ಮುಂಬೈ:ಕೆಲ ದಿನಗಳ ಹಿಂದಷ್ಟೇ ಪ್ರಕಟವಾದ 2019ನೇ ಸಾಲಿನ ಯುಪಿಎಸ್ಸಿ ಪರೀಕ್ಷಾ ಫಲಿತಾಂಶದಲ್ಲಿ 93ನೇ ರ್ಯಾಂಕ್​ ಪಡೆದ ಬೆನ್ನಲ್ಲೇ ಪ್ರಸಿದ್ಧಿ ಪಡೆದಿರುವ ಮಿಸ್​ ಇಂಡಿಯಾ ಫೈನಲಿಸ್ಟ್​ ಐಶ್ವರ್ಯಾ ಶಿಯೋರನ್​ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.
ತಮ್ಮ ಹೆಸರಿನಲ್ಲಿ 20 ನಕಲಿ ಇನ್​ಸ್ಟಾಗ್ರಾಂ ಖಾತೆಗಳಿರುವುದು ಗೊತ್ತಾದ ಬೆನ್ನಲ್ಲೇ ಶಾಕ್​ ಆಗಿರುವ ಐಶ್ವರ್ಯಾ ನಕಲಿ ಖಾತೆ ತೆರೆದವರ ವಿರುದ್ಧ ಮುಂಬೈನ ಕೊಲಬಾ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.
ಇದನ್ನೂ ಓದಿ:ದೇವೇಗೌಡರೇ, ನೀವು ಕ್ಷಮೆ ಕೇಳುವುದು ನಮಗೆ ಮುಜುಗರ… ಎಂದ ಜೆಡಿಎಸ್​ ಕಾರ್ಯಕರ್ತ
ಫೋಟೋ ಶೇರಿಂಗ್​ ವೇದಿಕೆ ಇನ್​ಸ್ಟಾಗ್ರಾಂನಲ್ಲಿ ಐಶ್ವರ್ಯಾ ಒಪ್ಪಿಗೆ ಇಲ್ಲದೆಯೇ ಅನೇಕ ಫೋಟೋಗಳು ಶೇರ್​ ಆಗಿವೆ. ಅನೇಕ ಬ್ಯೂಟಿ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಐಶ್ವರ್ಯಾ, ಇದುವರೆಗೂ ನನ್ನ ಹೆಸರಿನಲ್ಲಿ ಯಾವುದೇ ಇನ್​ಸ್ಟಾಗ್ರಾಂ ಖಾತೆಯನ್ನು ಹೊಂದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಅಂದಹಾಗೆ ಐಶ್ವರ್ಯಾ 2017ರಿಂದ ಕೊಲಬಾದಲ್ಲಿರುವ ಕಾಲನಿಯಲ್ಲಿರುವ ಆರ್ಮಿ ಆಫೀಸರ್​ ಕಾಲನಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಅವರ ತಂದೆ ಕರ್ನಲ್​ ಅಜಯ್​ಕುಮಾರ್​ ಶಿಯೋರನ್​ ಕರೀಮ್​ನಗರದಲ್ಲಿ ತೆಲಂಗಾಣ ಬೆಟಾಲಿಯನ್​ನ ಕಮಾಂಡಿಂಗ್​ ಅಧಿಕಾರಿಯಾಗಿದ್ದಾರೆ.
ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದಿರುವುದು ಗಂಭೀರ ವಿಚಾರವಲ್ಲ. ಆದರೆ, ಭವಿಷ್ಯದಲ್ಲಿ ಇದೇ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಯುವತಿಯ ಬಣ್ಣದ ಮಾತು ನಂಬಿದ ನಿವೃತ್ತ ವೈದ್ಯರಿಬ್ಬರಿಗೆ ಕಾದಿತ್ತು ಬಿಗ್​ ಶಾಕ್​!
ಸಂದರ್ಶನವೊಂದರಲ್ಲಿ ನನ್ನ ಇನ್​​ಸ್ಟಾಗ್ರಾಂ ಖಾತೆ ಬಗ್ಗೆ ಹೇಳಿದರು. ಯಾವುದೇ ಖಾತೆಯನ್ನು ಹೊಂದಿರದ ನನಗೆ ಅವರು ಹೇಳಿದ್ದನ್ನು ಕೇಳಿ ಶಾಕ್​ ಆಯಿತು. ಬಳಿಕ ಪರಿಶೀಲಿಸುವಂತೆ ನನ್ನ ಸಹೋದರಿಗೆ ಹೇಳಿದೆ. ಆಗ ನನ್ನ ಹೆಸರಿನಲ್ಲಿ 20 ನಕಲಿ ಖಾತೆ ಇರುವುದು ಬೆಳಕಿಗೆ ಬಂತು. ಅನೇಕ ಖಾತೆಗಳು ಅಧಿಕೃತ ಎಂದು ಹೇಳಿಕೊಂಡಿವೆ. ಅದರಲ್ಲಿ ಒಂದು ಖಾತೆಗೆ 27 ಸಾವಿರ ಫಾಲೋವರ್ಸ್​ಗಳಿದ್ದಾರೆ. ಹೀಗಾಗಿ ಮುಂದೆ ದುರ್ಬಳಕೆ ಮಾಡಿಕೊಳ್ಳಬಹುದೆಂಬ ಕಾರಣಕ್ಕೆ ದೂರು ನೀಡಿದೆವು ಎಂದು ಹೇಳಿದ್ದಾರೆ.
ಐಶ್ವಯಾ ಅವರು 2015ರ ದೆಹಲಿ ಫ್ರಶ್​ಫೇಸ್ ವಿನ್ನರ್​,​ 2016ರ ದೆಹಲಿ ಕ್ಯಾಂಪಸ್​ ಪ್ರಿನ್ಸೆಸ್​​ ಹಾಗೂ 2016ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್​ ಆಗಿ ಹೆಸರು ಗಳಿಸಿದ್ದಾರೆ. 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್​ ಪಡೆದಿದ್ದು, ಮಾಡೆಲಿಂಗ್​ ಮಾತ್ರವಲ್ಲದೇ ಯುಪಿಎಸ್ಸಿಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಹೀಗಾಗಿ ಐಶ್ವರ್ಯಾ ಅವರು ಸೌಂದರ್ಯ ಹಾಗೂ ಬುದ್ಧಿವಂತಿಕೆಗೆ ನೈಜ ಉದಾಹರಣೆ ಎಂದು ಕೊಂಡಾಡಿದ್ದಾರೆ.(ಏಜೆನ್ಸೀಸ್​)
ನಗ್ನ ಸ್ಥಿತಿಯಲ್ಲಿ ಪತ್ತೆಯಾಯ್ತಾ ದಿಶಾ ಶವ? ಮುಂಬೈ ಪೊಲೀಸರು ಸಾಕ್ಷಿ ಇದೆ ಎಂದಿದ್ದೇಕೆ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:nine − 1 =
Remember me
