ಅಹಮದಾಬಾದ್​:ಕಳೆದ ಆಗಸ್ಟ್​​ 27 ರಿಂದ ಆ. 29ರವರೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಒಟ್ಟು 24 ಮೊಸಳೆಗಳನ್ನು ಗುಜರಾತಿನ ವಡೋದರಾದ ಜನವಸತಿ ಪ್ರದೇಶದಲ್ಲಿ ರಕ್ಷಣೆ ಮಾಡಲಾಗಿದೆ.
ಭಾರಿ ಮಳೆಯಿಂದಾಗಿ ವಿಶ್ವಾಮಿತ್ರ ನದಿ ಉಕ್ಕಿ ಹರಿದ ಪರಿಣಾಮ ಮೊಸಳೆಗಳು ನದಿಯನ್ನು ಬಿಟ್ಟು ಜನವಸತಿ ಪ್ರದೇಶಗಳತ್ತ ನುಗ್ಗಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನದಿಯು 400ಕ್ಕೂ ಅಧಿಕ ಮೊಸಳೆಗಳ ಆವಾಸಸ್ಥಾನವಾಗಿದೆ. ಅಜ್ವಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ನದಿಯಲ್ಲಿ ಪ್ರವಾಹ ಉಂಟಾಗಿ ಮೊಸಳೆಗಳು ಹೊರಬಂದಿವೆ ಎಂದು ವಡೋದರಾ ವಲಯ ಅರಣ್ಯಾಧಿಕಾರಿ ಕರಣ್‌ಸಿಂಹ ರಜಪೂತ್‌ ತಿಳಿಸಿದ್ದಾರೆ.
24 ಮೊಸಳೆಗಳನ್ನು ಹೊರತುಪಡಿಸಿ, ಹಾವುಗಳು, 40 ಕೆಜಿಗೂ ಅಧಿಕ ತೂಕದ ಐದು ದೊಡ್ಡ ಆಮೆಗಳು ಹಾಗೂ ಪಾರ್ಕುಪೈನ್​ ಸೇರಿದಂತೆ ಇತರೆ 75 ಪ್ರಾಣಿಗಳನ್ನು ಕಳೆದ ಮೂರು ದಿನಗಳಲ್ಲಿ ರಕ್ಷಣೆ ಮಾಡಲಾಗಿದೆ. ವಿಶ್ವಾಮಿತ್ರ ನದಿಗೆ ಅನೇಕ ವಸತಿ ಏರಿಯಾಗಳು ಸಮೀಪದಲ್ಲಿವೆ ಎಂದು ರಜಪೂತ್​ ಮಾಹಿತಿ ನೀಡಿದರು.
ನಾವು ರಕ್ಷಿಸಿದ ಅತ್ಯಂತ ಚಿಕ್ಕ ಮೊಸಳೆ ಎರಡು ಅಡಿ ಉದ್ದವಿದ್ದರೆ, ದೊಡ್ಡದು 14 ಅಡಿ ಉದ್ದವಿತ್ತು. ನದಿಯ ದಂಡೆಯಲ್ಲಿರುವ ಕಾಮನಾಥ್ ನಗರದಿಂದ ಗುರುವಾರ ಹಿಡಿಯಲಾಯಿತು. ಸ್ಥಳೀಯ ನಿವಾಸಿಗಳು ಈ ಬೃಹತ್ ಮೊಸಳೆಯ ಬಗ್ಗೆ ನಮಗೆ ಮಾಹಿತಿ ನೀಡಿದರು. 11 ಅಡಿ ಉದ್ದದ ಇತರ ಎರಡು ಮೊಸಳೆಗಳು ಇಎಂಇ ಸರ್ಕಲ್ ಮತ್ತು ಎಂಎಸ್ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಬಳಿಯ ತೆರೆದ ಪ್ರದೇಶದಲ್ಲಿ ಗುರುವಾರ ರಕ್ಷಿಸಲಾಯಿತು ಎಂದು ರಜಪೂತ್ ತಿಳಿಸಿದರು.
ಇಷ್ಟೊಂದು ಮೊಸಳೆಗಳನ್ನು ರಕ್ಷಣೆ ಮಾಡಿದಾದರೂ ಎಲ್ಲಿಯೂ ಮಾನವ ಮತ್ತು ಮೊಸಳೆ ಸಂಘರ್ಷದ ಘಟನೆಗಳು ವರದಿಯಾಗಿಲ್ಲ. ಸಾಮಾನ್ಯವಾಗಿ ಮೊಸಳೆಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ನದಿಯಲ್ಲಿ ಅವು ಮೀನು ಮತ್ತು ಇನ್ನಿತರ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ. ಕೆಲವೊಮ್ಮೆ ನಾಯಿಗಳು, ಹಂದಿಗಳು ಅಥವಾ ಇತರ ಯಾವುದೇ ಸಣ್ಣ ಪ್ರಾಣಿಗಳನ್ನು ಸಹ ಕೊಂದು ತಿನ್ನಬಹುದು ಎಂದು ರಜಪೂತ್​ ಹೇಳಿದರು.
ವಿಶ್ವಾಮಿತ್ರ ನದಿಯ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದರಿಂದ ರಕ್ಷಿಸಿದ ಮೊಸಳೆ ಹಾಗೂ ಇತರೆ ಸರೀಸೃಪಗಳನ್ನು ಮತ್ತೆ ನದಿಯಲ್ಲಿ ಬಿಡಲಾಗುವುದು ಎಂದು ರಜಪೂತ್​ ತಿಳಿಸಿದರು.(ಏಜೆನ್ಸೀಸ್​)
ಕಣ್ಣಿಗೊಂದು ಸವಾಲು: ಜೀನಿಯಸ್​​ ಮಾತ್ರ ಮಧ್ಯದಲ್ಲಿ ಕುಳಿತಿರುವ ಯುವತಿಯ ಕಾಲುಗಳನ್ನು ಪತ್ತೆ ಹಚ್ಚಬಲ್ಲರು!

ಉಡುಪಿ ಪಡುಕೆರೆ ಬೀಚ್​ನಲ್ಲಿ ಬಿಕಿನಿ ಫೋಟೋಶೂಟ್​! ತಡೆಯಲು ಬಂದ ಪೊಲೀಸರ ವಿರುದ್ಧ ಯುವತಿ ಆಕ್ರೋಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 5 =
Remember me
