ನವದೆಹಲಿ:ಭಾರತೀಯ ಸಂಸ್ಕೃತಿಯಲ್ಲಿ ಮದುವೆಯನ್ನು ಅತ್ಯಂತ ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ.  ಗಂಡ ಹೆಂಡತಿ ಪರಸ್ಪರರ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಈಗ ಎರಡು ಬಾರಿ ಮದುವೆಯಾದ ಟೀಂ ಇಂಡಿಯಾ ಕ್ರಿಕೆಟಿಗರ ಬಗ್ಗೆ ತಿಳಿಯೋಣ. ಈ ಪಟ್ಟಿಯಲ್ಲಿ ಅಗ್ರ 3 ಕ್ರಿಕೆಟಿಗರು ಇದ್ದಾರೆ. ಅವರು ಯಾರು ಎಂದು ನಿಮಗೆ ಇಂದು ನಾವು ತಿಳಿಸಿ ಕೊಡುತ್ತೇವೆ.
ವಿನೋದ್ ಕಾಂಬ್ಳಿ ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಮೂರು ವಿಭಿನ್ನ ರಾಷ್ಟ್ರಗಳ ವಿರುದ್ಧ ಮೂರು ಇನ್ನಿಂಗ್ಸ್‌ಗಳಲ್ಲಿ ಸತತ ಮೂರು ಟೆಸ್ಟ್ ಶತಕಗಳನ್ನು ಗಳಿಸಿದರು.  ಅವರ ವೈಯಕ್ತಿಕ ಜೀವನವು ಅನೇಕ ಸವಾಲುಗಳನ್ನು ಎದುರಿಸಿತು. ಅವರ ಮೊದಲ ಮದುವೆ ನೊಯೆಲ್ಲಾ ಲೂಯಿಸ್ ಅವರನ್ನು ಆಗಿದ್ದರು. ಆದರೆ ದಂಪತಿ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ ದಂಪತಿ ಬೇರ್ಪಟ್ಟರು. ನಂತರ ಅವರು ಫ್ಯಾಶನ್ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ವಿವಾಹವಾಗಿ ಇಂದು ಸುಖಃ ಜೀವನ ನಡೆಸುತ್ತಿದ್ದಾರೆ.

“ಮೈಸೂರು ಎಕ್ಸ್‌ಪ್ರೆಸ್” ಎಂದು ಕರೆಯಲ್ಪಡುವ ಜಾವಗಲ್ ಶ್ರೀನಾಥ್ ಕೂಡ ಎರಡು ಬಾರಿ ವಿವಾಹವಾದರು. 1999 ರಲ್ಲಿ ಜ್ಯೋತ್ಸ್ನಾ ಅವರೊಂದಿಗೆ ಅವರ ಮೊದಲ ವಿವಾಹವಾಗಿತ್ತು. ಆದಾಗ್ಯೂ, ಅವರ ಮದುವೆಯು 9 ವರ್ಷಗಳ ನಂತರ ಕೊನೆಗೊಂಡಿತು. ಸ್ವಲ್ಪ ಸಮಯದ ನಂತರ, ಅವರು ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ಎರಡನೇ ವಿವಾಹವಾದರು. ಈಗ ಇಬ್ಬರೂ ಒಟ್ಟಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ.
ದಿನೇಶ್ ಕಾರ್ತಿಕ್ ಅವರ  ಮೊದಲ ಪತ್ನಿ ನಿಕಿತಾ ವಂಜಾರಾ.  2007 ರಲ್ಲಿ ನಿಕಿತಾ ಅವರನ್ನು ವಿವಾಹವಾದರು. ದಿನೇಶ್​​ ಕಾರ್ತಿಕ್​ ಅವರ ಪತ್ನಿ ನಿಕಿತಾ ಅವರಿಗೆ ಪತಿಯ ಸಹ ಕ್ರಿಕೆಟಿಗ ಮುರಳಿ ವಿಜಯ್ ಜತೆ ಸಂಬಂಧದಲ್ಲಿದ್ದರು. ಹೀಗಾಗಿ  ಈ ಜೋಡಿ 2012ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.  ನಂತರ ದಿನೇಶ್ ಕಾರ್ತಿಕ್ 2015 ರಲ್ಲಿ ಮಾಜಿ ವಿಶ್ವದ 10 ರ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರೊಂದಿಗೆ ನಡೆಯಿತು. ಈಗ ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eight =
Remember me
