ತಿರುವನಂತಪುರಂ:ಅದೃಷ್ಟ ಅಂದರೆ ಹೇಗಿರಬೇಕು ಎಂದು ಯಾರಾದರೂ ಕೇಳಿದರೆ, ಅದಕ್ಕೆ ಉದಾಹರಣೆಯಂತಿದೆ ಈ ಸ್ಟೋರಿ.
ಹೌದು, ಭಾನುವಾರ ಕೇರಳ ಸರ್ಕಾರದ ತಿರುವೋಣಂ ಬಂಪರ್​ ಲಾಟರಿ 2020ರ ಫಲಿತಾಂಶ ಘೋಷಣೆ ಮಾಡುವ ಮುನ್ನ 24 ವರ್ಷದ ಅನಂತು ವಿಜಯನ್ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ಈ ಬಾರಿಯ ಲಾಟರಿ ವಿಜೇತ ನಾನೇ ಎಂದು ಹೇಳಿ ತನ್ನದೇ ಜೋಕ್ಸ್​ಗೆ ಗಹಗಹಿಸಿ ನಕ್ಕಿದ್ದ. ತಾನಾಡಿದ ಜೋಕ್ಸ್​ ನಿಜವಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಹೀಗಿರುವಾಗ ಭಾನುವಾರ ಸಂಜೆ ತನ್ನ ಲಾಟರಿಯ ಫಲಿತಾಂಶವನ್ನು ವೀಕ್ಷಿಸಿದ ಯುವಕನಿಗೆ ಬಹುದೊಡ್ಡ ಸರ್ಪ್ರೈಸ್​ ಕಾದಿತ್ತು.
ಲಾಟರಿಯ ಒಂದೊಂದೆ ನಂಬರ್​ ನೋಡುತ್ತಾ ಬಿಸಿಯುಸಿರು ಬಿಡುತ್ತಿದ್ದ ಇಡುಕ್ಕಿ ಮೂಲದ ವಿಜಯನ್​ ಕೊನೆಯ ನಂಬರ್​ ನೋಡುತ್ತಿದ್ದಂತೆಯೇ ತನ್ನ ಜೋಕ್ಸ್​ ನಿಜವಾಯ್ತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ. ಒಂದೇ ದಿನದಲ್ಲಿ ತಾನೂ ಕೋಟ್ಯಾಧಿಪತಿಯಾಗುತ್ತೇನೆಂಬ ಯಾವುದೇ ಆಲೋಚನೆಯೂ ಇರಲಿಲ್ಲ. ಇದೀಗ 12 ಕೋಟಿ ರೂ. ಒಡೆಯನಾಗಿರುವ ವಿಜಯನ್​ ಸಂತೋಷದ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಇದನ್ನೂ ಓದಿ:ಮೂರು ಚಿತ್ರಗಳಿಗೆ ಕಾರ್ತಿಕ್ ಆರ್ಯನ್​ ಪಡೆದ ಸಂಭಾವನೆ 75 ಕೋಟಿಯಂತೆ!
ಅಂದಹಾಗೆ, ಇಡುಕ್ಕಿಯ ಕಟ್ಟಪ್ಪಣದಲ್ಲಿರುವ ಥೋವಲ್ ನಿವಾಸಿಯಾಗಿರುವ ವಿಜಯನ್​ ಎರ್ನಾಕುಲಂನ ಕಡವಂಥ್ರದ ಪೊನ್ನೆಥಾ ದೇವಸ್ಥಾನದಲ್ಲಿ ಕ್ಲರ್ಕ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯನ್​ ತುಂಬು ಕುಟುಂಬದಿಂದ ಬಂದವರು. ಇಬ್ಬರು ಒಡಹುಟ್ಟಿದವರಿದ್ದಾರೆ. ತಂದೆ ಪೇಂಟರ್​ ಆಗಿದ್ದಾರೆ. ಸಹೋದರಿ ಕೊಚ್ಚಿಯ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಕರೊನಾ ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಫಲಿತಾಂಶ ನೋಡಿದ ನನಗೆ ನಿಜಕ್ಕೂ ಶಾಕ್​ ಆಯಿತು. ನಿಜಕ್ಕೂ ಆ ದಿನ ರಾತ್ರಿ ನಾನು ನಿದ್ರೆಯೇ ಮಾಡಲಿಲ್ಲ. ಫಲಿತಾಂಶ ನೋಡಿದ ಬೆನ್ನಲ್ಲೇ ಮನೆಗೆ ಕರೆ ಮಾಡಿದೆ. ನಾನು ಹೇಳಿದ್ದನ್ನು ಕೇಳಿ ಕುಟುಂಬವೇ ನಂಬಲಿಲ್ಲ ಎಂದು ವಿಜಯನ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೆ ವಿಜಯನ್​, BR 75 TB 173964 ಸಂಖ್ಯೆಯ ಲಾಟರಿಯನ್ನು ಕೊಡವಂಥ್ರಾದಲ್ಲಿನ ರಸ್ತೆ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನಿಂದ ಕೊಂಡುಕೊಂಡಿದ್ದ. ಇದೀಗ 12 ಕೋಟಿ ಲಾಟರಿ ಒಡೆದಿದ್ದು, ತೆರಿಗೆ ಮತ್ತು ಏಜೆನ್ಸಿ ಕಮಿಷನ್​ ಕಳೆದ 7.56 ಕೋಟಿ ರೂ. ಪಡೆದುಕೊಳ್ಳಲಿದ್ದಾರೆ. ಈ ಹಿಂದೆಯೂ ವಿಜಯನ್​ಗೆ 5 ಸಾವಿರ ಲಾಟರಿ ಹೊಡೆದಿತ್ತು. ವಿಜಯನ್​ ಹೊರತುಪಡಿಸಿ ಇನ್ನು ಆರು ಮಂದಿಗೆ 1 ಕೋಟಿ ರೂ. ಲಾಟರಿ ಹೊಡೆದಿದೆ.(ಏಜೆನ್ಸೀಸ್​)
ನಾಲೆಯಲ್ಲಿ ತೇಲಿಬಂದ ವಸ್ತು ನೋಡಿ ಬೆಚ್ಚಿಬಿದ್ದ ಜನರು: ಪೊಲೀಸರಿಗೂ ನಿಗೂಢವಾಯ್ತು ಪ್ರಕರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
