ನವದೆಹಲಿ:ವಿಧಾನಸಭೆ ಕಲಾಪಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಈವರೆಗೆ ಸಚಿವರು, ಶಾಸಕರು ಸೇರಿ 23 ಜನರಿಗೆ ಕೋವಿಡ್​ ಸೋಂಕು ತಗುಲಿದೆ….!
ಇದು ಪಂಜಾಬ್​ ಶಾಸನಸಭೆಯ ಸ್ಥಿತಿ. ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಬಿಚ್ಚಿಟ್ಟ ವಾಸ್ತವ ಸ್ಥಿತಿ. ಶಾಸಕರ ಸ್ಥಿತಿಯೇ ಹೀಗಿರುವಾಗ ಇನ್ನೂ ಯಾವ ರೀತಿ ನೀಟ್​ ಹಾಗೂ ಜೆಇಇ ಪರೀಕ್ಷೆಗಳಿಗೆ ಸಜ್ಜಾಗಿ ಎಂದು ವಿದ್ಯಾರ್ಥಿಗಳಿಗೆ ಹೇಳಲಿ ಎನ್ನುವುದು ಅಮರೀಂದರ್​ ಅಳಲು.
ಇದನ್ನೂ ಓದಿ;ಭವಿಷ್ಯದಲ್ಲಿ ಬೆಂಗಳೂರಿಗೆ ನೀರುಣಿಸುವ ಯೋಜನೆಗೆ 9 ಸಾವಿರ ಕೋಟಿ ರೂ..! ತ್ವರಿತ ಜಾರಿಗೆ ಕ್ರಮ
ಪಂಜಾಬ್​ ವಿಧಾನಸಭೆ ಕಲಾಪ ಆಗಸ್ಟ್​ 28ಕ್ಕೆ ಆರಂಭವಾಗಲಿದೆ. ಈವರೆಗೆ ಒಟ್ಟಾರೆ 23 ಜನಪ್ರತಿನಿಧಿಗಳು ಕರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ನೀಟ್​ ಹಾಗೂ ಜೆಇಇ ಪರೀಕ್ಷೆಗಳ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್​ನಲ್ಲಿ ದಾವೆ ಹೂಡಲು ಇತರ ಸಮಾನ ಮನಸ್ಕ ರಾಜ್ಯಗಳ ಅಡ್ವೋಕೇಟ್​ ಜನರಲ್​ಗಳೊಂದಿಗೆ ಚರ್ಚೆ ನಡೆಸಲು ಸಿಎಂ ಸೂಚಿಸಿದ್ದಾರೆ.
ಇದನ್ನೂ ಓದಿ;ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಇನ್ನೊಂದೆಡೆ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳ ಅಂತಿಮ ಸೆಮಿಸ್ಟರ್​ ಪರೀಕ್ಷೆಯನ್ನು ಮುಂದೂಡುವಂತೆ ಅಥವಾ ಕೈಬಿಡುವಂತೆ ಮನವಿ ಮಾಡಿದರೂ ಯುಜಿಸಿ ಕೇಳುತ್ತಿಲ್ಲ ಅಮರೀಂದರ್​ ಸಿಂಗ್​ ಹೇಳಿದ್ದಾರೆ.
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
