ಬೆಂಗಳೂರು:2019-20ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಮಲ್ಲೇಶ್ವರದ ವಿದ್ಯಾಮಂದಿರ ಪಿಯು ಕಾಲೇಜಿನ ವಿದ್ಯಾರ್ಥಿ ಅರವಿಂದ್ ಶ್ರೀವತ್ಸ 600ಕ್ಕೆ 598 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.
ಪಿಯುಸಿ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಅರವಿಂದ್ ಶ್ರೀವತ್ಸ ಐಟಿ ಕಂಪನಿ ಉದ್ಯೋಗಿ ಎಸ್​. ಶ್ರೀನಿವಾಸನ್​ ಮತ್ತು ಚಿತ್ರಾ ಆರ್​. ದಂಪತಿಯ ಏಕೈಕ ಪುತ್ರ. ‘ಹತ್ತನೇ ತರಗತಿಯಲ್ಲಿ ಶೇ. 96.8(ಐಸಿಸಿಐ) ಫಲಿತಾಂಶ ಬಂದಿತ್ತು. ಕಾಮರ್ಸ್​ ವಿಷಯ ಅಂದ್ರೆ ನನಗೆ ಇಷ್ಟ. ಬಿಜಿನೆಸ್​ ನನ್ನ ಆಸಕ್ತಿ ವಲಯ. ಹಾಗಾಗಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನೇ ಆಯ್ಕೆ ಮಾಡಿಕೊಂಡೆ’ ಎನ್ನುವ ಅರವಿಂದ್ ಶ್ರೀವತ್ಸ, ತಮ್ಮ ಸಾಧನೆಯ ಜರ್ನಿ ಬಗ್ಗೆ ‘ವಿಜಯವಾಣಿ‘ ಬಳಿ ಹಂಚಿಕೊಂಡರು. ಅದರ ವಿವರ ಇಲ್ಲಿದೆ.
ಇದನ್ನೂ ಓದಿರಿಕರ್ನಾಟಕದ ಪಿಯುಸಿ ಟಾಪರ್ಸ್​ ಲಿಸ್ಟ್
ಪಿಯುಸಿ ಆರಂಭದ ದಿನದಿಂದಲೂ ಆಯಾ ತರಗತಿಯ ಅಭ್ಯಾಸವನ್ನು ಅಂದೇ ಮುಗಿಸಿಬಿಡುತ್ತಿದ್ದೆ. ಕಾಲೇಜಿಗೆ ಹೋಗಿ ಬಂದ ಬಳಿಕ ಎರಡ್ಮೂರು ತಾಸುಓದುತ್ತಿದ್ದೆ. ಉಪನ್ಯಾಸಕರು ಮತ್ತು ನನ್ನ ಫ್ಯಾಮಿಲಿಯ ಎಲ್ಲರೂ ಓದಿಗೆ ಸಹಕರಿಸುತ್ತಿದ್ದರು. ಅವರಿಂದಲೇ ಈ ಸಾಧನೆ ಹಾದಿ ಸುಗಮವಾಗಲು ಸಾಧ್ಯವಾಯಿತು. ಅವರಿಗೆ ನಾನು ಮೊದಲು ಥ್ಯಾಂಕ್ಸ್ ಹೇಳುವೆ. ಅಪ್ಪ-ಅಮ್ಮನ ಸಹಕಾರ ಮೊದಲಿಂದಲೂ ಇದೆ’ ಎಂದರು.
ಇನ್ನು ತನ್ನ ವೃತ್ತಿ ಕನಸಿನ ಬಗ್ಗೆ ಬಿಚ್ಚಿಟ್ಟ ಅರವಿಂದ್ ಶ್ರೀವತ್ಸ, ‘ಸಿಎ(ಚಾರ್ಟೆಡ್​ ಅಕೌಂಟ್​) ಆಗಬೇಕೆಂಬುದು ನನ್ನ ಗುರಿ. ಬಿಕಾಂ ಕೂಡ ಓದುವೆ. ಕೆಲಸ ಎಲ್ಲಿ ಮಾಡಬೇಕು ಎಂಬ ಬಗ್ಗೆ ಯೋಚಿಸಿಲ್ಲ. ಆದರೀಗ ನಾನು ಸಿಎ ಓದುವತ್ತ ಗಮನ ಹರಿಸುವೆ’ ಎಂದು ವಿವರಿಸಿದರು.
‘ಕಷ್ಟಪಟ್ಟು ಓದಬೇಡಿ. ಸಬ್ಜೆಕ್ಟ್ ಅನ್ನು ಇಷ್ಟಪಟ್ಟು ಓದಬೇಕು. ದಿನಗಟ್ಟಲೇ ಓದುವ ಬದಲು ವಿಷಯ ಅರ್ಥ ಮಾಡಿಕೊಳ್ಳುವುದು ಮುಖ್ಯ’ ಎನ್ನುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಅರವಿಂದ್ ಶ್ರೀವತ್ಸ ಟಿಪ್ಸ್ ಕೊಟ್ಟರು. ಇನ್ನು ಈ ಸಾಧಕ ಓದುವುದಷ್ಟೇ ಅಲ್ಲ, ಕವಿತೆ ಬರೆಯುವಲ್ಲೂ ಬಿಜಿಯಾಗಿರ್ತಾರೆ. ಬಿಡುವಿನ ವೇಳೆ ಇಂಗ್ಲಿಷ್​ ಕವಿತೆ ಬರೆಯುತ್ತಾರಂತೆ.
ಕಲಾ ವಿಭಾಗದಲ್ಲಿ ರೈತನ ಮಗ ಕರಿಗೌಡ ದಾಸನಗೌಡ್ರ ರಾಜ್ಯಕ್ಕೆ ಟಾಪರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + three =
Remember me
