ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 85 ಸಾವಿರದ ಗಡಿ ದಾಟಿದೆ. ಮೂರನೇ ಅವಧಿಯ ಲಾಕ್​ಡೌನ್​ ಮುಕ್ತಾಯದ ಹಂತದಲ್ಲಿದೆ. ಈ ಮಧ್ಯೆ ಎಲ್ಲ ರಾಜ್ಯಗಳಲ್ಲೂ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಲೇ ಇರುವುದು ಆತಂಕ ಮೂಡಿಸುತ್ತಿದೆ.
ಹೈದರಾಬಾದ್​ನ ಮದನ್ನಪೇಟೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿರುವ ಒಟ್ಟು 25 ಮಂದಿಯಲ್ಲಿ ಇಂದು ಕರೊನಾ ದೃಢಪಟ್ಟಿದ್ದು, ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಸಕ್ರಿಯ ಕರೊನಾ ಕೇಸ್​ಗಳು 559, ಮರಣ ಸಂಖ್ಯೆ 36; 13 ಮಂದಿ ಐಸಿಯುವಿನಲ್ಲಿ
ಕರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೇ ಈ 25 ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಅಪಾರ್ಟ್​ಮೆಂಟ್​ನ ಒಟ್ಟು 50 ನಿವಾಸಿಗಳಿಗೆ ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​ನಿಂದ ಕೊವಿಡ್​-19 ಟೆಸ್ಟ್ ಮಾಡಲಾಗಿತ್ತು. ಅವರಲ್ಲಿ ಈಗ 11 ತಿಂಗಳ ಮಗು, ಓರ್ವ ಗರ್ಭಿಣಿ ಸೇರಿ 25 ಮಂದಿಗೆ ಪಾಸಿಟಿವ್​ ಬಂದಿದೆ.
ಇದೀಗ ಮದನ್​ಪೇಟೆ ಸುತ್ತಮುತ್ತ ಎಲ್ಲರನ್ನೂ ಸ್ಕ್ರೀನಿಂಗ್​ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ಥಳದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ದೂರದಿಂದಲೇ ಮಕ್ಕಳತ್ತ ಕೈ ಬೀಸಿ ಕಣ್ಣೀರಾದ ಪಾಲಕರು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
