ನವದೆಹಲಿ:ಕೊಲ್ಲಿ ರಾಷ್ಟ್ರ ಕುವೈತ್​ನಲ್ಲಿ ಬುಧವಾರ ಏಳು ಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತರಾದ 40 ಭಾರತೀಯರ ಪೈಕಿ 26 ಮಂದಿ ಕೇರಳದವರು, 7 ಮಂದಿ ತಮಿಳುನಾಡಿನವರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ದುರಂತದಲ್ಲಿ ಒಟ್ಟು 49 ಮಂದಿ ಬಲಿಯಾಗಿದ್ದರು. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕುವೈತ್​ಗೆ ತೆರಳಿ ಅಗ್ನಿಕಾಂಡದಲ್ಲಿ ಗಾಯಗೊಂಡವರ ಚಿಕಿತ್ಸೆಯ ಉಸ್ತುವಾರಿಯನ್ನು ನೋಡಿಕೊಳ್ಳಲಿ ದ್ದಾರೆ ಹಾಗೂ ಮೃತ ದೇಹಗಳನ್ನು ಊರಿಗೆ ತರಲು ನೆರವಾಗಲಿದ್ದಾರೆ. ವಿದೇಶಾಂಗ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್ ಈಗಾಗಲೇ ಕುವೈತ್​ಗೆ ಧಾವಿಸಿದ್ದಾರೆ. ಮಂಗಾಫ್ ಪ್ರದೇಶದ ಕಟ್ಟಡವೊಂದರಲ್ಲಿ ಧಗಧಗಿಸಿದ ಬೆಂಕಿಯಿಂದಾಗಿ 49 ವಲಸೆ ಕಾರ್ವಿುಕರು ಮೃತಪಟ್ಟಿದ್ದರು. ಸಾವಿಗೀಡಾದ ಕಾರ್ವಿುಕರ ಕುಟುಂಬಗಳಿಗೆ ಕೇರಳ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮೃತರ ಕುಟುಂಬ ಸದಸ್ಯರು ಆಘಾತದಿಂದ ತತ್ತರಿಸಿ ಹೋಗಿದ್ದಾರೆ.
ಕ್ರಮಕ್ಕೆ ಆಗ್ರಹ:ಅಹಮದಿ ಗವರ್ನರೇಟ್​ನ ಮಂಗಾಫ್​ನಲ್ಲಿ 195 ವಲಸೆ ಕಾರ್ವಿುಕರು ವಾಸಿಸುತ್ತಿದ್ದ ಏಳು ಮಹಡಿಗಳ ಕಟ್ಟಡದಲ್ಲಿ ಬುಧವಾರ ಸಂಜೆ 4 ಗಂಟೆ ಹೊತ್ತಿಗೆ ದುರಂತ ಸಂಭವಿಸಿತ್ತು. ಅಡುಗೆಮನೆಯಲ್ಲಿ ಹೊತ್ತಿದ ಬೆಂಕಿ ಬಹುಬೇಗನೆ ವ್ಯಾಪಿಸಿ ಕಟ್ಟಡ ಧಗಧಗಿಸಿತ್ತು. ದಟ್ಟ ಹೊಗೆಯಿಂದ ಉಸಿರುಗಟ್ಟಿ ಬಹುತೇಕ ಕಾರ್ವಿುಕರು ಮೃತಪಟ್ಟಿದ್ದರು. ಕಾನೂನುಗಳನ್ನು ಉಲ್ಲಂಘಿಸಿ ವಿದೇಶಿ ಕಾರ್ವಿುಕ ರನ್ನು ದೊಡ್ಡ ಸಂಖ್ಯೆಯಲ್ಲಿ ಅಸುರಕ್ಷಿತ ವಾತಾವರಣದಲ್ಲಿ ಇರಿಸುವ ಕಂಪನಿಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರ ಆಗ್ರಹ ಬಲವಾಗುತ್ತಿದೆ.

ಸುಟ್ಟು ಕರಕಲಾದ ದೇಹ:ದುರಂತಕ್ಕೆ ಬಲಿಯಾದ ಭಾರತೀಯರಲ್ಲಿ ಹಲವರ ದೇಹ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದು ಗುರುತನ್ನು ದೃಢಪಡಿಸಲು ಡಿಎನ್​ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ. ಸಂತ್ರಸ್ತರ ಪಾರ್ಥಿವ ಶರೀರಗಳನ್ನು ತರಲು ಭಾರತೀಯ ವಾಯು ಪಡೆಯ (ಐಎಎಫ್) ವಿಮಾನವೊಂದು ಸಿದ್ಧವಾಗಿ ನಿಂತಿದೆ. ಸಂತ್ರಸ್ತರ ಗುರುತು ದೃಢಪಟ್ಟ ನಂತರ ಬಂಧುಗಳಿಗೆ ವಿಷಯ ತಿಳಿಸಲಾಗುತ್ತದೆ ಹಾಗೂ ಶವಗಳನ್ನು ಭಾರತಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. ಕರಕಲಾದ ದೇಹಗಳನ್ನು ಗುರುತಿಸಲು ದುರಂತದಲ್ಲಿ ಬದುಕುಳಿದವರು ಅಧಿಕಾರಿಗಳಿಗೆ ನೆರವಾಗುತ್ತಿದ್ದಾರೆ.
ಕಲಬುರಗಿ ವ್ಯಕ್ತಿ ಸಾವು:ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆಳಂದ ತಾಲೂಕಿನ ವಿಜಯ್ ಕುಮಾರ್ ಪ್ರಸನ್ನ ಮೃತ ವ್ಯಕ್ತಿ.
ಕುವೈತ್​ನಲ್ಲಿರುವ ಸ್ಥಳೀಯ ಕರ್ನಾಟಕ ಸಂಘಟನೆಗಳ ಪ್ರತಿನಿಧಿಗಳು ಅಲ್ಲಿನ ರಕ್ಷಣಾ ಮತ್ತು ಪರಿಹಾರ ಕಾರ್ಯåಚರಣೆ ಕುರಿತು ನಿರಂತರ ಮಾಹಿತಿ ನೀಡುತ್ತಿದ್ದಾರೆ. ಗಾಯಾಳುಗಳ ಸ್ಥಿತಿಗತಿಯ ಇತ್ತೀಚಿನ ಮಾಹಿತಿಗಾಗಿ ಅಲ್ಲಿನ ಅಧಿಕಾರಿಗಳ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಅಲ್ಲಿರುವ ಕನ್ನಡಿಗರಿಗೆ ತೊಂದರೆ ಆಗಿದ್ದಲ್ಲಿ ಅಧಿಕೖತ ಸಹಾಯವಾಣಿ +96565505246 ಸಂರ್ಪಸಬಹುದು.
| ಡಾ.ಆರತಿಕೃಷ್ಣ ಉಪಾಧ್ಯಕ್ಷೆ, ಅನಿವಾಸಿ ಭಾರತೀಯ ವೇದಿಕೆ ಕರ್ನಾಟಕ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − 12 =
Remember me
