲ್ಲಿ ಬ್ಲೂಟೂತ್​ ಡಿವೈಸ್​! ಪರೀಕ್ಷೆಯಲ್ಲಿ ನಕಲು ಮಾಡಲು ಹೈಟೆಕ್​ ಮಾರ್ಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
