ಚಂಡೀಗಢ:ಹರಿಯಾಣದ ಕರ್ನಲ್​ ಜಿಲ್ಲೆಯ ಮರ್ದನ್ಹೇರಿ ಗ್ರಾಮದ ಅಸ್ಸಾಂಧ್​-ಕೈಥಲ್​ ರಸ್ತೆಯಲ್ಲಿ ಪೊಲೀಸ್​ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ನೇಹಿತರು ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ ರಾತ್ರು ಘಟನೆ ನಡೆದಿದ್ದು, ಇಬ್ಬರು ಪೊಲೀಸ್​ ಸಿಬ್ಬಂದಿಯು ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಜಿಂದ್​ ಜಿಲ್ಲೆಯ ಸಫಿದಾನ್ ಪಟ್ಟಣದ ಪ್ರಯಾಗ್​ (20) ಮತ್ತು ಕಾರ್ತಿಕ್​ (26) ಹಾಗೂ ಕೈಥಲ್​ನ ಡಿಯೋರಾ ಗ್ರಾಮದ ಸವಿಂದರ್​ ಸಿಂಗ್​ (32) ಎಂದು ಗುರುತಿಸಲಾಗಿದೆ. ಗಾಯಾಳು ಪೇದೆಗಳಾದ ವೇದ್​ ಪ್ರಕಾಶ್​ ಮತ್ತು ಸಮಿತ್​ ಕುಮಾರ್​ಗೆ ಚಿಕಿತ್ಸೆ ಮುಂದುವರಿದಿದೆ. ​
ಇದನ್ನೂ ಓದಿ:ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್​ ಶಾಸಕರೇ ಬಿಚ್ಚಿಟ್ಟ ಸತ್ಯ ಇದು…
ಮೂಲಗಳ ಪ್ರಕಾರ ಡಿಸೆಂಬರ್​ 25ರಂದು ಸವಿಂದರ್​ ಸಿಂಗ್​ಗೆ ಮದುವೆ ನಿಶ್ಚಯವಾಗಿತ್ತು. ಮೂವರು ಸ್ನೇಹಿತರು ಮದುವೆ ಶಾಪಿಂಗ್​ ಮುಗಿಸಿ ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಕಾರಿಗೆ ಎದುರಾದ ಪೊಲೀಸ್​ ವಾಹನವು ಇತ್ತೀಚೆಗೆ ಕೈಥಾಲ್​ನಿಂದ ಪಾಣಿಪತ್​ಗೆ ವರ್ಗಾವಣೆಯಾದ ಪೊಲೀಸ್​ ವರಿಷ್ಠಾಧಿಕಾರಿ ಶಶಾಂಕ್​ ಕುಮಾರ್​ರನ್ನು ಬರಮಾಡಿಕೊಳ್ಳಲು ತೆರಳುತ್ತಿತ್ತು.
ಟ್ರ್ಯಾಕ್ಟರ್​ ಟ್ರೈಲರ್​ ಇದ್ದಕ್ಕಿದ್ದಂತೆ ಎದುರಾಗಿದ್ದರಿಂದ ಅದನ್ನು ತಪ್ಪಿಸಲು ಜೋರಾಗಿ ಬ್ರೇಕ್​ ಹಾಕಿದರೂ ಪೊಲೀಸ್​ ವಾಹನ ಕೊನೆಗೆ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ನಾನಿನ್ನು ಚಿಕ್ಕ ಹುಡುಗಿ ಸದ್ಯಕ್ಕೆ ಆ ಮಾತು ಕೇಳಲೇಬೇಡಿ ಎಂದ ಅನುಪಮಾ ಪರಮೇಶ್ವರನ್​..!
https://www.vijayavani.net/lady-si-romance-with-married-constable-in-nellore/
ಎಲ್ಲರಂಥಲ್ಲ ಈ ವೈದ್ಯೆ: 10 ರೂಪಾಯಿ ಕೊಟ್ಟರೆ ಸಾಕು, ಕಾಯಿಲೆಗಳೆಲ್ಲವೂ ವಾಸಿ!

ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + four =
Remember me
