ಬಿಹಾರ:ಹಾವು ಕಂಡರೆ ಭಯದಿಂದ ದೂರ ಓಡಿ ಹೋಗುತ್ತಾರೆ. ನಾಗರಹಾವಿನಂತಿದ್ದರೆ ಹಾವು ಇರುವ ಸುತ್ತಮುತ್ತಲು ಹೋಗಲು ಹೆದರುತ್ತೇವೆ. ಇದು ಅತ್ಯಂತ ವಿಷಕಾರಿ ಹಾವು. ಬಿಹಾರದ ಬಾಘಾ ಜಿಲ್ಲೆಯ ಮಧುಬನಿ ಗ್ರಾಮ ಪಂಚಾಯಿತಿಯಲ್ಲಿ ಇಂತಹದ್ದೇ ಘಟನೆ ನಡೆದಿದೆ.
ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!
ಗ್ರಾಮದ ಮದನ್ ಚೌಧರಿ ಎಂಬುವರು ತಮ್ಮ ಮನೆಯ ಮೆಟ್ಟಿಲುಗಳ ಕೆಳಗೆ ಡ್ರೆಸ್ಸಿಂಗ್ ಟೇಬಲ್ ಇಟ್ಟುಕೊಂಡಿದ್ದರು. ಮನೆಯ ಮಕ್ಕಳು ಮೆಟ್ಟಿಲುಗಳ ಬಳಿ ಆಟವಾಡುತ್ತಿದ್ದಾಗ ಹಾವು ಹಾದು ಹೋಗಿತ್ತು. ಮಕ್ಕಳು ಒಮ್ಮೆಲೆ ಕಿರುಚಿದರು. ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಆಗಮಿಸಿದರು. ಕುಟುಂಬಸ್ಥರು ಡ್ರೆಸ್ಸಿಂಗ್ ಟೇಬಲ್ ಬಳಿ ಬಂದು ನೋಡಿದಾಗ ನಾಗರಹಾವು ಕಾಣಿಸಿಕೊಂಡಿದೆ.
ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?
ಡ್ರೆಸ್ಸಿಂಗ್ ಟೇಬಲ್ ಅನ್ನು ಸ್ವಲ್ಪ ಸರಿಸಿದರು. ಇನ್ನು ನಾಲ್ಕು ಹಾವುಗಳು ಕಂಡು ಬಂದ ಕೂಡಲೇ ಮನೆಯವರು ಹಾಗೂ ಸ್ಥಳೀಯರು ಹಾವುಗಳನ್ನು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಡ್ರೆಸ್ಸಿಂಗ್ ಟೇಬಲ್ ಕೆಳಗೆ ನೋಡಿದಾಗ 24 ನಾಗರ ಹಾವುಗಳು ಕಂಡವು. ಹಾವುಗಳ ಜತೆಗೆ 60 ಮೊಟ್ಟೆಗಳು ಪತ್ತೆಯಾಗಿವೆ. ಹಾವು ಮತ್ತು ಮೊಟ್ಟೆಗಳನ್ನು ಚೀಲದಲ್ಲಿ ಹಾಕಿದ ಉರಗ ತಜ್ಞ ಅವುಗಳನ್ನು ಕಾಡಿನ ಅಂಚಿನಲ್ಲಿ ಬಿಟ್ಟು ಹೋಗಿ ಬಿಟ್ಟಿದ್ದಾರೆ.
ಇದನ್ನೂ ಓದಿ:VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು!
ಈ ಘಟನೆಯಿಂದ ಕುಟುಂಬಸ್ಥರ ಜತೆಗೆ ಸುತ್ತಮುತ್ತಲಿನವರೂ ಭಯಭೀತರಾಗಿದ್ದಾರೆ. ಪ್ರತಿದಿನ ಆ ಭಾಗದಲ್ಲಿ ಮಕ್ಕಳು ಆಟವಾಡುತ್ತಿದ್ದು, ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಮನೆಯ ಮಾಲೀಕ ಮದನ್ ಚೌಧರಿ ತಿಳಿಸಿದ್ದಾರೆ.
“ನಂದ ಲವ್ಸ ನಂದಿತಾ” ನಟಿಗೆ ಇದೆ ವಿಚಿತ್ರ ಕಾಯಿಲೆ; ನಿದ್ರೆ ಬರಲ್ಲ.. ವ್ಯಾಯಾಮ ಮಾಡುವಂತಿಲ್ಲ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
