ಇಸ್ಲಮಾಬಾದ್:ಉಗ್ರರಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಮಾತ್​ ಉದ್​ ದಾವಾ ಮುಖ್ಯಸ್ಥ ಹಫೀಜ್​ ಸಯ್ಯದ್​ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ನ್ಯಾಯಾಲಯ ಆದೇಶ ನೀಡಿದೆ.
26/11ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಹಫೀಜ್​ ಸಯ್ಯದ್​ ಹಾಗೂ ಆತನ ಸಹಚರರು ಉಗ್ರ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವುದಕ್ಕೆ ಸಂಬಂಧಪಟ್ಟಂತೆ ಇರುವ ಒಟ್ಟು ಆರು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಮಂಗಳವಾರ ಒಪ್ಪಿಗೆ ನೀಡಿತ್ತು. ವಿಚಾರಣೆ ಪೂರ್ತಿಯಾದ ಬಳಿಕ ತೀರ್ಪು ಇಂದು ತೀರ್ಪು ನೀಡಿದೆ.
ಹಫೀಜ್​ ಸಯ್ಯದ್​ ವಿರುದ್ಧ ಇದ್ದ ಆರು ಪ್ರಕರಣಗಳಲ್ಲಿ ಎರಡರಲ್ಲಿ ಆತ ಅಪರಾಧಿ ಎಂಬುದು ಕೋರ್ಟ್​ ವಿಚಾರಣೆ ವೇಳೆ ಸಾಬೀತಾಗಿದೆ.
ಹಫೀಜ್​ ಸಯ್ಯದ್​ ಹಾಗೂ ಆತನ ಸಹಚರರ ವಿರುದ್ಧ ಡಿಸೆಂಬರ್​ 11ರಂದು ಆ್ಯಂಟಿ ಟೆರರಿಸಂ ಕೋರ್ಟ್​ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅಂದಿನಿಂದಲೂ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + 12 =
Remember me
