ಭುವನೇಶ್ವರ:ಪುರಿಯಲ್ಲಿ ಬುಧವಾರ ಜಗನ್ನಾಥ ದೇವರ ಚಂದನ್ ಯಾತ್ರೆಯ ವೇಳೆ ಪಟಾಕಿ ಸಿಡಿದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದು, 30 ಭಕ್ತರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ ಅಘೋರಿಗಳಿಂದ ನನ್ನ ಮೇಲೆ ದೊಡ್ಡ ಪ್ರಯೋಗ ನಡೀತಿದೆ: ಡಿ.ಕೆ. ಶಿವಕುಮಾರ್​ ಹೊಸ ಬಾಂಬ್
ಚಂದನ್ ಯಾತ್ರೆ ಅಂಗವಾಗಿ ನರೇಂದ್ರ ಕೊಳದಲ್ಲಿ ಮೂರು ಪ್ರಧಾನ ದೇವರುಗಳಾದ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾರ ‘ಚಾಪಾ ಖೇಲಾ’ದ ಸಮಯದಲ್ಲಿ ಪಟಾಕಿಗಳನ್ನು ಸ್ಫೋಟಿಟಿಸಿದ್ದರಿಂದ ದುರ್ಘಟನೆ ಸಂಭವಿಸಿತು.
ಪಟಾಕಿಗಳ ಸಿಡಿತದಿಂದ ತೀವ್ರ ಸುಟ್ಟಗಾಯಗಳಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದ ಬಾಲಕ ಮತ್ತು ಭುವನೇಶ್ವರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ, ಖುರ್ದಾ ಕಲೆಕ್ಟರ್ ಚಂಚಲ್ ರಾಣಾ ಮತ್ತು ಆರೋಗ್ಯ ಕಾರ್ಯದರ್ಶಿ ಶಾಲಿನಿ ಪಂಡಿತ್ ಅವರು ಬುಧವಾರ ತಡರಾತ್ರಿ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪವಿತ್ರ ಕೊಳದಲ್ಲಿ ಜಲಕ್ರೀಡೆಯನ್ನು ವೀಕ್ಷಿಸಲು ಅಲ್ಲಿ ನೆರೆದಿದ್ದ ಭಕ್ತರ ಮೇಲೆ ಸಿಡಿದ ಪಟಾಕಿ ಕಿಡಿಗಳು ಬಿದ್ದಿವೆ. ಜನಸಾಗರ ನೆರೆದಿದ್ದರೂ ಅಗ್ನಿ ಸುರಕ್ಷತಾ ಕ್ರಮ ಇರಲಿಲ್ಲ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಇಲ್ಲಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದರು. ಪಟ್ನಾಯಕ್ ತಮ್ಮ ಎಕ್ಸ್ ಖಾತೆಯಲ್ಲಿ “ಪುರಿ ಘಟನೆ ಬಗ್ಗೆ ವಿಷಾದವಿದೆ. ಗಾಯಾಳುಗಳ ಚಿಕಿತ್ಸೆಯ ಮೇಲ್ವಿಚಾರಣೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಿದ್ದ ಶ್ರೀಲೀಲಾ! ಕಾರಣ ಇದೇ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
