ಮುಂಬೈ:ಎನ್‌ಸಿಬಿಯ ಮುಂಬೈ ವಿಭಾಗದ ಮಾಜಿ ಝೋನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕೋಟ್ಯಂತರ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್​ ಖಾನ್​ ನನ್ನು ಆರೋಪಿಯನ್ನಾಗಿ ಮಾಡುವುದನ್ನು ತಪ್ಪಿಸಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಎನ್‌ಸಿಬಿ ಮುಂಬೈ ವಿಭಾಗದ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ:ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..
ಸಮೀರ್ ವಿರುದ್ಧ ಸಿಬಿಐ ಈಗಾಗಲೇ ಒಂದು ಡ್ರಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದು ತಿಳಿದ ಸಂಗತಿಯೇ. ಸಮೀರ್ ಎನ್‌ಸಿಬಿ ಮುಂಬೈನ ವಲಯ ನಿರ್ದೇಶಕರಾಗಿದ್ದಾಗ ಡ್ರಗ್ ಗ್ಯಾಂಗ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್ಯನ್​ನನ್ನು ಅಕ್ಟೋಬರ್ 2021 ರಲ್ಲಿ ಬಂಧಿಸಲಾಯಿತು. ಆದರೆ ಈ ಪ್ರಕರಣದಲ್ಲಿ ಎನ್‌ಸಿಬಿ ಆರ್ಯನ್‌ಗೆ ಕ್ಲೀನ್‌ಚೆಟ್ ನೀಡಿತು. ಆ ನಂತರ ಸಮೀರ್ ವಿರುದ್ಧ ಹಲವು ಆರೋಪಗಳು ಬಂದಿದ್ದು, ವಲಯ ನಿರ್ದೇಶಕರ ಹುದ್ದೆಯಿಂದ ವರ್ಗಾವಣೆ ಮಾಡಿ ತನಿಖೆ ಆರಂಭಿಸಲಾಗಿತ್ತು.
‘ಅಟಲ್​ ಸೇತುವೆ ಮೇಲೆ ಮುಸ್ಸಂಜೇಲಿ ಮತ್ತೊಮ್ಮೆ ಪ್ರಯಾಣಿಸಬೇಕೆನಿಸ್ತಿದೆ’: ಆನಂದ್ ಮಹೀಂದ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twelve =
Remember me
