ನವದೆಹಲಿ:ನಿರ್ಭಯಾ ಅತ್ಯಾಚಾರ ಅಪರಾಧಿಗಳು ಅಷ್ಟು ಸುಲಭಕ್ಕೆ ಗಲ್ಲುಶಿಕ್ಷೆಯನ್ನು ಒಪ್ಪಿಕೊಳ್ಳುವಂತೆ ಕಾಣಿಸುತ್ತಿಲ್ಲ. ಮರಣದಂಡನೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಪಟಿಯಾಲಾ ಕೋರ್ಟ್​ ವಜಾಗೊಳಿಸಿ, ಮಾ.20ರಂದು ಗಲ್ಲುಶಿಕ್ಷೆ ಫಿಕ್ಸ್​ ಎಂದು ಆದೇಶ ನೀಡಿತ್ತು. ಆದರೆ ಈಗ ಮೂವರು ಅಪರಾಧಿಗಳು ಮತ್ತೊಂದು ಕಾನೂನು ಹೋರಾಟ ನಡೆಸಿದ್ದಾರೆ.
ದೆಹಲಿ ಪಟಿಯಾಲಾ ಕೋರ್ಟ್​ ಅರ್ಜಿ ವಜಾ ಮಾಡುತ್ತಿದ್ದಂತೆ ಅಪರಾಧಿಗಳಾದ ಅಕ್ಷಯ್​, ಪವನ್​ ಗುಪ್ತಾ ಮತ್ತು ವಿನಯ್​ ಶರ್ಮಾ ತಮ್ಮ ವಕೀಲ ಎ.ಪಿ.ಸಿಂಗ್​ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗಲ್ಲುಶಿಕ್ಷೆಗೆ ತಡೆಕೋರಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ಪಟಿಯಾಲಾ ಹೌಸ್​ ಕೋರ್ಟ್​ನ ತೀರ್ಪು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಮನಮೋಹನ್​ ನೇತೃತ್ವದ ಪೀಠ ನಿರ್ಭಯಾ ಅತ್ಯಾಚಾರ ಅಪರಾಧಿಗಳ ಅರ್ಜಿಯನ್ನು ಇಂದು ರಾತ್ರಿಯೇ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. (ಏಜೆನ್ಸೀಸ್​)
ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಈ ಬಾರಿ ಮಿಸ್​ ಆಗಲ್ಲ ಗಲ್ಲು…; ದೆಹಲಿ ಪಟಿಯಾಲಾ ಕೋರ್ಟ್​ ತೀರ್ಪು ಕೇಳಿ ಮೂರ್ಛೆ ಹೋದ ಅಪರಾಧಿಯ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 1 =
Remember me
