ನವದೆಹಲಿ:ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಮಾನ ಯಾನವನ್ನು ರದ್ದುಗೊಳಿಸಲಾಗಿದೆ. ಆದರೆ, ಈ ನಡುವೆ 274 ವಿಮಾನಗಳು ಹಾರಾಟ ನಡೆಸಿವೆ.
ವೈದ್ಯಕೀಯ ಅಗತ್ಯ ವಸ್ತುಗಳ ಸರಬರಾಜಿಗಾಗಿ ದೇಶದ ವಿವಿಧ ಭಾಗಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯ 274 ವಿಮಾನಗಳ ಸಂಚಾರವನ್ನು ನಿರ್ವಹಿಸಿದೆ.
ಕರೊನಾ ವಿರುದ್ಧ ಹೋರಾಟಕ್ಕಾಗಿ ದೇಶದ ಮೂಲೆಮೂಲೆಗೂ ಔಷಧ, ವೈದ್ಯಕೀಯ ವಸ್ತುಗಳು, ಸಾಧನಗಳ ಪೂರೈಕೆಗಾಗಿ ವಿಮಾನ ಯಾನ ಸಚಿವಾಲಯವು “ಲೈಫ್​​ಲೈನ್​ ಉಡಾನ್​” ಯೋಜನೆಯನ್ನು ಆರಂಭಿಸಿತ್ತು.
ಏರ್​ ಇಂಡಿಯಾ, ಅಲೈನ್ಸ್​ ಏರ್​, ಭಾರತೀಯ ವಾಯು ಸೇನೆ, ಇಂಡಿಗೋ ಹಾಗೂ ಸ್ಪೈಸ್​ ಜೆಟ್​ ವಿಮಾನ ಯಾನ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದವು. ಮಾರ್ಚ್​ 26ರಿಂದ ಏಪ್ರಿಲ್​ 17ರವರೆಗೆ ಒಟ್ಟು 274 ವಿಮಾನಗಳು ಸಂಚಾರ ನಡೆಸಿದ್ದವು. ಏರ್​ ಇಂಡಿಯಾ-91, ಅಲೈನ್ಸ್​ ಏರ್​-84, ಭಾರತೀಯ ವಾಯು ಸೇನೆ 91 ಬಾರಿ ವಿಮಾನಗಳ ಹಾರಾಟ ನಡೆಸಿದೆ.
ಇದಲ್ಲದೇ, ವಿದೇಶಗಳಿಂದಲೂ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ತರಲಾಗಿದೆ. ಏರ್​ ಇಂಡಿಯಾ ಇದಕ್ಕಾಗಿ ಏರ್​ಬ್ರಿಜ್​ ಯೋಜನೆ ರೂಪಿಸಿತ್ತು. ಚೀನಾ, ಹಾಂಗ್​ಕಾಂಗ್​, ಕೊರಿಯಾದಿಂದ 207 ಟನ್​ಗಳಷ್ಟು ವೈದ್ಯಕೀಯ ಸಾಮಗ್ರಿಯನ್ನು ಭಾರತಕ್ಕೆ ತರಲಾಗಿದೆ. ಇದಲ್ಲದೆ, ಫ್ರಾನ್ಸ್ನ​ ಫ್ರಾಂಕ್​ಫರ್ಟ್​ಗೆ ಕೃಷಿ ಸಾಮಗ್ರಿಗಳನ್ನು ಸಾಗಿಸಿ ಅಲ್ಲಿಂದ 10 ಟನ್​ಗಳಷ್ಟು ಸಾಮಗ್ರಿ ಮರಳಿ ತರಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಮಾಹಿತಿ ನೀಡಿದೆ.
ಹಾಸನ, ಹೊಸಪೇಟೆಯಲ್ಲಿ ಆಹಾರ ಕಿಟ್​ಗಾಗಿ ಮುಗಿಬಿದ್ದ ಜನರು, ವಿತರಣೆ ರದ್ದುಗೊಳಿಸಿದ ಸಚಿವ ಆನಂದ ಸಿಂಗ್​

ದೇ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + one =
Remember me
