ನವದೆಹಲಿ:ತಾವು ಚುನಾವಣೆ ಸಮಯದಲ್ಲಿ ಸಲ್ಲಿಸುವ ನಾಮಪತ್ರಗಳಲ್ಲಿ ಸಲ್ಲಿಸಿರುವ ವಿವರಗಳ ಪ್ರಕಾರ ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳು ಎಂದು ಅಸೋಸಿಯೇಷನ್​ ಫಾರ್​ ಡೆಮಾಕ್ರಾಟಿಕ್ ರಿಫರ್ಮ್ಸ್(ADR) ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್​ನಲ್ಲಿ ತಿಳಿಸಲಾಗಿದೆ ಎಂದು ADR ಹಾಗೂ ಎಲೆಕ್ಷನ್​ ವಾಚ್​ ಬಿಡುಗಡೆ ಂಆಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ.
ವಿವಿಧ ರಾಜ್ಯಗಳ 30 ಮುಖ್ಯಮಂತ್ರಿಗಳ ಪೈಕಿ 29(ಶೇ.97ರಷ್ಟು) ಮಂದಿ ಕೋಟ್ಯಾಧಿಪತಿಗಳಾಗಿದ್ದು ಪ್ರತಿ ಸಿಎಂನ ಆಸ್ತಿ ಸರಾಸರಿ 33.96 ಕೋಟಿ ರೂ.ಮೌಲ್ಯ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ, ಒಬ್ಬಿಬ್ಬರು ಪಕ್ಷ ತೊರೆದರೆ ಪರಿಣಾಮ ಬೀರದು: ಬಿ.ಎಸ್​.ಯಡಿಯೂರಪ್ಪ
30 ಜನ ಮುಖ್ಯಮಂತ್ರಿಗಳ ಪೈಕಿ 13(ಶೇ.43 ರಷ್ಟು) ಮಂದಿ ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್​ ಪ್ರಕರಣಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಜಾಮೀನು ರಹಿತ ಅಪರಾಧ, ಜೈಲು ಶಿಕ್ಷೆಯ ಬಗ್ಗೆಯೂ ತಿಳಿಸಲಾಗಿದೆ.
ಕರೋಡ್​ಪತಿ ಮುಖ್ಯಮಂತ್ರಿಗಳು ಪೈಕಿ ಆಂಧ್ರಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ(510 ಕೋಟಿ ರೂಪಾಯಿ) ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು(163 ಕೋಟಿ ರೂಪಾಯಿ), ಓಡಿಶಾದ ನವೀನ್​ ಪಟ್ನಾಯಕ್​(63 ಕೋಟಿ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆ.
ಅತ್ಯಂತ ಕಡಿಮೆ ಆಸ್ತಿ ಘೋಷಿಸಿರುವವರ ಪೈಕಿ ಕೇರಳದ ಪಿನರಾಯಿ ವಿಜಯನ್​(1 ಕೋಟಿ ರೂಪಾಯಿ), ಹರಿಯಾಣದ ಮನೋಹರ್​ ಲಾಲ್​ ಖಟ್ಟರ್​(1 ಕೋಟಿ ರೂಪಾಯಿ), ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ(15 ಲಕ್ಷ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
