ಮುಂಬೈ:ವರ್ಲಿ ಸೀ ಲಿಂಕ್‌ನಲ್ಲಿರುವ ಬಾಂದ್ರಾದ ಟೋಲ್ ಪ್ಲಾಜಾದಲ್ಲಿ ಗುರುವಾರ (ನ.10) ರಾತ್ರಿ 10 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಟೋಲ್​ ಬಳಿ ಸರತಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಹಬ್ಬದ ಸೀಸನ್​​​​ನಲ್ಲಿ ಗ್ರಾಮೀಣ ಭಾಗದ ಎಫ್‌ಎಂಸಿಜಿ ಮಾರಾಟ ಕಳೆದ ವರ್ಷಕ್ಕಿಂತ ಹೆಚ್ಚಳ
ಉತ್ತರ ದಿಕ್ಕಿನ ಲೇನ್‌ನಲ್ಲಿ ಸಮುದ್ರ ಸಂಪರ್ಕಿಸುವ ಬಾಂದ್ರಾ ಟೋಲ್ ಬೂತ್‌ಗೆ ಸುಮಾರು 100 ಮೀಟರ್ ಮೊದಲು ಇನ್ನೋವಾ ಕಾರೊಂದು ಮರ್ಸಿಡಿಸ್ ಬೆಂಜ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅಪಘಾತ ಸಂಭವಿಸಿದೆ ಎಂದು ವಲಯ 9ರ ಉಪ ಪೊಲೀಸ್ ಆಯುಕ್ತ (DCP) ಕೃಷ್ಣಕಾಂತ್ ಉಪಾಧ್ಯಾಯ ಹೇಳಿದ್ದಾರೆ.
“ಅಪಘಾತ ಸಂಭವಿಸಿದ ಬೆನ್ನಲ್ಲೇ ಇನ್ನೋವಾ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ವಾಹನವು ಟೋಲ್ ಬೂತ್ ತಲುಪುತ್ತಿದ್ದಂತೆ, ಹಲವಾರು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು” ಎಂದು ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ:ಬರ ಮಧ್ಯದಲ್ಲಿ ವಿನಯ್​ ಕುಲಕರ್ಣಿ ಹುಟ್ಟುಹಬ್ಬದಲ್ಲಿ ಸಚಿವರ ಮೋಜು ಮಸ್ತಿ
“ಇನ್ನೋವಾ ಚಾಲಕ ಸೇರಿದಂತೆ ಗಾಯಗೊಂಡಿರುವ ಆರು ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಯ ಮಾಹಿತಿಯಂತೆ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 10ರಿಂದ 12 ಮಂದಿ ಗಾಯಗೊಂಡಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಬಾಂದ್ರಾ ಪಶ್ಚಿಮದಲ್ಲಿರುವ ಭಾಭಾ ಆಸ್ಪತ್ರೆಗೆ ದಾಖಲಿಸಿದ್ದಾರೆ(ಏಜೆನ್ಸೀಸ್).
ದಿಗ್ಗಜ ನಟ ಕೃಷ್ಣ ಅವರ ಪ್ರತಿಮೆ ಅನಾವರಣಗೊಳಿಸಿದ ಕಮಲ್ ಹಾಸನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
