ನವದೆಹಲಿ:ಕೃಷಿ ಕಾಯ್ದೆಗಳ ವಿರುದ್ಧದ ರೈತ ಹೋರಾಟವು ಮಂಗಳವಾರದಂದು ಉಗ್ರ ರೂಪ ತಾಳಿ ಸಾಕಷ್ಟು ಹಿಂಸಾಚಾರ ನಡೆದಿದೆ. ಈ ಹೋರಾಟದಲ್ಲಿ ಓರ್ವ ಹೋರಾಟಗಾರ ಮೃತನಾಗಿದ್ದಾನೆ. ಮೃತನಾದ ಹೋರಾಟಗಾರ ಮೂರು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದ ಎಂದು ಇದೀಗ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಗಂಡನ ಫೋನಲ್ಲಿ ತನ್ನದೇ ಫೋಟೋ ಕಂಡು ಗಂಡನ ಕೊಲೆ ಮಾಡಲು ಹೊರಟ ಹೆಂಡತಿ!
ಉತ್ತರ ಪ್ರದೇಶದ ದಿಬ್ಡಿಯಾ ಗ್ರಾಮದ ನವೃತ್​ ಸಿಂಗ್​(27) ಮೃತನಾದ ವ್ಯಕ್ತಿ. ಆತ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ. ಮಂಗಳವಾರದಂದು ಆತನೂ ತನ್ನ ಸ್ನೇಹಿತರ ಜತೆ ಸೇರಿ ದೆಹಲಿಗೆ ಬಂದಿದ್ದಾನೆ. ರೈತ ಹೋರಾಟದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸದೆಯೇ ಮನೆಯಿಂದ ಹೊರಟು ಬಂದಿದ್ದಾನೆ. ದೆಹಲಿಯಲ್ಲಿ ಆತನಿದ್ದ ಟ್ರ್ಯಾಕ್ಟರ್​ ಪಲ್ಟಿ ಹೊಡೆದಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ನನ್ನ ಮಗ ರೈತ ಹೋರಾಟಕ್ಕೆ ಹೋಗುತ್ತಿದ್ದಾನೆ ಎನ್ನುವುದು ನಮಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವನನ್ನು ಕಳುಹಿಸುತ್ತಿರಲಿಲ್ಲ. ಅವನ ಸ್ನೇಹಿತರು ಆತನನ್ನು ಕರೆದೊಯ್ದಿದ್ದಾರೆ ಎಂದು ಮೃತನ ಕುಟುಂಬ ದೂರಿದೆ.
ಇದನ್ನೂ ಓದಿ:‘ಕೃಷಿ ಕಾಯ್ದೆಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ’ ಐಎಂಎಫ್​ ಅಭಿಮತ
ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ 80ಕ್ಕೂ ಹೆಚ್ಚು ಪೊಲೀಸರು ಹಾಗೂ ಕೆಲ ರೈತ ಹೋರಾಟಗಾರರು ಗಾಯಾಳುಗಳಾಗಿದ್ದಾರೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ನಡೆದ ದಾಳಿಯಿಂದಾಗಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ. (ಏಜೆನ್ಸೀಸ್​)
https://t.co/UKzxWpvNsZ
— Vijayavani (@VVani4U)January 26, 2021

ರೈತರ ಹೆಸರಲ್ಲಿ ಹಿಂಸೆಗಿಳಿದರು, ತಮ್ಮ ಧ್ವಜ ಹಾರಿಸಿದರು, ಹಲ್ಲೆ ಮಾಡಿದರು- ಏಳು ಮಂದಿ ವಿರುದ್ಧ ಎಫ್‌ಐಆರ್‌

ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 9 =
Remember me
