ತಿರುಪತಿ:ಕಲಿಯುಗದ ವೈಕುಂಠ, ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂದೇ ಖ್ಯಾತಿ ಪಡೆದಿರುವ ಆಂಧ್ರಪ್ರದೇಶದ ತಿರುಪತಿ- ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಒಂದೇ ಕುಟುಂಬದ ಮೂವರು 25 ಕಿಲೋ ತೂಕದ ಚಿನ್ನದ ಸರ ಧರಿಸಿ ಬಂದಿದ್ದರು. ಇದನ್ನು ನೋಡಿದ ಭಕ್ತರು ನಿಬ್ಬೆರಗಾದರು.
ಇದನ್ನೂ ಓದಿ:ರೀಲ್ಸ್​ಗಾಗಿ ರಸ್ತೆ ಮೇಲೆ ಕಂತೆ ಕಂತೆ ಹಣ ಎಸೆದ ಯುವಕ! ಬಳಿಕ ನಡೆಯಿತು ನೋಡಿ ಹೈಡ್ರಾಮಾ!!
ತಿರುಪತಿ ತಿಮ್ಮಪ್ಪನಿಗೂ ಬಂಗಾರಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಚಿನ್ನಾಭರಣ ಧರಿಸುವುದು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಇವೆರಡರ ಕಾಂಬಿನೇಷನ್​ ಎಂಬಂತೆ ವೈರಲ್​ ಆಗುತ್ತಿರುವ ವೀಡಿಯೋದಲ್ಲಿ ಕುಟುಂಬದ ಮೂವರು ಕೊರಳಲ್ಲಿ 25 ಕೆ.ಜಿ ತೂಕದ ಚಿನ್ನದ ಸರ ಹಾಕಿ ಗಮನಸೆಳೆದಿದ್ದಾರೆ.
ಮಾಹಿತಿ ಪ್ರಕಾರ, ಪುಣೆಯ ಇಬ್ಬರು ಪುರುಷರು, ಓರ್ವ ಮಹಿಳೆ ಮತ್ತು ಮಗುನನ್ನೊಳಗೊಂಡ ಕುಟುಂಬ ಆಗಸ್ಟ್ 22ರಂದು ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ 25 ಕೆಜಿ ಚಿನ್ನದ ಸರವನ್ನು ಧರಿಸಿ ಬಂದು ಭಗವಂತನ ದರ್ಶನ ಪಡೆದಿತ್ತು. ತಿರುಮಲದಲ್ಲಿ ದೇವಸ್ಥಾನದ ಹೊರಗೆ ಪುರುಷರು ಕುತ್ತಿಗೆಯನ್ನು ಸರಪಳಿಯಂತಹ ಬಂಗಾರದ ಸರಗಳಿಂದ ಸುತ್ತಿಕೊಂಡಿರುವುದು ಕಂಡುಬಂದಿದೆ. ಬ್ರಾಂಡೆಡ್ ಸನ್ ಗ್ಲಾಸ್ ಕೂಡ ಹಾಕಿಕೊಂಡಿದ್ದಾರೆ.
ವರ್ಷವಿಡೀ ಭಕ್ತರು ನೂರಾರು ಕೆಜಿ ಚಿನ್ನದ ಕಾಣಿಕೆಗಳನ್ನು ಬಾಲಾಜಿಗೆ ಸಮರ್ಪಿಸುತ್ತಾರೆ. ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಲ್ಲಿ ಚಿನ್ನದ ಆಭರಣಗಳ ರೂಪದಲ್ಲಿ ಸಂಪತ್ತಿನ ಇಂತಹ ಪ್ರದರ್ಶನಗಳು ಸಾಮಾನ್ಯವಲ್ಲ. ಭಗವಂತನಿಗೆ ಕೃತಜ್ಞತೆ ಮತ್ತು ಗೌರವದ ಸಂಕೇತವಾಗಿ ಈ ದೇವಾಲಯಕ್ಕೆ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆದರೆ ಶ್ರೀಮಂತ ಕುಟುಂಬದ ಸದಸ್ಯರು ಕೋಟ್ಯಂತರ ರೂ.ಬೆಲೆಬಾಳುವ ಆಭರಣ ಧರಿಸಿ ಬಂದಿರುವುದು ಎಲ್ಲರ ಗಮನಸೆಳೆದಿದೆ. ಆದರೆ ಅವರ ಹೆಸರು ಪತ್ತೆಯಾಗಿಲ್ಲ.
ಅನಿಲ್​ ಅಂಬಾನಿ ಮೇಲೆ 5ವರ್ಷ ನಿಷೇಧ ಹೇರಿದ ಸೆಬಿ..25ಕೋಟಿ ದಂಡ! ಕಾರಣ ಇದೇ ನೋಡಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 + eight =
Remember me
