ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕ ರೋಗಪೀಡಿತರ ಪೈಕಿ ಶೇಕಡಾ 28.83ರಷ್ಟು ಜನರು ಗುಣಮುಖರಾಗಿದ್ದಾರೆ. ಕಳೆದ 24 ತಾಸಿನಲ್ಲಿ 1,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 54 ಸಾವಿರಕ್ಕಿಂತ ಹೆಚ್ಚಾಗಿದೆ. ಜತೆಗೆ ಕರೊನಾದಿಂದ ಮೃತಪಟ್ಟವರ ಸಂಖ್ಯೆ 1800ಕ್ಕಿಂತ ಹೆಚ್ಚಾಗಿದೆ.
24 ತಾಸಿನಲ್ಲಿ 325 ಸೋಂಕಿತರು ಚೇತರಿಸಿಕೊಂಡಿದ್ದು, ಒಟ್ಟಾರೆ 15,600ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. 37 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ದೇಶದಲ್ಲಿ ಮೊದಲ ಹತ್ತು ಸಾವಿರ ಸೋಂಕಿತರು ಪತ್ತೆಯಾಗಲು ಸುಮಾರು ಒಂದುವರೆ ತಿಂಗಳು ಹಿಡಿದಿತ್ತು. ಆದರೆ ಕೇವಲ ನಾಲ್ಕು ದಿನಗಳಲ್ಲಿ 40 ಸಾವಿರದಿಂದ 50 ಸಾವಿರಕ್ಕೆ ತಲುಪಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿಪಟ್ಟು ಹಿಡಿದು ಮದ್ಯದಂಗಡಿ ಬಂದ್ ಮಾಡಿಸಿದ ಮಹಿಳೆಯರು
ಕರ್ನಾಟಕ ತಬ್ಲಿಘಿಗಳ ಮೇಲೆ ಕೇಸ್: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದ ಮಸೀದಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡದೆ ಉಳಿದುಕೊಂಡಿದ್ದಕ್ಕಾಗಿ ಕರ್ನಾಟಕ ಮತ್ತು ಅಸ್ಸಾಂನ ಒಟ್ಟು 24 ತಬ್ಲಿಘ್ ಜಮಾತ್ ಸದಸ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಪಟ್ವಾರಿ ಮಸೀದಿಯಲ್ಲಿ ತಂಗಿದ್ದುದು ಪತ್ತೆಯಾಗಿತ್ತು.
ತಬ್ಲಿಘಿಗಳ ಖಾತೆಗಳು ಸ್ಥಗಿತ: ತನಿಖಾ ಸಂಸ್ಥೆಗಳ ಸೂಚನೆ ಮೇರೆಗೆ ತಬ್ಲಿಘಿ ಜಮಾತ್​ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ಹಾಗೂ ಆತನನ್ನು ಬಂಧಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
2 ಬಿಎಸ್​ಎಫ್ ಸಿಬ್ಬಂದಿ ಸಾವು: ಗಡಿ ಭದ್ರತಾ ಪಡೆಯ (ಬಿಎಸ್​ಎಫ್) ಇಬ್ಬರು ಸಿಬ್ಬಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಕರೊನಾ ಸೋಂಕಿನಿಂದ ಬಿಎಸ್​ಎಫ್ ಸಿಬ್ಬಂದಿ ಮೃತರಾದ ಮೊದಲ ಪ್ರಕರಣ ಇದಾಗಿವೆೆ. 2.50 ಲಕ್ಷ ಸಿಬ್ಬಂದಿ ಬಲದ ಬಿಎಸ್​ಎಫ್​ನಲ್ಲಿ ಕರೊನಾ ಸೋಂಕಿತರ ಸಂಖ್ಯೆ193ಕ್ಕೇರಿದೆ. ಇಬ್ಬರು ಗುಣಮುಖರಾಗಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ಸಬ್ ಇನ್ಸ್​ಪೆಕ್ಟರ್ ಒಬ್ಬರು ಕಳೆದ ತಿಂಗಳು ಈ ರೋಗಕ್ಕೆ ಬಲಿಯಾಗಿದ್ದರು.
ಇದನ್ನೂ ಓದಿವಿದೇಶದಿಂದ ಬರುವ ಕನ್ನಡಿಗರಿಗಾಗಿ ಕೆಂಪೇಗೌಡ ವಿಮಾನ ನಿಲ್ದಾಣ ರೆಡಿ: ಸುಧಾಕರ್, ಬೊಮ್ಮಾಯಿ ಪರಿಶೀಲನೆ
ತಮಿಳುನಾಡಿನಲ್ಲಿ 580 ಪ್ರಕರಣ: ತಮಿಳುನಾಡಿನಲ್ಲಿ ಗುರುವಾರ ಮತ್ತೆ 580 ಹೊಸ ಪ್ರಕರಣ ಪತ್ತೆಯಾಗಿದೆ. ಕೇರಳದಲ್ಲಿ ಪತ್ತೆಯಾಗಿದ್ದ 502 ಪ್ರಕರಣಗಳಲ್ಲಿ ಈಗ 30 ಕೇಸ್​ಗಳು ಸಕ್ರಿಯವಾಗಿವೆ.
ಅಮೆರಿಕದಲ್ಲಿ 75 ಸಾವಿರಕ್ಕೂ ಹೆಚ್ಚು ಸಾವು
ಕರೊನಾ ಮಹಾಮಾರಿಗೆ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ ಮುಕ್ಕಾಲು ಲಕ್ಷಕ್ಕೂ ಅಧಿಕವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 12.69 ಲಕ್ಷಕ್ಕೆ ಏರಿಕೆಯಾಗಿದೆ. ಬ್ರಿಟನ್​ನಲ್ಲಿ 30 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚಾಗಿದೆ. ಇಟಲಿಯಲ್ಲಿ 29, ಸ್ಪೇನ್​ನಲ್ಲಿ 26 ಹಾಗೂ ಫ್ರಾನ್ಸ್​ನಲ್ಲಿ 25 ಸಾವಿರ ಜನರು ಈವರೆಗೆ ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ ಮೃತಪಟ್ಟವರ ಸಂಖ್ಯೆ 2.66 ಲಕ್ಷಕ್ಕೆ ಏರಿಕೆಯಾಗಿದ್ದು, 38.53 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಈವರೆಗೆ 13.17 ಲಕ್ಷ ಜನರು ಗುಣಮುಖರಾಗಿದ್ದು, ಇನ್ನೂ 22.69 ಲಕ್ಷ ಸಕ್ರಿಯ ಪ್ರಕರಣಗಳಿವೆ. ಜತೆಗೆ 48 ಸಾವಿರ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕರೊನಾ ಪ್ರತಿಬಂಧಿಸಲು ಅಶ್ವಗಂಧ ಪರೀಕ್ಷೆ
ಆಯುರ್ವೆದ ಔಷಧಿ ಅಶ್ವಗಂಧಕ್ಕೆ ಕರೊನಾ ಸೋಂಕನ್ನು ಪ್ರತಿಬಂಧಿಸುವ ಶಕ್ತಿ ಇದೆಯೇ ಎಂಬುದನ್ನು ತಿಳಿಯಲು ಈ ಔಷಧದವನ್ನು ರ್ಯಾಂಡಮ್​ಗಿ ನಿಯಂತ್ರಿತ ಕ್ಲಿನಿಕಲ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೈಡ್ರಾಕ್ಸಿಕ್ಲೋರೊಕ್ವಿನ್​ಗೆ ಅಶ್ವಗಂಧವನ್ನು ಹೋಲಿಕೆ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಗುರುವಾರ ತಿಳಿಸಿದ್ದಾರೆ. ಆಯುಷ್, ಆರೋಗ್ಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಾಂತ್ರಿಕ ಬೆಂಬಲದೊಂದಿಗೆ ಜಂಟಿಯಾಗಿ ಈ ಪರೀಕ್ಷೆ ನಡೆಸಲಿವೆ. ಗುಡುಚಿ ಮತ್ತು ಪಿಪ್ಪಲಿಯ ಸಂಯುಕ್ತವಾದ ಆಯುರ್ವೆದ ಮದ್ದು ಯಷ್ಠಿಮಧು ಮತ್ತು ಪಾಲಿ ಗಿಡಮೂಲಿಕೆ ಸಂಯುಕ್ತದ (ಆಯುಷ್ 64) ಪರೀಕ್ಷೆ ಕೂಡ ನಡೆಸಲಾಗುವುದೆಂದು ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೇಚಾ ಹೇಳಿದ್ದಾರೆ. ಈ ಆಯುರ್ವೆದ ಔಷಧಿಗಳ ಯಾದೃಚ್ಛಿಕ (ರ್ಯಾಂಡಮೈಸ್ಡ್) ಪರೀಕ್ಷೆಗಳು ಕರೊನಾ ರೋಗ ತಡೆಯುವಲ್ಲಿ ಹಾಗೂ ವಾಸಿ ಮಾಡುವಲ್ಲಿ ಅನುಕೂಲಕರವೇ ಎಂಬುದನ್ನು ತಿಳಿಯಲು ನೆರವಾಗುತ್ತವೆ ಎಂದಿದ್ದಾರೆ.
ಅಮೆರಿಕ-ಚೀನಾ ತಿಕ್ಕಾಟ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್​ಎಸ್​ಸಿ) ಕರೊನಾ ವೈರಸ್ ಕುರಿತ ಕರಡು ನಿರ್ಣಯ ಕುರಿತು ಅಮೆರಿಕ ಹಾಗೂ ಚೀನಾ ಮಧ್ಯೆ ತಿಕ್ಕಾಟ ನಡೆಯುತ್ತಿದೆ. ಈ ಹಿನ್ನೆಲೆ ಫ್ರಾನ್ಸ್ ಮತ್ತು ಟ್ಯುನೀಷಿಯಾ ಇನ್ನಿತರ ದೇಶಗಳು ಅಮೆರಿಕ ಮತ್ತು ಚೀನಾ ರಾಜಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಿವೆ. ಕರಡು ನಿರ್ಣಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ಉಲ್ಲೇಖಿಸಿರುವ ಕೆಲ ಅಂಶಗಳು ಅಮೆರಿಕ ಪರವಾಗಿಲ್ಲ. ಅಲ್ಲದೇ ಇದು ಚೀನಾ ಕಡೆಗೆ ಪಕ್ಷಪಾತ ತೋರಿಸುತ್ತಿದ್ದು, ಮಾರಣಾಂತಿಕ ವೈರಸ್ ಕರೊನಾ ಬಗ್ಗೆ ಜಗತ್ತಿಗೆ ಸಮರ್ಪಕವಾಗಿ ತಿಳಿಸುವಲ್ಲಿ ವಿಫಲವಾಗಿದೆ ಎಂದು ಅಮೆರಿಕ ಅಸಮಾಧಾನ ಹೊಂದಿದೆ. ಈ ಹಿನ್ನೆಲೆ ನಿರ್ಣಯ ಪಾರದರ್ಶಕವಾಗಿರಲಿ ಎಂದು ಅಮೆರಿಕ ಆಗ್ರಹಿಸಿದೆ. ಮತ್ತೊಂದು ಕಡೆ ಚೀನಾ ನಿರ್ಣಯವನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ರಾಯಭಾರಿ ಜಾಂಗ್ ಜುನ್, ಸತ್ಯಾಸತ್ಯತೆಗಳು ಮೇಜಿನ ಮೇಲಿವೆ, ಚೀನಾವನ್ನು ದೂಷಿಸುವುದರಿಂದ ಜವಾಬ್ದಾರಿಯಿಂದ ಪಾಲಯನ ಸಾಧ್ಯವಿಲ್ಲ ಎಂದಿದ್ದಾರೆ.
ಸಾವಿರಾರು ಕಂಪನಿ ಆಕರ್ಷಿಸಲು ಸಿದ್ಧತೆ
ನವದೆಹಲಿ: ಚೀನಾದಿಂದ ಕಾಲ್ತೆಗೆಯುತ್ತಿರುವ ಅಮೆರಿಕದ ಒಂದು ಸಾವಿರಕ್ಕೂ ಕಂಪನಿಗಳನ್ನು ತನ್ನೆಡೆಗೆ ಸೆಳೆಯಲು ಭಾರತ ಕಾರ್ಯೋನ್ಮೂಖವಾಗಿದೆ. ಏಪ್ರಿಲ್​ನಲ್ಲೇ ಅನೇಕ ಸಂಸ್ಥೆಗಳನ್ನು ಸಂರ್ಪಸಿಯೂ ಇದೆ. ಕಂಪನಿಗಳಿಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಮೂಲಕ ಅವುಗಳನ್ನು ಸೆಳೆಯುವುದು ಕೇಂದ್ರದ ಉದ್ದೇಶ. ಈ ರೀತಿ ಕೇಂದ್ರ ಸರ್ಕಾರ ಕಣ್ಣಿಟ್ಟಿರುವ ಕಂಪನಿಗಳಲ್ಲಿ ವೈದ್ಯಕೀಯ ಉಪಕರಣ ತಯಾರಿಸುವ ದೈತ್ಯ ಕಂಪನಿ ಅಬೊಟ್ ಲ್ಯಾಬೊರೇಟರೀಸ್, ಮೆಡ್​ಟ್ರಾನಿಕ್ ಇನ್ನಿತರ ಕಂಪನಿಗಳಿವೆ. ಜಪಾನ್ ಕೂಡ ಚೀನಾದಿಂದ ಕೈಗಾರಿಕೆಗಳನ್ನು ಸ್ಥಳಾಂತರಿಸಲು ಯೋಚಿಸಿದ್ದು ಅದಕ್ಕಾಗಿ 2.20 ಬಿಲಿಯ ಡಾಲರ್ (-ಠಿ; 16.68 ಲಕ್ಷ ಕೋಟಿ) ಹಣ ತೆಗೆದಿಟ್ಟಿದೆ.
ಹಸಿರು ವಲಯದಲ್ಲಿ ಮಾತ್ರ ವಿಮಾನ ಹಾರಾಟ
ನವದೆಹಲಿ: ವಿಮಾನ ಹೊರಡುವ ಮತ್ತು ತಲುಪುವ ಸ್ಥಳಗಳು ಹಸಿರು ವಲಯದಲ್ಲಿದ್ದರೆ ಮಾತ್ರ ದೇಶೀಯ ವಿಮಾನಗಳ ಹಾರಾಟ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಮೇ 17ರಂದು ಲಾಕ್​ಡೌನ್ ಮುಗಿದ ನಂತರ ದೇಶೀಯ ವಿಮಾನಗಳ ಹಾರಾಟ ಆರಂಭಿಸುವ ಚಿಂತನೆ ನಡೆಸಲಾಗುತ್ತಿದೆ. ವಿಮಾನಯಾನ ಆರಂಭ ಮತ್ತು ಅಂತ್ಯವಾಗುವ ಎರಡೂ ಸ್ಥಳಗಳು ಹಸಿರು ವಲಯದಲ್ಲಿರಬೇಕು. ಆದರೆ, ಕರೊನಾ ಸೋಂಕಿತರ ಏರಿಳಿತದಿಂದ ಪ್ರತಿನಿತ್ಯ ವಲಯಗಳು ಬದಲಾಗುತ್ತಿರುವುದರಿಂದಾಗಿ ಸಮಸ್ಯೆಯಾಗಿದೆ. ಎಲ್ಲ ರೀತಿಯ ಸಾಧ್ಯತೆಗಳನ್ನು ಪರಿಗಣಿಸಲಾಗುವುದು. ಪ್ರಧಾನಿಯವರಿಗೆ ಮಾಹಿತಿ ನೀಡಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸ್ವಯಂ ದಿಗ್ಬಂಧನದಿಂದ ಹೊರಬಂದ ಮೂವರು ಮಂತ್ರಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
