ಪಣಜಿ:ಚಾಮರಾಜನಗರದ ಆಸ್ಪತ್ರೆಯಲ್ಲಿ ಒಂದೇ ರಾತ್ರಿಯಲ್ಲಿ 20ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿರುವ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಅದೇ ರೀತಿಯ ಘಟನೆಯೊಂದು ಗೋವಾದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರು ಸಾವನ್ನಪ್ಪಿದ್ದಾರೆ.
ಗೋವಾ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್​)ಯಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ 2 ಗಂಟೆಯಿಂದ ಬೆಳಗ್ಗೆ ಆರು ಗಂಟೆಯೊಳಗೆ 26 ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಈ ಸಾವಿಗೆ ಕಾರಣವೇನು ಎನ್ನುವುದರ ಬಗ್ಗೆ ಹೈ ಕೋರ್ಟ್​ ತನಿಖೆ ನಡೆಸಬೇಕು ಎಂದು ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ಒತ್ತಾಯಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್​ ಖಾಲಿ ಆದ ಸಮಯಕ್ಕೂ ಮತ್ತು ಪೂರೈಕೆ ಸಮಯಕ್ಕೂ ಹೆಚ್ಚಿನ ವ್ಯತ್ಯಾಸವಾದ್ದರಿಂದಾಗಿ ಈ ಸಾವು ಸಂಭವಿಸಿರಬಹುದೆಂದು ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ. ಜಿಎಂಸಿಎಚ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಈ ಮಾತನ್ನು ಹೇಳಿದ್ದಾರೆ.
ಸೋಮವಾರದಂದು ಜಿಎಂಸಿಎಚ್​ ಆಸ್ಪತ್ರೆ 1200 ಜಂಬೋ ಸಿಲಿಂಡರ್​ ಆಕ್ಸಿಜನ್​ಗೆ ಬೇಡಿಕೆ ಇಟ್ಟಿತ್ತು. ಅದರಲ್ಲಿ ನಾವು 400 ಸಿಲಿಂಡರ್​ ಪೂರೈಕೆ ಮಾಡಿದ್ದೇವೆ. ಸಾವಿಗೆ ನಿಖರ ಕಾರಣ ತನಿಖೆಯ ನಂತರವೇ ತಿಳಿದುಬರಬೇಕು. ಒಂದು ವೇಳೆ ಆಕ್ಸಿಜನ್​ ಸಮಸ್ಯೆಯಾಗಿದ್ದರೂ ಅದರ ಬಗ್ಗೆ ನಮಗೆ ಆಸ್ಪತ್ರೆಯಿಂದ ಸೂಕ್ತ ವರದಿ ಬೇಕು ಎಂದು ವಿಶ್ವಜಿತ್​ ತಿಳಿಸಿದ್ದಾರೆ. (ಏಜೆನ್ಸೀಸ್)
ಪಶ್ಚಿಮ ಬಂಗಾಳದಲ್ಲಿ ಶೂಟ್‌ಔಟ್‌: ಟಿಎಂಸಿ ಮುಖಂಡ ನಿಯೋಗಿ ಬರ್ಬರ ಹತ್ಯೆ

ಕೋವಿಡ್‌ ನಿಯಮ ಉಲ್ಲಂಘಿಸಿ ವಾಹನ ಬಳಸಿ ಕ್ಯಾರೇ ಅನ್ನದೇ ತಿರುಗಾಟ – ಪಪ್ಪೂ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
