ನವದೆಹಲಿ:ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​, ಟ್ವಿಟರ್​ ಕಂಪನಿಯ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಅಲ್ಲಿನ ಉದ್ಯೋಗಿಗಳ ಉದ್ಯೋಗ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಕಂಪನಿಯ 7500 ಉದ್ಯೋಗಿಗಳ ಪೈಕಿ ಅರ್ಧಕರ್ಧ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿರುವ ಎಲಾನ್ ಮಸ್ಕ್​ ಈಗಾಗಲೇ ವಜಾ ಪ್ರಕ್ರಿಯೆ ಆರಂಭಿಸಿದ್ದಾರೆ. ಭಾರತದಲ್ಲಿಯೂ ಶುಕ್ರವಾರದಿಂದ ಉದ್ಯೋಗಿಗಳ ಕಡಿತ ಶುರು ಮಾಡಿದ್ದಾರೆ.
ಈಗಾಗಲೇ ಕೆಲವು ಉದ್ಯೋಗಿಗಳು ಕೆಲಸದಿಂದ ವಜಾಗೊಂಡಿರುವ ಕುರಿತಾಗಿ ಮೇಲ್​ ಸ್ವೀಕರಿಸಿದ್ದು, ಈ ಬಗ್ಗೆ ಕೆಲವರು ತಮ್ಮ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲಸದಿಂದ ದಿಢೀರ್​ ವಜಾ ಮಾಡಿರುವುದು ಅನೇಕ ಆಘಾತ ತಂದಿದೆ. ಕೆಲವರು ಕಣ್ಣೀರು ಸಹ ಹಾಕಿದ್ದಾರೆ. ಆದರೆ, 25 ವರ್ಷದ ಯಶ್​ ಅಗರ್ವಾಲ್​ ಎಂಬುವರು ಕೆಲಸದಿಂದ ವಜಾಗೊಂಡ ಕೂಡಲೇ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಡಿರುವ ಟ್ವೀಟ್​, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲಸದಿಂದ ವಜಾಗೊಂಡಿರುವ ಬಗ್ಗೆ ಕಿಂಚಿತ್ತೂ ಬೇಸರಪಟ್ಟುಕೊಳ್ಳದೇ ಟ್ವಿಟರ್​ ಕಂಪನಿಗೆ ಯಶ್​ ಅಗರ್ವಾಲ್​ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟರ್​ ಲೋಗೋ ಇರುವ ಎರಡು ದಿಂಬುಗಳನ್ನು ಕೈಯಲ್ಲಿ ಹಿಡಿದಿರುವ ಪೋಟೋ ಪೋಸ್ಟ್​ ಮಾಡಿರುವ ಅಗರ್ವಾಲ್​, ಇದೀಗ ತಾನೇ ಕೆಲಸದಿಂದ ವಜಾಗೊಂಡೆ. ಟ್ವಿಟರ್​, ಈ ತಂಡದ ಹಾಗೂ ಸಂಸ್ಕೃತಿಯ ಭಾಗವಾಗಿದ್ದು, ಇದುವರೆಗಿನ ಶ್ರೇಷ್ಠ ಸವಲತ್ತು ಮತ್ತು ಇದು ಒಂದು ಸಂಪೂರ್ಣ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ನೀವು ಕೆಲಸ ಮಾಡಿದ ಸ್ಥಳವನ್ನು ಪ್ರೀತಿಸಿ (#LoveWhereYouWorked) ಮತ್ತು ಟ್ವಿಟರ್​ ಅನ್ನು ಪ್ರೀತಿಸಿ (LoveTwitter) ಎಂಬ ಹ್ಯಾಶ್​ಟ್ಯಾಗ್​ ಸಹ ಹಾಕಿದ್ದಾರೆ.
Just got laid off.Bird App, it was an absolute honour, the greatest privilege ever to be a part of this team, this culture 🫡💙#LoveWhereYouWorked#LoveTwitterpic.twitter.com/bVPQxtncIg
— Yash Agarwal✨ (@yashagarwalm)November 4, 2022

ಅಗರ್ವಾಲ್​ ಹಾಕಿರುವ ಫೋಟೋ ಟ್ವಿಟರ್​ ಕಚೇರಿಯಲ್ಲಿ ತೆಗೆದಿರುವಂತೆ ಕಾಣುತ್ತಿದೆ. ಆತ ಸಾರ್ವಜನಿಕ ನೀತಿ ತಂಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಗರ್ವಾಲ್​ ಮಾಡಿರುವ ಟ್ವೀಟ್​ ಇದೀಗ ವೈರಲ್​ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಈವರೆಗೂ 43 ಸಾವಿರಕ್ಕೂ ಅಧಿಕ ಲೈಕ್ಸ್​​ಗಳನ್ನು ಪಡೆದುಕೊಂಡಿದೆ ಮತ್ತು 3 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್​ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದು, ಅಗರ್ವಾಲ್​ ಅವರ ಧನ್ಯತಾಭಾವಕ್ಕೆ ಫಿದಾ ಆಗಿದ್ದಾರೆ.
ಜೀವನದ ಕಡೆಗೆ ಈ ಸಕಾರಾತ್ಮಕ ದೃಷ್ಟಿಕೋನವನ್ನು ನೋಡುವುದು ತುಂಬಾ ಅಪರೂಪ. ನೀವು ಆಯ್ಕೆಮಾಡುವ ಎಲ್ಲದರಲ್ಲೂ ನೀವು ಸಾಟಿಯಿಲ್ಲದ ಯಶಸ್ಸು ಮತ್ತು ಸಂತೋಷವನ್ನು ಬಯಸುತ್ತೇವೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು ನೆಟ್ಟಿಗರು ಅಗರ್ವಾಲ್​ಗೆ ಶುಭಕೋರಿದ್ದಾರೆ.
ಅಂದಹಾಗೆ ಟ್ವಿಟರ್ ಖರೀದಿ ಬಳಿಕ ಸುಮಾರು 3,700 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿರುವ ಮಾಲೀಕ ಎಲಾನ್ ಮಸ್ಕ್ ಭಾರತದಲ್ಲಿ ಶುಕ್ರವಾರದಿಂದ ಉದ್ಯೋಗಿಗಳ ಕಡಿತ ಶುರು ಮಾಡಿದ್ದಾರೆ. ಎಷ್ಟು ಮಂದಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ ಮಾರಾಟ, ಎಂಜಿನಿಯರ್​ಗಳು ಮತ್ತು ಪಾಲುದಾರಿಕೆ ವಿಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಟ್ವಿಟರ್ ಭಾರತದಲ್ಲಿನ ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ. 50ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿದೆ. ಆದರೆ ಸೇಲ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಒಂದಷ್ಟು ಜನ ಕೆಲಸ ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟ್ವಿಟರ್ ಇಂಡಿಯಾ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟ್ವಿಟರ್ ವಿರುದ್ಧ ಮೊಕದ್ದಮೆಟ್ವಿಟರ್​ನ ಹೊಸ ಮಾಲೀಕ ಎಲಾನ್ ಮಸ್ಕ್ ವಿರುದ್ಧ ಸ್ಯಾನ್​ಫ್ರಾನ್ಸಿಸ್ಕೊ ಫೆಡರಲ್ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಲಾಗಿದೆ. ಕಂಪನಿಯು ಫೆಡರಲ್ ಮತ್ತು ಕ್ಯಾಲಿಫೋರ್ನಿಯಾ ಕಾನೂನನ್ನು ಉಲ್ಲಂಘಿಸಿದ್ದು, ಸಾಕಷ್ಟು ಸೂಚನೆ ನೀಡದೆ ತನ್ನ ಒಟ್ಟು ಉದ್ಯೋಗ ಪಡೆಯಲ್ಲಿ ಅರ್ಧದಷ್ಟು ಮಂದಿಯನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ ಎಂದು ವಕೀಲ ಶಾನನ್ ಲಿಸ್ -ರಿಯೊರ್ಡಾನ್ ದೂರು ದಾಖಲಿಸಿದ್ದಾರೆ. ಫೆಡರಲ್ ವರ್ಕರ್ ಅಡ್ಜಸ್​ವೆುಂಟ್ ಮತ್ತು ಮರು ತರಬೇತಿ ಅಧಿಸೂಚನೆ ಕಾಯಿದೆಯಲ್ಲಿ ಕನಿಷ್ಠ 60 ದಿನಗಳ ಮುಂಗಡ ನೋಟಿಸ್ ನೀಡದೆ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಟ್ವಿಟರ್ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಟ್ವಿಟರ್ ಉದ್ಯೋಗಿಗಳ ವಜಾ ಪ್ರಕ್ರಿಯೆ ಶುರು: ಭಾರತದಲ್ಲೂ ಶೇ. 50 ನೌಕರರಿಗೆ ಗೇಟ್​ಪಾಸ್

ಕೊಹ್ಲಿ ಮಾಡಿದ್ದು ನೂರಕ್ಕೆ ನೂರರಷ್ಟು ತಪ್ಪು! ಟೀಮ್​ ಇಂಡಿಯಾ ಮಾಜಿ ಆಟಗಾರನ ಸ್ಫೋಟಕ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nine =
Remember me
