ಮುಂಬೈ:ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ ಒಂದು ಅಗ್ನಿಗೆ ಆಹುತಿಯಾಗಿದ್ದು, 25 ಮಂದಿ ಸಜೀವ ದಹನಗೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿರುವ ಬಸ್​ ಯವತ್ಮಾಲ್​ನಿಂದ ಪುಣೆಗೆ ತೆರಳುತ್ತಿತ್ತು. ಈ ಘಟನೆ ತಡರಾತ್ರಿ 2 ಗಂಟೆಗೆ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಹಾವು ಕಚ್ಚಿದ ಬಳಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ವ್ಯಕ್ತಿಗೆ ಮರುದಿನವೇ ಕಾದಿತ್ತು ಬಿಗ್​ ಶಾಕ್​: ತಪ್ಪಲಿಲ್ಲ ಸಾವು!
ಬುಲ್ಧಾನ ಜಿಲ್ಲೆಯ ಡೆಪ್ಯುಟಿ ಎಸ್​ಪಿ ಬಾಬುರಾವ್ ಮಹಾಮುನಿ ಮಾತನಾಡಿ, 25 ಶವಗಳನ್ನು ಬಸ್​ನಿಂದ ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು. 6-8 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಸ್ ಚಾಲಕ ಅವಘಡದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಟೈರ್ ಸ್ಫೋಟಗೊಂಡು ಬಸ್ ಪಲ್ಟಿಯಾಗಿ ಹೊತ್ತಿ ಉರಿದಿದೆ ಎಂದು ಬುಲ್ಧಾನ ಎಸ್ಪಿ ಸುನೀಲ್ ಕಡಸಾನೆ ಹೇಳಿದ್ದಾರೆ.
ಆಸ್ತಿ ವಿವರ ಸಲ್ಲಿಸಲು ನಿರ್ಲಕ್ಷ್ಯ: ಲೋಕಾಯುಕ್ತಕ್ಕೆ ಮಾಹಿತಿ ನೀಡಲು ಜನಪ್ರತಿನಿಧಿಗಳ ಹಿಂದೇಟು

ಇಂದಿನಿಂದ ಅನ್ನಭಾಗ್ಯ, ಗೃಹಜ್ಯೋತಿ: ಅಕ್ಕಿ ಬದಲು ಹಣ ವರ್ಗಾವಣೆ; ಉಚಿತ ವಿದ್ಯುತ್ ಆಗಸ್ಟ್ ಬಿಲ್​ಗೆ ಅನ್ವಯ

ಬಹಿರಂಗ ಟೀಕೆಗೆ ಬಿಜೆಪಿ ಬೀಗ: ಹೇಳಿಕೆ ಬಿಡಿ, ಪಕ್ಷ ಸಂಘಟಿಸಿ; ಪಕ್ಷದ ರಾಜ್ಯ ನಾಯಕರ ಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
