ನವದೆಹಲಿ:ದೇಶದಲ್ಲಿ 2018-20ರ ಅವಧಿಯಲ್ಲಿ ನಿರುದ್ಯೋಗ ಮತ್ತು ಸಾಲದ ಸುಳಿಗೆ ಸಿಕ್ಕು ಪ್ರಾಣತೆತ್ತವರ ಸಂಖ್ಯೆ 25,000ಕ್ಕೂ ಹೆಚ್ಚು ಎಂಬ ಅಂಶವನ್ನು ಸರ್ಕಾರ ರಾಜ್ಯಸಭೆಯ ಮುಂದಿರಿಸಿದೆ. ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೊ (ಎನ್​ಸಿಆರ್​ಬಿ) ದತ್ತಾಂಶ ಪ್ರಕಾರ, ನಿರುದ್ಯೋಗ ಸಂಬಂಧ ಆತ್ಮಹತ್ಯೆ ಪ್ರಕರಣ 2020ರಲ್ಲಿ ಗರಿಷ್ಠ ಅಂದರೆ 3,548 ತಲುಪಿತ್ತು ಎಂದು ಸರ್ಕಾರ ಹೇಳಿದೆ.
ರಾಜ್ಯಸಭೆಯಲ್ಲಿ ಬಜೆಟ್ ಕುರಿತ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. 2018 ಮತ್ತು 2020ರ ಅವಧಿಯಲ್ಲಿ 9,140 ಜನ ನಿರುದ್ಯೋಗ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2018ರಲ್ಲಿ ನಿರುದ್ಯೋಗಕ್ಕೆ 2,741 ಮಂದಿ, 2019ರಲ್ಲಿ 2,851 ಜನ ಆತ್ಮಹತ್ಯೆ ಮಾಡಿಕೊಂಡರು. 16,091 ಜನ ದಿವಾಳಿ ಅಥವಾ ಸಾಲದ ಸುಳಿಗೆ ಸಿಲುಕಿ ಪ್ರಾಣತೆತ್ತರು. ಈ ಪೈಕಿ 2018ರಲ್ಲಿ 4970 ಜನ, 2019ರಲ್ಲಿ 5908, 2020ರಲ್ಲಿ 5213 ಮಂದಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರು ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲಿಖಿತ ಉತ್ತರದಲ್ಲಿ ತಿಳಿಸಿದರು. ಇದಕ್ಕೆ ಪರಿಹಾರವಾಗಿ ಸರ್ಕಾರವು ಜನರ ಮಾನಸಿಕ ಆರೋಗ್ಯ ಸುಧಾರಣೆ ಕ್ರಮ ಮತ್ತು ಉದ್ಯೋಗ ಸೃಜನೆಯ ಕಡೆಗೆ ಹೆಚ್ಚಿನ ಗಮನಹರಿಸುತ್ತಿದೆ ಎಂದು ರಾಯ್ ಸ್ಪಷ್ಟಪಡಿಸಿದರು.
ಬಜೆಟ್ ಬಡವರಿಗಲ್ಲ ವಿಪಕ್ಷ ಸದಸ್ಯರ ಟೀಕೆ:ಬಜೆಟ್ ಬಡವರಿಗೆ ಅಲ್ಲ. ಕೃಷಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಗಮನಹರಿಸ ಬೇಕಾಗಿತ್ತು ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಸಿಪಿಐ ನಾಯಕ ಬಿನೋಯ್ ವಿಶ್ವಮ್ ‘ಮುಂಗಡಪತ್ರ ಒಂದು ‘ಫೇಲ್ಯೂರ್’. ಅದು ದೊಡ್ಡ ಕಾರ್ಪೆರೇಟ್ ಹೌಸ್​ಗಳಿಗೆ ಪ್ರಯೋಜನ ಮಾಡಿಕೊಡುವ ಒಂದಂಶದ ಕಾರ್ಯಸೂಚಿ ಎಂದು ಟೀಕಿಸಿದರು. ಟಿಆರ್​ಎಸ್ ನಾಯಕ ಕೆ.ಆರ್. ಸುರೇಶ್ ರೆಡ್ಡಿ ಕೂಡ ವಾಗ್ದಾಳಿ ನಡೆಸಿ, ಕೇಂದ್ರ ವಿತ್ತ ಸಚಿವರು ಕೇವಲ 90 ನಿಮಿಷ ಭಾಷಣ ಮಾಡಿದ್ದರಿಂದ 90 ಕೋಟಿ ಭಾರತೀಯರು ಬಜೆಟ್​ನಿಂದ ಹೊರಗುಳಿದರು. ಈ ತಥಾಕಥಿತ ಪ್ರಗತಿಪರ ಬಜೆಟ್​ನಲ್ಲಿ ಬಹುಸಂಖ್ಯಾತ ಬಡವರನ್ನು ಪರಿಗಣಿಸಿಯೇ ಇಲ್ಲ. ಕೃಷಿ ಕ್ಷೇತ್ರಕ್ಕೆ ನೀಡಿದ ಆದ್ಯತೆಯೂ ಸಾಕಾಗಿಲ್ಲ ಎಂದು ಹೇಳಿದರು.
ಅಮೃತ ಕಾಲವಲ್ಲ, ರಾಹುಕಾಲ!:ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಬುಧವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶ ಅಮೃತ ಕಾಲದಲ್ಲಿ ಇಲ್ಲ. 2014ರಿಂದೀಚೆಗೆ ದೇಶಕ್ಕೆ ರಾಹುಕಾಲ ಬಡಿದಿದೆ. ಕೇಂದ್ರ ಮುಂಗಡಪತ್ರದಲ್ಲಿ ವಿಷನ್ ಇರಲಿಲ್ಲ. ದೀರ್ಘಾವಧಿ ಯೋಜನೆಗಳು ಇರಲಿಲ್ಲ ಎಂದು ಟೀಕಿಸಿದರು.
ಸೋಷಿಯಲಿಸಂ ನೆಪದಲ್ಲಿ ಕಾಂಗ್ರೆಸ್ ಸರ್ಕಾರಗಳು ನಿರಂತರ ವಿವೇಚನಾ ರಹಿತವಾಗಿ ಕೆಲಸ ಮಾಡಿದ್ದರ ಪರಿಣಾಮ ದೇಶ ಬಡತನಕ್ಕೆ ಜಾರಿತು. ವಂಶಾಡಳಿತದ ವಿನ್ಯಾಸಕ್ಕೆ ಭಾರತವನ್ನು ತರುವುದಕ್ಕೆ ಅದು ಪ್ರಯತ್ನ ಮಾಡಿತ್ತು. ನಿರುದ್ಯೋಗ ಕುರಿತು ವಿಪಕ್ಷಗಳು ಆಧಾರ ರಹಿತವಾಗಿ ವಿಷಯ ಮಂಡಿಸುತ್ತಿವೆ. ಉದ್ಯೋಗ ಸೃಜನೆ ಆಗುತ್ತಿರುವುದಕ್ಕೆ ಹೂಡಿಕೆಗಳು, ಯೂನಿಕಾರ್ನ್, ನವೋದ್ಯಮಗಳ ಸ್ಥಾಪನೆ ಆಗುತ್ತಿರುವುದೇ ಸಾಕ್ಷಿ.
|ತೇಜಸ್ವಿ ಸೂರ್ಯಬೆಂಗಳೂರು ದ.ಲೋಕಸಭೆ ಸದಸ್ಯ
ರಾಜಕೀಯ ಲಾಭಕ್ಕೆ ಸಂಸತ್ ಬಳಸಿದ ಪ್ರಧಾನಿ ಎಂದ ಮಲ್ಲಿಕಾರ್ಜುನ ಖರ್ಗೆ:ಕಾಂಗ್ರೆಸ್ ಪಕ್ಷವನ್ನೇ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಅವರು ಸಂಸತ್ತನ್ನು ರಾಜಕೀಯ ಲಾಭಕ್ಕಾಗಿ ಬಳಸಿದರು ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಚೀನಾದ ಅತಿಕ್ರಮಣ, ಹಣದುಬ್ಬರ, ನಿರುದ್ಯೋಗ, ಪೆಗಾಸಸ್ ವಿವಾದ, ಕೋವಿಡ್ ನಿರ್ವಹಣೆ ಮುಂತಾದ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಶ್ನೆಗಳನ್ನು ಮುಂದಿರಿಸಿತ್ತು. ಆದರೆ, ಈ ಯಾವ ವಿಚಾರಗಳ ಬಗ್ಗೆಯೂ ಪ್ರಧಾನಿ ಏನೂ ಹೇಳಲಿಲ್ಲ. ಅವರ ಮಾತುಗಳು ಆ ಹುದ್ದೆಗೆ ಶೋಭೆ ತರುವಂಥದ್ದಲ್ಲ. ಪಂಚ ರಾಜ್ಯ ಚುನಾವಣೆ ಕಾರಣ ಅವರು, ಕಾಂಗ್ರೆಸ್, ಮಹಾತ್ಮ ಗಾಂಧಿ, ಪಂಡಿತ್ ನೆಹರು, ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದನ್ನು ಸಂಸತ್ತಿನ ಹೊರಗೆ ಮಾಡಬಹುದಾಗಿತ್ತು ಎಂದರು.
ತಮಿಳು ಪ್ರಶ್ನೆ ಹಿಂದಿ ಉತ್ತರ:ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಡಿಎಂಕೆ ಸದಸ್ಯ ಎ ಗಣೇಶ ಮೂರ್ತಿ, ಎಫ್​ಡಿಐ ಒಳಹರಿವಿಗೆ ಸಂಬಂಧಿಸಿದ ಪೂರಕ ಪ್ರಶ್ನೆಯನ್ನು ತಮಿಳು ಭಾಷೆಯಲ್ಲಿ ಕೇಳಿದರು. ಇದಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಿಂದಿಯಲ್ಲಿ ಉತ್ತರ ನೀಡಿದ್ದರು. ನಾನು ಇಂಗ್ಲಿಷ್​ನಲ್ಲಿ ಪ್ರಶ್ನೆ ಕೇಳಿದರೆ ಸಚಿವರು ಇಂಗ್ಲಿಷ್​ನಲ್ಲೇ ಉತ್ತರ ಕೊಡುತ್ತಾರೆ. ತಮಿಳು ಭಾಷೆಯಲ್ಲಿ ಕೇಳಿದರೆ ಹಿಂದಿಯಲ್ಲಿ ಉತ್ತರಿಸುತ್ತಾರೆಂದು ಸದಸ್ಯರು ಪ್ರತಿಕ್ರಿಯಿಸಿದರು. ಇದು ಗಂಭೀರ ವಾಗ್ವಾದಕ್ಕೆ ಕಾರಣವಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
