ಚೆನ್ನೈ:‘ಪೊಂಗಲ್’​ಗೆ 2,500 ರೂ. ಕ್ಯಾಷ್​.. ಜೊತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಮತ್ತು ಒಂದಿಡೀ ಕಬ್ಬು. ಇವಿಷ್ಟನ್ನೂ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ. ಅಷ್ಟಕ್ಕೂ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಇವೆಲ್ಲ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಹಾಗಾದರೆ ಇವನ್ನೆಲ್ಲ ಎಲ್ಲರಿಗೂ ಕೊಟ್ಟು ಬಿಡುತ್ತಾರಾ ಎಂದು ಕೇಳಿದರೆ, ಉತ್ತರ ‘ಇಲ್ಲ’ ಎಂಬುದೇ ಆಗಿರುತ್ತದೆ. ಏಕೆಂದರೆ ಇವೆಲ್ಲ ಸೌಲಭ್ಯ ಪಡೆಯಲು ಪಡಿತರ ಚೀಟಿ ಇದ್ದವರು ಮಾತ್ರ ಫಲಾನುಭವಿಗಳಾಗಿರುತ್ತಾರೆ. ಪಡಿತರ ಚೀಟಿ ಇದ್ದು ಅಕ್ಕಿ ಪಡೆಯಲು ಅರ್ಹರಾಗಿರುವವರೆಲ್ಲ ಈ ಸೌಲಭ್ಯ ಪಡೆಯಬಹುದು ಎಂಬುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.
ಇಂದಿನ ಸುದ್ದಿ:ಮದುವೆಯಾದ ಅಕ್ಕನ ಮೇಲೇ ಲೈಂಗಿಕ ದೌರ್ಜನ್ಯವೆಸಗಿದ ತಮ್ಮ! ಪ್ರಶ್ನಿಸಿದ್ದಕ್ಕೆ ಅಮ್ಮನ ಮೇಲೂ ಹಲ್ಲೆ!
ಅಂದಹಾಗೆ ಇಂಥದ್ದೊಂದು ಭರವಸೆ ನೀಡಿರುವುದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ. ತಮಿಳುನಾಡಿನಲ್ಲಿ ಪೊಂಗಲ್ ಎಂದರೆ ಹಬ್ಬದ ಪ್ರಯುಕ್ತ 2021ರ ಜ. 4ರಿಂದಲೇ ಈ ನಗದು ಕೊಡುವ ಯೋಜನೆ ಜಾರಿಗೆ ಬರಲಿದ್ದು, ಪಡಿತರ ಚೀಟಿ ಅಕ್ಕಿ ಪಡೆಯಲು ಅರ್ಹರಿರುವ ಎಲ್ಲ ಸಾರ್ವಜನಿಕರೂ ಈ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಇದರಿಂದ ಪಡಿತರ ಚೀಟಿ ಹೊಂದಿರುವ, ರಾಜ್ಯದ 2.6 ಕೋಟಿ ಮಂದಿಗೆ ತಲಾ 2,500 ರೂ. ಸಿಗಲಿದೆ ಎಂದಿದ್ದಾರೆ.
ತಮಿಳರಿಗೆ ಜ. 14ರ ಪೊಂಗಲ್ ಹಬ್ಬ ಅತಿ ಪ್ರಮುಖವಾದುದು. ಕಳೆದ ವರ್ಷ ಈ ಹಬ್ಬದಂದು 1 ಸಾವಿರ ರೂ. ನಗದು ನೀಡಲಾಗಿತ್ತು. ಈ ಸಲ ಒಂದೂವರೆ ಸಾವಿರ ರೂ. ಹೆಚ್ಚಿಸಲಾಗಿದ್ದು, ಒಟ್ಟು 2,500 ರೂ. ನೀಡಲಿದ್ದೇವೆ. ಜತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಹಾಗೂ ಒಂದಿಡೀ ಕಬ್ಬನ್ನು ಕೂಡ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಇಂದಿನ ಸುದ್ದಿ:VIDEO| ಟ್ರಾಫಿಕ್​ ಪೊಲೀಸರ ಲಂಚದ ಕರಾಮತ್ತು! ಹೇಗೆಲ್ಲ ದುಡ್ಡನ್ನ ಜೇಬಿಗಿಳಿಸ್ತಾರೆ ನೋಡಿ!
ವಿದ್ಯಾರ್ಥಿಗಳೇ ಹೊಸ ವರ್ಷಕ್ಕೆ ಶಾಲೆಗೆ ಹೋಗಲು ರೆಡಿಯಾಗಿ, ಬೇಸಿಗೆ ರಜೆ ಆಸೆ ಬಿಟ್ಬಿಡಿ!

ಲಗ್ನ ಪತ್ರಿಕೆ ಜತೆ ವೈನ್​ ಬಾಟಲ್​, ಸ್ನಾಕ್ಸ್​ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!

ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ

ಗೋಮಾಂಸ ಜಟಾಪಟಿ: ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದ ಕೊಡವರು

ಪರ ಸ್ತ್ರೀಯರಿಗೆ ಅಶ್ಲೀಲ ಚಿತ್ರ ಕಳುಹಿಸಿ ಸಿಕ್ಕಿಬಿದ್ದ ಸಿನಿಮಾ ನಿರ್ಮಾಪಕ! ಈ ರಾಸಲೀಲೆ ಪ್ರಶ್ನಿಸಿದ ಪತ್ನಿ ಕತೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 8 =
Remember me
