ಕ್ಯಾಲಿಫೋರ್ನಿಯಾ:ಅಮೆರಿಕದ ಪ್ರಖ್ಯಾತ ಟಿ.ವಿ. ಚಾನೆಲ್‌ ಸಿಬಿಎಸ್‌2 ನಲ್ಲಿ ವರದಿಗಾರ್ತಿಯಾಗಿದ್ದ ಭಾರತ ಮೂಲದ ನೀನಾ ಕಪೂರ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ರೋಚಕ ಘಟನೆಗಳನ್ನು ಆಧರಿಸಿ ಹಲವಾರು ಷೋಗಳನ್ನು ನಡೆಸಿಕೊಡುತ್ತಿದ್ದ ನೀನಾ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ. ಬಾಡಿಗೆ ಸ್ಕೂಟರ್‌ನಲ್ಲಿ ಇವರು ಪ್ರಯಾಣಿಸುತ್ತಿದ್ದರು.
26 ವರ್ಷದ ನೀನಾ, ಬೇರೊಬ್ಬ ವ್ಯಕ್ತಿಯೊಂದಿಗೆ ಈ ಬೈಕ್‌ ಅನ್ನು ಶೇರ್‌ ಮಾಡಿದ್ದರು. ಶೇರಿಂಗ್‌ ಆಧಾರದ ಮೇಲೆ ಬೈಕ್‌ ಬಾಡಿಗೆಗೆ ಪಡೆದಿದ್ದು. ಇವರು  ಹಿಂದುಗಡೆ ಕುಳಿತಿದ್ದರು. ಇಬ್ಬರೂ ಹೆಲ್ಮೇಟ್‌ ಧರಿಸಿರದ ಹಿನ್ನೆಯಲ್ಲಿ ನೀನಾ ಮೃತಪಟ್ಟಿದ್ದು, ಗಾಡಿಯ ಚಾಲನೆ ಮಾಡುತ್ತಿರುವ ಯುವಕನಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಅಪಘಾತವಾದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ನೀನಾ ಮೃತಪಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಅಪ್ಪ-ಅಮ್ಮನ ಕೊಂದ ತಾಲಿಬಾನರ ರುಂಡ ಚೆಂಡಾಡಿದ ಧೀರ ಪುತ್ರಿ
ನ್ಯೂಟೌನ್ ನಿವಾಸಿಯಾಗಿದ್ದ ನಿನಾ ತಮ್ಮ ಅಜಯ್ ಮತ್ತು ತಂದೆಯೊಂದಿಗೆ ವಾಸವಿದ್ದರು. ಈ ಮೊದಲು ನೀನಾ ನ್ಯೂಸ್‌ 12ನಲ್ಲಿ ಕೆಲಸ ಮಾಡುತ್ತಿದ್ದರು. ರೋಚಕ ಸ್ಟೋರಿ ಮಾಡಲು ಎಂಥದ್ದೇ ಸಂಕಷ್ಟಗಳನ್ನೂ ಎದುರಿಸಲು ನೀನಾ ತಯಾರಿದ್ದರು. ಯಾವುದೇ ವಿಷಯದ ಆಳವಾದ ಅಧ್ಯಯನ ನಡೆಸಿ ಸುದ್ದಿ ಕೊಡುತ್ತಿದ್ದರು ಎಂದು ನ್ಯೂಸ್‌ ಚಾನೆಲ್‌ಗಳು ನೀನಾರ ಕಾರ್ಯವನ್ನು ನೆನಪಿಸಿಕೊಳ್ಳುತ್ತಿವೆ.
ಇದಕ್ಕಾಗಿಯೇ ಇವರನ್ನು ನೀನಾ ಕಪೂರ್‌ ಎನ್ನುವುದಕ್ಕಿಂತ ಬದಲಾಗಿ ಥ್ರಿಲ್ಲಿಂಗ್‌ ಸ್ಟೋರಿ ನೀನಾ ಎಂದೇ ಗುರುತಿಸಲಾಗುತ್ತಿತ್ತು ಎಂದು ಸಹೋದ್ಯೋಗಿಗಳು ಹೇಳುತ್ತಿದ್ದಾರೆ.
ಗುಂಡಿಗೆ ಪತ್ರಕರ್ತ ಬಲಿ: ಘಟನೆ ಬಳಿಕವಷ್ಟೇ ತಪ್ಪಿತಸ್ಥ ಪೊಲೀಸರ ಅಮಾನತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
