ಜಿನಿವಾ:ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಗಂಡನ ಚಿಂತೆ ಎಂಬ ಗಾದೆಯನ್ನು ನೆನಪಿಸುವಂಥ ವಾತಾವರಣವನ್ನು ಕೋವಿಡ್​-19 ಕೆಲವರಿಗೆ ತಂದಿಟ್ಟಿತ್ತು ಎಂದರೂ ಅಚ್ಚರಿ ಏನಿಲ್ಲ. ಏಕೆಂದರೆ ಬಹುತೇಕ ಎಲ್ಲರೂ ಕರೊನಾಗೆ ಯಾವಾಗ ಲಸಿಕೆ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದರೆ ಒಂದಷ್ಟು ಮಂದಿಗೆ ಮಾತ್ರ ಅದರದ್ದೇ ಚಿಂತೆ ಆಗಿತ್ತಂತೆ!
ಹೌದು.. ದೇಶದ ಬಹುತೇಕ ಮಂದಿ ಲಸಿಕೆ ಸಿಗಲಿ ಎಂಬ ಆಶಯದಲ್ಲಿದ್ದರೆ ಒಂದಷ್ಟು ಮಂದಿ ಅದು ಸಿಗಲಿ ಎಂಬ ಆತುರದಲ್ಲಿದ್ದರಂತೆ. ಅರ್ಥಾತ್​, ಗರ್ಭನಿರೋಧಕ ಮಾತ್ರೆ ಹಾಗೂ ಕಾಂಡಂ ಸಿಗದೆ ಭಾರತದಲ್ಲಿ ಹಲವರು ಪರದಾಡಿದ್ದರು ಎಂದು ಸಮೀಕ್ಷೆಯೊಂದು ಹೇಳಿದೆ.
ಜಾಯಿಂಟ್ ಯುನೈಟೆಡ್​ ನೇಷನ್ಸ್​ ಪ್ರೋಗ್ರಾಂ ಆನ್​ ಎಚ್​ಐವಿ/ಏಯ್ಡ್ಸ್​ ವರದಿ ಪ್ರಕಾರ ಭಾರತದಲ್ಲಿ 2.5 ಕೋಟಿ ದಂಪತಿಗಳಿಗೆ ಗರ್ಭನಿರೋಧಕ ಸಾಮಗ್ರಿಗಳು ಸಿಗದೇ ಪೇಚಿಗೆ ಸಿಲುಕಿದ್ದರು ಎಂದು ಈ ಸಮೀಕ್ಷೆ ಹೇಳಿದೆ. ಪರಿಣಾಮ, ಶಿಶು ಜನನ ಪ್ರಮಾಣ ಸದ್ಯದಲ್ಲೇ ಹೆಚ್ಚಾಗುವ ಲಕ್ಷಣಗಳಿವೆ ಎಂದೂ ಈ ಸಮೀಕ್ಷೆ ಅಂದಾಜಿಸಿದೆ. (ಏಜೆನ್ಸೀಸ್​)
ಅಪ್ಪನನ್ನು ಮರಕ್ಕೆ ಕಟ್ಟಿ ಬರ್ಬರವಾಗಿ ಹತ್ಯೆ ಮಾಡಿದ ಮಗ-ಸೊಸೆ; ಕಾರಣವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
