ನವದೆಹಲಿ:ದೇಶದ ಸುಮಾರು 5,500 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ಸಿಹಿಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂಥದ್ದೊಂದು ನಿರ್ಧಾರವನ್ನು ಪ್ರಕಟಿಸಿದೆ.
ಹೊಸ ಆದೇಶದ ಪ್ರಕಾರ ಆಲ್​ ಇಂಡಿಯಾ ಕೋಟಾದಡಿ ಇತರ ಹಿಂದುಳಿದ ವರ್ಗ(ಒಬಿಸಿ) ವಿದ್ಯಾರ್ಥಿಗಳಿಗೆ ಶೇ. 27, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್​) ವಿದ್ಯಾರ್ಥಿಗಳಿಗೆ ಶೇ. 10 ಮೀಸಲಾತಿ ಸಿಗಲಿದೆ. ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ (ಎಂಬಿಬಿಎಸ್​/ಎಂಡಿ/ಎಂಎಸ್​/ಡಿಪ್ಲೊಮಾ/ಬಿಡಿಎಸ್​/ಎಂಡಿಎಸ್​) ವಿದ್ಯಾರ್ಥಿಗಳಿಗೆ 2021-22ರ ಸಾಲಿನಿಂದಲೇ ಇದು ಅನ್ವಯವಾಗಲಿದೆ.
ಬಹಳ ಕಾಲದಿಂದ ಬಾಕಿ ಉಳಿದಿದ್ದ ಈ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 26ರಂದು ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತಳೆಯಲಾಗಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಡುವ ಕುರಿತ ವಿಷಯ ಇದಾಗಿದೆ. ಈ ನಿರ್ಣಯದಿಂದ ಪ್ರತಿವರ್ಷ ಸುಮಾರು 5,500 ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
ಇದನ್ನೂ ಓದಿ:ಅವರಿಬ್ಬರಿಗೆ ಕಣ್ಣೀರು ಬರಲ್ಲ, ಯಡಿಯೂರಪ್ಪ ಅವರಿಗೆ ಕಣ್ಣೀರು ಬಂದಿದ್ದರಲ್ಲಿ ತಪ್ಪಿಲ್ಲ: ಶಾಸಕ ರಘುಪತಿ ಭಟ್​
2007ರಲ್ಲಿ ಸುಪ್ರೀಂಕೋರ್ಟ್​ ಎಸ್​ಸಿಗೆ ಶೇ15, ಎಸ್​ಟಿಗೆ ಶೇ. 7.5 ಮೀಸಲಾತಿಯನ್ನು ಆಲ್​ ಇಂಡಿಯಾ ಕೋಟಾದಡಿ ನೀಡಿತ್ತು. ಬಳಿಕ ಸೆಂಟ್ರಲ್ ಎಜುಕೇಷನಲ್​ ಇನ್​ಸ್ಟಿಟ್ಯೂಷನ್ಸ್​ (ರಿಸರ್ವೇಷನ್​ ಇನ್ ಅಡ್ಮಿಷನ್​) ಆ್ಯಕ್ಟ್​ನಲ್ಲಿ 2007ರಲ್ಲಿ ಒಬಿಸಿಗೆ ಶೇ. 27 ನೀಡಲಾಗಿದ್ದರೂ ಅದು ಕೆಲವು ಕಾಲೇಜುಗಳಿಗಷ್ಟೇ ಸೀಮಿತವಾಗಿದ್ದು, ಆಲ್​ ಇಂಡಿಯಾ ಕೋಟಾದಡಿ ಬರುತ್ತಿರಲಿಲ್ಲ.
ಆದರೆ ಈಗಿನ ನಿರ್ಧಾರದಿಂದ ಪ್ರತಿವರ್ಷ ಸುಮಾರು 1500 ಒಬಿಸಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್​, 2500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು 550 ಇಡಬ್ಲ್ಯುಎಸ್​ ವಿದ್ಯಾರ್ಥಿಗಳಿಗೆ ಎಂಬಿಬಿಎಸ್​ ಹಾಗೂ ಸುಮಾರು 1000 ಇಡಬ್ಲ್ಯುಎಸ್​ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಸಿಗಲಿದೆ. (ಏಜೆನ್ಸೀಸ್)
‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಬಾಲಕಿಯರಿಬ್ಬರ ಮೇಲೆ ಗ್ಯಾಂಗ್​ರೇಪ್​: ರಾತ್ರಿ ಇಡೀ ಮಕ್ಕಳು ಹೊರಗಿದ್ದಾಗ ಮನೆಯವರು ಯಾಕೆ ಸುಮ್ಮನಿದ್ದರು ಎಂದ ಸಿಎಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
