ಚಂಡೀಗಡ:ಶಾಲೆಯಲ್ಲಿ ಪಾಠ ಕೇಳುತ್ತಾ ಕೂತಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಛಾವಣಿ ಕುಸಿದುಬಿದ್ದು, 25 ಮಕ್ಕಳು ಗಾಯಗೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತರಗತಿಯ ವೇಳೆಯಲ್ಲೇ ಕಟ್ಟಡ ರಿಪೇರಿ ಕೆಲಸ ನಡೆಸಿದ್ದ ವೇಳೆ ಈ ಅನಾಹುತ ಸಂಭವಿಸಿದೆ.
ಹರಿಯಾಣದ ಸೋನಿಪತ್​ ಜಿಲ್ಲೆಯ ಗನ್ನೌರ್​ ತಹಸೀಲಿನ ಬಾಯಿ ಗ್ರಾಮದಲ್ಲಿ ಶಾಲೆಯೊಂದರ ಛಾವಣಿ ಮಳೆಯಿಂದಾಗಿ ಸೋರುವಂತಾಗಿತ್ತು. ಛಾವಣಿ ಸರಿಪಡಿಸಲು ರಿಪೇರಿ ಕಾರ್ಯ ಕೈಗೊಳ್ಳಲಾಗಿತ್ತು. ಒಂದು ಕೊಠಡಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳು ಪಾಠ ಕೇಳುತ್ತಾ ಇದ್ದರು. ಆ ಸಂದರ್ಭಕ್ಕೆ ಛಾವಣಿಯು ದಿಢೀರನೇ ಕುಸಿದು ಬಿತ್ತು. ತರಗತಿಯಲ್ಲಿದ್ದ 25 ಮಕ್ಕಳಿಗೆ ಮತ್ತು ರಿಪೇರಿ ಕೆಲಸ ಮಾಡುತ್ತಿದ್ದ ಮೂರು ಜನ ನಿರ್ಮಾಣ ಕಾರ್ಮಿಕರಿಗೆ ಗಾಯಗಳಾದವು. ಅವರಲ್ಲಿ 5 ಮಕ್ಕಳಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.(ಏಜೆನ್ಸೀಸ್)
ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!

ಸಿಧು ‘ಸೂಪರ್​ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್​ಗೆ ಕುತ್ತು ಎಂದ ಕ್ಯಾಪ್ಟನ್!

ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + thirteen =
Remember me
