ಮೌಂಟ್​ ಮೌಂಗನುಯಿ:ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್​ ನಡುವಿನ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 65 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲ ಟ್ವೆಂಟಿ-20 ಅಂತಾರಾಷ್ಟ್ರಿಯ ಕ್ರಿಕೆಟ್​ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಬೇ ಓವಲ್​ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲೆಂಡ್​ ತಂಡ, ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ರನ್​ ಪೇರಿಸಲು ಹೆಣಗಾಡಿದ ಭಾರತ ತಂಡ, ನಂತರ ಉತ್ತಮ ಆಟ ಪ್ರದರ್ಶಿಸಿತು. ಭಾರತದ ಸೂರ್ಯಕುಮಾರ್​ 49 ಎಸೆತಗಳಲ್ಲಿ ಶತಕ ಬಾರಿಸಿದರು. ಒಟ್ಟು 51 ಬಾಲ್​ಗೆ 111 ರನ್​ ಗಳಿಸಿ ಔಟ್​ ಆಗದೆ ಉಳಿದರು.
20 ಓವರ್​ನಲ್ಲಿ 6 ವಿಕೆಟ್​ಗಳ ನಷ್ಟಕ್ಕೆ 191 ರನ್​ ಭಾರತ, ಎದುರಾಳಿ ತಂಡಕ್ಕೆ 192 ರನ್​ಗಳ ಗುರಿ ನೀಡಿತ್ತು. 18.5 ಓವರ್​ಗೆ ಆಲ್​ಔಟ್​ ಆದ ನ್ಯೂಜಿಲೆಂಡ್​ ತಂಡ, 126 ರನ್​ ಪಡೆದು ಹೀನಾಯ ಸೋಲು ಅನುಭವಿಸಿದೆ.
A well deserved Player of the Match award for@surya_14kumaras#TeamIndiawin by 65 runs in the 2nd T20I 👏👏
Scorecard –https://t.co/OvmynDiyd8#NZvINDpic.twitter.com/TuYSRsIIgQ
— BCCI (@BCCI)November 20, 2022

ಟೀಮ್​ ಇಂಡಿಯಾ ಭವಿಷ್ಯದ ಟಿ20 ತಂಡಕ್ಕಾಗಿ ಸೂಕ್ತ ಬ್ಯಾಟರ್​ಗಳನ್ನು ಹುಡುಕಾಟದಲ್ಲಿದ್ದು, ಹಂಗಾಮಿ ನಾಯಕನಾಗಿ ಹಾರ್ದಿಕ್​ ಪಾಂಡ್ಯಗೂ ಸರಣಿ ಮಹತ್ವ ಎನಿಸಿದೆ. ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವುದು ಕೊಂಚ ಒತ್ತಡ ಉಂಟುಮಾಡಿದೆ.
ಕಾಯಂ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಟ್​ ವಿರುದ್ಧ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಆಟವಾಡಿದ ಭಾರತದ ಯುವ ಆಟಗಾರರು ಪಂದ್ಯ ಗೆದ್ದು, ಭರವಸೆ ಮೂಡಿಸಿದರು. ಟಿ20 ವಿಶ್ವಕಪ್​ನಲ್ಲಿ ಆಡಿದ ಭಾರತ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಯುವ ಆಟಗಾರರ ಬಳಗ ಕಣಕ್ಕಿಳಿದಿತ್ತು.
ನ.22ರಿಂದ ರಾಜ್ಯದಲ್ಲಿ ಮತ್ತೆ ಮಳೆ: ಚಳಿಯೂ ಹೆಚ್ಚಳ

ನನ್ಗೆ ಸುಳ್ಳು ಹೇಳುವ ಚಟವಿಲ್ಲ, ನನ್ನ ಜತೆ ಎಚ್​ಡಿಕೆ ಫೋನ್​ ಸಂಪರ್ಕದಲ್ಲಿದ್ದಾರೆ… ಎನ್ನುತ್ತಲೇ ಅಂತೆ-ಕಂತೆಗೆ ತೆರೆ ಎಳೆದ ರಮೇಶ್ ಜಾರಕಿಹೊಳಿ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 16 =
Remember me
