ವಾಷಿಂಗ್ಟನ್​:ಭಾರತೀಯ ಯುವತಿಯೋರ್ವಳು ಯುಎಸ್​ನಲ್ಲಿ ಮೃತಪಟ್ಟಿದ್ದಾಳೆ. ತನ್ನ ಪ್ರಿಯತಮನೊಂದಿಗೆ ಜಲಪಾತಕ್ಕೆ ಹೋಗಿದ್ದ ಈಕೆ, ಅಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಆಂಧ್ರ ಮೂಲದ 27 ವರ್ಷದ ಯುವತಿ ಪೋಲವರಪು ಕಮಲಾ ಮೃತರು. ಟೆನ್ನೆಸ್ಸೀಯಲ್ಲಿರುವ ಬಾಲ್ಡ್ ನದಿಯ ಜಲಪಾತಕ್ಕೆ ಸೆಪ್ಟೆಂಬರ್​ 12ರಂದು ತಾವು ಮದುವೆಯಾಗುವ ಹುಡುಗನೊಂದಿಗೆ ಪಿಕ್ನಿಕ್​ಗೆ ತೆರಳಿದ್ದರು. ಅಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ, ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಇಬ್ಬರೂ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಸ್ಥಳದಲ್ಲಿದ್ದವರು ಕೂಡಲೇ ಮನ್ರೋ ಕೌಂಟಿ ಪೊಲೀಸ್​ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಲ್ಲಿಗೆ ಬಂದ ಪೊಲೀಸರು ಯುವಕನನ್ನು ರಕ್ಷಿಸಿದ್ದಾರೆ. ಆದರೆ ಕಮಲಾ ಮೃತಪಟ್ಟಿದ್ದಾರೆ.ಕಮಲಾ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯವರು. ಉನ್ನತ ಶಿಕ್ಷಣಕ್ಕಾಗಿ ಕೆಲವು ವರ್ಷಗಳ ಹಿಂದೆ ಯುಎಸ್​ಗೆ ತೆರಳಿದ್ದವರು, ಅಲ್ಲಿನ ಓಹಿಯೋದಲ್ಲಿ ಉದ್ಯೋಗ ಮಾಡುತ್ತಿದ್ದರು. ಅವರ ಅಂತ್ಯಕ್ರಿಯೆ ಭಾರತದಲ್ಲಿ, ಅವರ ಹುಟ್ಟೂರಿನಲ್ಲಿಯೇ ನಡೆಯಬಹುದು ಎನ್ನಲಾಗಿದೆ.
ಮಲಾಗೆ ಅಕ್ಕ ಇದ್ದಾರೆ. ಅವರು ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಆಂಧ್ರದಲ್ಲಿ ಅವರ ಪಕ್ಕದ ಮನೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಮಲಾ ಸಾವಿನ ಸುದ್ದಿಯನ್ನು ಅವಳ ಮದುವೆಯಾಗಬೇಕಿದ್ದ ಹುಡುಗನಿಂದಲೇ ತಿಳಿದಿದ್ದೇವೆ. ಮೃತದೇಹವನ್ನು ವಾಪಸ್​ ತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಪ್ರಯೋಗಾಲಯದಲ್ಲಿಯೇ ಕರೊನಾ ಸೃಷ್ಟಿ: ಚೀನಿಯರ ಕ್ರೌರ್ಯಕ್ಕೆ ಪುರಾವೆ ನೀಡುವೆ ಎಂದ ಚೀನಾದ ವೈರಾಲಾಜಿಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
