ಇಂಫಾಲ್​:ಮಣಿಪುರದ ಚಾಂದೇಲ್​​ನಲ್ಲಿ ಸ್ಥಳೀಯ ಉಗ್ರರು ನಡೆಸಿದ ದಾಳಿಯಲ್ಲಿ ಆಸ್ಸಾಂ ರೈಫಲ್​ ನಾಲ್ಕನೇ ಘಟಕದ ಮೂರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲ್​ಗಿಂತ 100 ಕಿ.ಮೀ.ದೂರದಲ್ಲಿ ಈ ಘಟನೆ ನಡೆದಿದೆ. ಮಣಿಪುರದಲ್ಲಿರುವ ಪೀಪಲ್ಸ್ ಲಿಬರೇಶನ್​ ಆರ್ಮಿ (ಪಿಎಲ್​ಎ) ಎಂಬ ಹೆಸರಿನ ಉಗ್ರ ಸಂಘಟನೆ ಸುಧಾರಿತ ಸ್ಫೋಟಕ (ಐಇಡಿ)ಗಳನ್ನು ಬಳಸಿ ಯೋಧರತ್ತ ದಾಳಿ ನಡೆಸಿದೆ. ನಂತರ ಫೈರಿಂಗ್​ ಕೂಡ ನಡೆಸಿದ್ದಾರೆ.
ಈ ಪೀಪಲ್ಸ್​ ಲಿಬರೇಶನ್​ ಆರ್ಮಿ ಉಗ್ರರಿಗೆ ಚೀನಾದಿಂದ ನಿರಂತರವಾಗಿ ಆರ್ಥಿಕ ನೆರವು ಸಿಗುತ್ತದೆ. ಹಾಗೇ ಆ ದೇಶ ಶಸ್ತ್ರಾಸ್ತ್ರಗಳನ್ನೂ ಒದಗಿಸುತ್ತದೆ.
ಪಿಎಲ್​ಎ ಉಗ್ರರು ಭಾರತೀಯ ಸೈನಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುತ್ತಾರೆ. 2017ರಲ್ಲಿ ಕೂಡ ಮಣಿಪುರದ ಆಸ್ಸಾಂ ರೈಫಲ್ಸ್​ ಯೋಧರ ಮೇಲೆ ಇದೇ ಉಗ್ರರು ದಾಳಿ ಮಾಡಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಒಟ್ಟು ಆರು ಉಗ್ರರ ವಿರುದ್ಧ ಈ ಬಾರಿ ರಾಷ್ಟ್ರೀಯ ತನಿಖಾ ದಳ ಚಾರ್ಜ್​ ಶೀಟ್​ ದಾಖಲಿಸಿದೆ. (ಏಜೆನ್ಸೀಸ್​)
ಬೆಂಗಳೂರಿನಲ್ಲಿ ಕೋವಿಡ್​-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
