ಹರಿಯಾಣ:ಗುರುಗಾಂವ್​ ಕನ್ನಡ ಸಂಘವು ಈ ಸಲ 25ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ರಜತ ಮಹೋತ್ಸವದ ಸಂಭ್ರಮವನ್ನು ಕಂಡಿದೆ. ಗುರುಗ್ರಾಮ (ಗುರುಗಾಂವ್​) ಕನ್ನಡ ಸಂಘವು ಸೆ. 19ರಿಂದ 24ರ ವರೆಗೆ ಗಣೇಶೋತ್ಸವವನ್ನು ಆಚರಿಸಿತು.
ಗುರುಗ್ರಾಮದ ನ್ಯೂ ಕಾಲನಿಯ ರಾಧಾಕೃಷ್ಣ ಮಂದಿರದಲ್ಲಿ ಸೆ. 19ರ ಮಂಗಳವಾರ ಬೆಳಗ್ಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆರು ದಿನಗಳ ಕಾಲ ಅಪಾರ ಭಕ್ತ ಸಮೂಹವನ್ನು ಭಕ್ತಿಯಲ್ಲಿ ಲೀನವಾಗುವಂತೆ ಮಾಡಿದ ಈ ಗಣೇಶನನ್ನು ಸೆ. 24ರಂದು ಬಸಾಯ್ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಆರೂ ದಿನಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಗುರುಗಾಂವ್ ಕನ್ನಡ ಗೃಹಿಣಿಯರು ವಿವಿಧ ರೀತಿಯ ಉಪಾಹಾರಗಳು, ತಿನಿಸುಗಳು ಮತ್ತು ಪ್ರಸಾದಗಳನ್ನು ಮಾಡಿ ಪ್ರತಿದಿನ ಪೂಜೆಗೆ ಆಗಮಿಸುತ್ತಿದ್ದ ಉತ್ತರ ಭಾರತೀಯರ ಮನಸ್ಸು ಗೆದ್ದರು. ಅವರು ಕನ್ನಡಿಗರ ಸಂಸ್ಕೃತಿ-ಸಂಪ್ರದಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ್ ಅವರು, ಈ ಗಣೇಶೋತ್ಸವದ ವಿಶೇಷವಾಗಿ ಚಿತ್ರನಟ ದೊಡ್ಡಣ್ಣ ಅವರನ್ನು ಕರೆದುಕೊಂಡು ಬಂದು, ಗುರುಗಾಂವ್ ಕನ್ನಡ ಸಂಘದ ಪದಾಧಿಕಾರಿಗಳನ್ನು ಪರಿಚಯ ಮಾಡಿಸಿದರು. ಅವರೊಂದಿಗೆ ಕನ್ನಡವೇ ಸತ್ಯ ರಂಗಣ್ಣ ಮತ್ತು ಮತ್ತೊಬ್ಬ ಚಲನಚಿತ್ರ ನಿರ್ಮಾಪಕರೂ ಇದ್ದರು‌.
ಶನಿವಾರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಗಾಯಕರಿಂದ ಗಾಯನ, ಮಕ್ಕಳಿಂದ ನರ್ತನ, ಸಾಯಿಪ್ರಸಾದ್​ ಅವರಿಂದ ಕೊಳಲುವಾದನವಿತ್ತು. ಭಾರತಿ ತಿಮ್ಮಪ್ಪಯ್ಯ ಅವರು ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯಾಖ್ಯಾನ ಮಾಡಿದರು. ಅವರಿಗೆ ಉಪಾಧ್ಯಕ್ಷ ರಾಜಕುಮಾರ ನಿಲೂರ ಮಾರ್ಗದರ್ಶನ ಮಾಡಿದರು. ಭೀಮರಾವ್ ದಂಪತಿಯಿಂದ ಭಜನೆ ಇತ್ತು.

ಸುಮತಿ ಸಾಯಿಪ್ರಸಾದ್, ಜೆ.ಕೆ.ವೀರೇಶ್, ಸಾಬು ದರ್ಗಾ, ಪುಷ್ಪ ಕೃಷ್ಣಪ್ಪ, ಸುನಂದಾ ದರ್ಗಾ, ಶ್ರೀಲಕ್ಷ್ಮೀ ಚಂದ್ರಶೇಖರ್, ಸುಜಾತ ನಿಂಬಾಳ್, ಭವಾನಿ ಬಸಪ್ಪ, ವಿನಿತಾ ದಯಾನಂದ ಮುಂತಾದವರು ನಿತ್ಯದ ಭಕ್ತಿಗೀತೆ ಗಾಯನದಲ್ಲಿ ತೊಡಗಿಸಿಕೊಂಡಿದ್ದರು. ಶರಣಬಸಪ್ಪ ಮತ್ತು ಚಂದ್ರಶೇಖರ ಅವರು ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಅಲಂಕಾರ ಮತ್ತಿತರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಾಲ ರಮೇಶ್ ದಂಪತಿ ಲಕ್ಷ್ಮಣ ಕಟ್ಟಿಮನಿ, ಗಿರೀಶ್ ಕುಲಕರ್ಣಿ , ಗೋಪಾಲ ತಲ್ವಾರ್, ರಾಜಶೇಖರ ಪಾಟೀಲ್, ಪರಮೇಶ್ ಗೌಡ , ರಾಜೇಂದ್ರ ಐನಾಪುರ, ಮಾಜಿ ಅಧ್ಯಕ್ಷ ಶಾಂತ ಕುಮಾರ್ ನಿಂಬಾಳ್, ಪ್ರಭಾಕರ್ ಎಂ, ಬಸವರಾಜ್ ದೆಸೂರು ಮುಂತಾದವರ ಸಹಾಯದಿಂದ ಕರ್ನಾಟಕ ಶೈಲಿಯ ಅಡುಗೆಯನ್ನು ತಯಾರಿಸಿದ್ದರು. ಭಾನುವಾರ ವಿಶೇಷವಾದ ಭೋಜನವನ್ನು ಕುಮಾರ್, ಸಂತೋಷ, ದಯಾನಂದ ಎಂ. ಮತ್ತಿತರರು ಸೇರಿ ತಯಾರಿಸಿದ್ದರು.
ಹರಿಯಾಣ ರಾಜ್ಯದ ಪರಿಸರ ವಿಭಾಗದ ಪ್ರಮುಖರು ಮತ್ತು ಕೆನ್ವಿನ್ ಆರೋಗ್ಯ ಫೌಂಡೇಷನ್ ಸಹ ಸಂಸ್ಥಾಪಕ ನವೀನ್ ಗೋಯಲ್ ಶನಿವಾರ ರಾತ್ರಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಡಿ.ವಿ.ಎಸ್. ಮೂರ್ತಿ, ನಾಗಭೂಷಣ, ಸಾಯಿ ಪ್ರಸಾದ್, ಪ್ರಸನ್ನ ಬಂಟ್ವಾಳ, ವಸಂತ ಶೆಟ್ಟಿ ಬೆಳ್ಳಾರೆ, ಆಶಾಲತಾ ಮಹಾದೇವ್ ಮತ್ತಿತರರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.
ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷ ಎಂ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ, ಉಪಾಧ್ಯಕ್ಷರಾದ ರಾಜಕುಮಾರ ನಿಲೂರ, ಮಾಲಾ ರಮೇಶ್, ಖಜಾಂಚಿ ಮರಿಬಸಪ್ಪ ಎಂ., ಜಂಟಿ ಕಾರ್ಯದರ್ಶಿ ಲಕ್ಷ್ಮಣ ಕಟ್ಟಿಮನಿ ಮತ್ತು ಸದಸ್ಯರಾದ ಗೋಪಾಲ ತಲ್ವಾರ್, ಶರಣಬಸಪ್ಪ, ಗಿರೀಶ್ ಕುಲಕರ್ಣಿ, ಅಪ್ಪಾ ಸಾಬ್ ಗೋಟೆ, ಸಿದ್ದಲಿಂಗಪ್ಪ ಸಾಹುಕಾರ್, ಚಂದ್ರಶೇಖರ ಕೆ., ರಾಘವೇಂದ್ರ ಎಸ್.ಎಲ್., ರಾಜಶೇಖರ ಪಾಟೀಲ್, ಸುನಂದಾ ಎಸ್. ದರ್ಗಾ ಹಾಗೂ ಭಾರತಿ ತಿಮ್ಮಪ್ಪ ಮತ್ತಿತರರು ಜೊತೆಯಾಗಿ ಈ ಗಣೇಶೋತ್ಸವ ಆಯೋಜಿಸಿದ್ದರು.
ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು: ಬಿಜೆಪಿ ಹೀಗಂದಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twelve =
Remember me
