ನವದೆಹಲಿ:ರಾಜಸ್ಥಾನದ ಬಂಡಾಯವನ್ನು ಕಟ್ಟುನಿಟ್ಟಿನ ಕ್ರಮದ ಮೂಲಕವೇ ಕಾಂಗ್ರೆಸ್​ ನಿರ್ವಹಿಸಿದೆ. ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಸಚಿನ್​ ಪೈಲಟ್​ನನ್ನು ಕೆಳಗಿಳಿಸಿದೆ. ಆದರೆ, ಇಷ್ಟೆಲ್ಲ ಆದ ಬಳಿಕ ಪೈಲಟ್​ ಮುಂದಿನ ಆಯ್ಕೆಗಳೇನು ಎಂಬ ಕುತೂಹಲವಂತೂ ಇದ್ದೇ ಇದೆ.
ಆದರೆ, ಪೈಲಟ್​ ವಿರುದ್ಧ ಕಾಂಗ್ರೆಸ್​ ಕಠಿಣ ಕ್ರಮಕ್ಕೆ ಮುಂದಾಗಲು ಕಾರಣಗಳೇನು ಎಂಬ ವಿಶ್ಲೇಷಣೆ ನಡೆಸಲಾಗುತ್ತಿದೆ. ಪೈಲಟ್​ ಹೈಕಮಾಂಡ್​ ಮುಂದಿಟ್ಟ ಮೂರು ಬೇಡಿಕೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಇದನ್ನೂ ಓದಿ;ರಾಜಸ್ಥಾನ ಡಿಸಿಎಂ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಸಚಿನ್​ ಪೈಲಟ್​ಗೆ ಕೊಕ್​; ಕಾಂಗ್ರೆಸ್​ ಘೋಷಣೆ
ಮೊದಲ ಬೇಡಿಕೆ ಏನೆಂದರೆ, ರಾಜ್ಯ ಚುನಾವಣೆಗೆ ಒಂದು ವರ್ಷಕ್ಕೆ ಮುನ್ನವೇ ತನ್ನನ್ನು ರಾಜಸ್ಥಾನದ ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು. ಸಾರ್ವಜನಿಕವಾಗಿ ಇದನ್ನು ಘೋಷಿಸಬೇಕು ಎಂದು ಈ ಹಿಂದೆಯೇ ಅವರು ಒತ್ತಾಯಿಸಿದ್ದರು.
ಇನ್ನು ಎರಡನೇ ಬೇಡಿಕೆ ಎಂದರೆ, ತನ್ನೊಂದಿಗೆ ಕೈಜೋಡಿಸಿರುವ ಬೆಂಬಲಿಗರಿಗೆ ಅಂದರೆ ಪಕ್ಷದ ದೃಷ್ಟಿಯಲ್ಲಿ ಬಂಡಾಯವೆದ್ದಿರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಅಥವಾ ನಿಗಮ, ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದು.
ಇದನ್ನೂ ಓದಿ;ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!
ಕೊನೆಯ ಬೇಡಿಕೆಯಾಗಿ ರಾಜಸ್ಥಾನದ ಕಾಂಗ್ರೆಸ್​ ಉಸ್ತುವಾರಿಯಾಗಿರುವ ಅವಿನಾಶ್ ಪಾಂಡೆಯನ್ನು ಬದಲಾಯಿಸುವುದು. ಪಾಂಡೆ ಸಿಎಂ ಪಕ್ಷಪಾತಿ ಎನ್ನುವುದು ಪೈಲಟ್​ ಆರೋಪ. ಇವರ ಜಾಗಕ್ಕೆ ಬೇರೋಬ್ಬರನ್ನು ನೇಮಿಸಿದರೆ ರಾಜ್ಯದಲ್ಲಿ ಪರಿಸ್ಥಿತಿ ಬದಲಾಗುತ್ತದೆ ಎಂಬ ವಾದ ಪೈಲಟ್​ ಬಣದ್ದು.
ಆದರೆ, ಈ ಬೇಡಿಕೆಗಳು ಬ್ಲ್ಯಾಕ್​ಮೇಲ್​ ರೂಪದಲ್ಲಿವೆ. ಒಂದು ವೇಳೆ ಇದಕ್ಕೆ ಮಣಿದರೆ, ಬೇರೆ ರಾಜ್ಯಗಳಲ್ಲೂ ಇಂಥದ್ದೇ ಪರಿಸ್ಥಿತಿ ಎದುರಾಗಬಹುದು ಎಂಬ ಕಾರಣಕ್ಕೆ ಹೈಕಮಾಡ್​ ಇದಕ್ಕೆ ಮಣಿದಿಲ್ಲ ಎಂದು ಹೇಳಲಾಗಿದೆ.
ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
