ಚಂಡೀಗಢ:ಹರಿಯಾಣದ ನುಹ್ ಪ್ರದೇಶದಲ್ಲಿ ಸೋಮವಾರ ವಿಶ್ವ ಹಿಂದು ಪರಿಷತ್​ (ವಿಎಚ್​ಪಿ) ಮೆರವಣಿಗೆಯ ಸಮಯದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಇಬ್ಬರು ಹೋಮ್​ ಗಾರ್ಡ್​ ಹಾಗೂ ಓರ್ವ ನಾಗರಿಕ ಸೇರಿದಂತೆ ಮೂವರು ಮೃತಪಟ್ಟಿದ್ದು, ಅನೇಕ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ.
ಹರಿಯಾಣದ ನುಹ್‌ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಕೆಲ ಗುಂಪಿನ ಜನರು ವಿಶ್ವ ಹಿಂದು ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಹಿಂಸಾಚಾರ ಮೊದಲು ಭುಗಿಲೆದ್ದಿತು. ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದರಿಂದ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.
ಇದನ್ನೂ ಓದಿ:ಇಂದಿನಿಂದ ದುನಿಯಾ ಮತ್ತಷ್ಟು ದುಬಾರಿ: ಹಾಲು, ತರಕಾರಿ, ಹೋಟೆಲ್​ ತಿನಿಸು ಎಲ್ಲವು ತುಟ್ಟಿ, ಗ್ರಾಹಕರ ಜೇಬಿಗೆ ಕತ್ತರಿ
ಹಿಂಸಾಚಾರದ ಸುದ್ದಿ ಹರಡುತ್ತಿದ್ದಂತೆ, ಎರಡು ಸಮುದಾಯಗಳ ಪ್ರತಿಭಟನಾಕಾರರು ಗುರುಗ್ರಾಮದ ಸೊಹ್ನಾ ರಸ್ತೆಯ ಬಳಿ ಗಲಾಟೆ ನಡೆಸಿದರು. ಇದರ ಪರಿಣಾಮವಾಗಿ ಹಲವಾರು ವಾಹನಗಳಿಗೆ ಹಾನಿಯಾಗಿದೆ. ಪ್ರತಿಭಟನಾಕಾರರು ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿರುವ ಎಲ್ಲ ಶಾಲಾ ಮತ್ತು ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಗುರುಗ್ರಾಮ ಮತ್ತು ನುಹ್‌ನಲ್ಲಿ ಕೋಡ್​ ಆಫ್​ ಕ್ರಿಮಿನಲ್​ ಪ್ರೊಸಿಜರ್​ (ಸಿಆರ್​ಪಿಸಿ) ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.
ತೀವ್ರವಾಗಿ ಕೋಮು ಉದ್ವಿಗ್ನತೆಯನ್ನು ನಿಯಂತ್ರಿಸಲು ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್​ನೆಟ್​ ಸೇವೆಗಳನ್ನು ಆಗಸ್ಟ್ 2ರ ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ. ಫರಿದಾಬಾದ್​ನ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾರ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಮತ್ತು ಕೋಚಿಂಗ್ ಸೆಂಟರ್‌ಗಳು ಇಂದು ಮುಚ್ಚಿವೆ.
ಇದನ್ನೂ ಓದಿ:ಸಂಪಾದಕೀಯ | ಅನ್ಯ ಉದ್ದೇಶಕ್ಕೆ ಬಳಕೆ ಸಲ್ಲದು: ಎಸ್​ಸಿಎಸ್​ಪಿ/ಟಿಎಸ್​ಪಿ ಯೋಜನೆ ಅನುಷ್ಠಾನ
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಹಿಂಸಾಚಾರದಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.(ಏಜೆನ್ಸೀಸ್​)
ಇಂದಿನಿಂದ ದುನಿಯಾ ಮತ್ತಷ್ಟು ದುಬಾರಿ: ಹಾಲು, ತರಕಾರಿ, ಹೋಟೆಲ್​ ತಿನಿಸು ಎಲ್ಲವು ತುಟ್ಟಿ, ಗ್ರಾಹಕರ ಜೇಬಿಗೆ ಕತ್ತರಿ

ಈರುಳ್ಳಿಗೆ ಗುಡ್​ಬೈ, ಪರ್ಯಾಯ ಬೆಳೆಗೆ ಜೈ

ಸ್ಥಳ ತೋರಿಸದೆ ವರ್ಗ, ಪಿಡಿಒಗಳು ಕಂಗಾಲು: ಆಯುಕ್ತಾಲಯದಲ್ಲಿ ಹಾಜರಿ ಹಾಕುವ ಪಜೀತಿ, ರಚನೆಯಾಗದ ವೃಂದ-ನೇಮಕಾತಿ ನಿಯಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
