ನವದೆಹಲಿ:ಕೊವಿಡ್​ -19ರ ಲಾಕ್​ಡೌನ್​ ಕರ್ತವ್ಯದಲ್ಲಿದ್ದ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಇದಕ್ಕೆ ಕಾರಣ ಸುಳ್ಳು ಹೇಳಿದ್ದು.
ಮೂವರು ಪೊಲೀಸ್ ಪೇದೆಗಳೂ ಶಾಸ್ತ್ರಿ ಪಾರ್ಕ್​ ಪೊಲೀಸ್​ ಠಾಣೆಯವರು. ಆ ಠಾಣೆಯ ಸಬ್​ ಇನ್ಸ್​ಪೆಕ್ಟರ್​ಗೆ ಏಪ್ರಿಲ್​ 28ರಂದು ಕರೊನಾ ಸೊಂಕು ಇರುವುದು ದೃಢಪಟ್ಟಿತ್ತು.
ಸಬ್​ ಇನ್ಸ್​ಪೆಕ್ಟರ್​ಗೆ ಕರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ, ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಈ ಮೂವರು ಪೇದೆಗಳು ತಾವೂ ಸಹ ಸೋಂಕಿತ ಸಬ್​ ಇನ್ಸ್​ಪೆಕ್ಟರ್ ಜತೆಗೇ ಕಾರ್ಯನಿರ್ವಹಿಸಿದ್ದೇವೆ. ಅವರ ಪ್ರೈಮರಿ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದರು.ಅದನ್ನು ಮೊದಲು ಹಿರಿಯ ಅಧಿಕಾರಿಗಳು ನಂಬಿಕೊಂಡು, ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಮೂವರೂ ಪೇದೆಗಳು ಕರ್ತವ್ಯವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸುಳ್ಳು ಹೇಳಿದ್ದಾರೆ. ಇವರ್ಯಾರೂ ಆ ಪೊಲೀಸ್ ಅಧಿಕಾರಿಯ ಸಂಪರ್ಕಕ್ಕೆ ಹೋಗೇ ಇಲ್ಲ ಎಂಬುದು ಪರಿಶೀಲನೆ ಬಳಿಕ ಬೆಳಕಿಗೆ ಬಂತು.
ಸೋಂಕಿತ ಸಬ್​ ಇನ್ಸ್​ಪೆಕ್ಟರ್​​ಗೆ ಮೊದಲು ಏಪ್ರಿಲ್​ 21ರಂದು ಜ್ವರ ಕಾಣಿಸಿಕೊಂಡಿತ್ತು. ಅಂದೇ ಅವರಿಗೆ ರಜೆ ಕೊಟ್ಟು ಮನೆಗೆ ಕಳಿಸಲಾಗಿತ್ತು. ಆ ಮೇಲೆ ಅವರು ಠಾಣೆಗೆ ಬಂದೇ ಇರಲಿಲ್ಲ. ಮೊದಲೂ ಕೂಡ ಈ ಮೂವರು ಪೇದೆಗಳು ಅವರ ಸಂಪರ್ಕಕ್ಕೆ ಹೋಗಿರಲಿಲ್ಲ ಎಂದು ಪೊಲೀಸ್​ ಉಪ ಆಯುಕ್ತ ಹರೇಂದ್ರ ಕುಮಾರ್​ ಸಿಂಗ್​ ತಿಳಿಸಿದ್ದಾರೆ.
ಹಲಸಿನ ಹಣ್ಣಿಗೂ ತಗ್ಗಿದ ಬೇಡಿಕೆ, ಬೆಳೆಗಾರರು, ಗುತ್ತಿಗೆ ಪಡೆದ ವ್ಯಾಪಾರಿಗಳಿಗೆ ನಷ್ಟ, ಉತ್ತಮ ಇಳುವರಿ ಬಂದರೂ ಮಾರುಕಟ್ಟೆ ಇಲ್ಲ
ಪೇದೆಗಳು ಹೀಗೆ ಸುಳ್ಳು ಹೇಳುವ ಬದಲು ರಜೆ ಕೇಳಬಹುದಿತ್ತು. ವಿಶ್ರಾಂತಿ ಬೇಕು ಎಂದು ಹೇಳಬಹುದಿತ್ತು. ಪೊಲೀಸ್​ ಸಿಬ್ಬಂದಿಯನ್ನು ರೊಟೇಶನ್​ನಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಹಾಗಾಗಿ ಯಾರಿಗೂ ಬರ್ಡನ್​ ಆಗುತ್ತಿಲ್ಲ. ಇಷ್ಟಾದರೂ ಸುಳ್ಳು ಹೇಳಿದ್ದರಿಂದ ಅಮಾನತು ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.ಇವರನ್ನು ಹೊರತು ಪಡಿಸಿ ಇನ್ನು ಮೂವರು ಪೇದೆಗಳು ಸೋಂಕಿತ ಸಬ್​ ಇನ್ಸ್​ಪೆಕ್ಟರ್​ ಜತೆ ಕೆಲಸ ಮಾಡಿದ್ದರು. ಹಾಗಾಗಿ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಕೊವಿಡ್​-19 ಟೆಸ್ಟ್ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. (ಏಜೆನ್ಸೀಸ್​)
ಇದನ್ನೂ ಓದಿ:ಸುಂದರಿ ಅಂತ ನಿನ್ನ ಸೆಲೆಕ್ಟ್ ಮಾಡಿಲ್ಲ … ಹಾಗಂತ ಅನುಷ್ಕಾ ಶರ್ಮಗೆ ಹೇಳಿದ್ದು ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
