ನವದೆಹಲಿ:ವಿಪಕ್ಷಗಳ ಸಭಾತ್ಯಾಗ ಹಾಗೂ ತೀವ್ರ ವಿರೋಧ ನಡುವೆಯೇ ಮೂರು ಪ್ರಮುಖ ಕಾರ್ವಿುಕ ಸುಧಾರಣಾ ಮಸೂದೆಗಳನ್ನು ಮುಂಗಾರು ಅಧಿವೇಶನದ ಕೊನೆಯ ದಿನವಾದ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಕಾರ್ವಿುಕ ಸಚಿವ ಸಂತೋಷ್ ಗಂಗ್ವಾರ್, ಕಾರ್ವಿುಕ ವಲಯದ ಸುಧಾರಣೆಗಳು ಬದಲಾದ ವ್ಯಾಪಾರ ವಾತಾವರಣಕ್ಕೆ ತಕ್ಕಂತೆ ಪಾರದರ್ಶಕ ವ್ಯವಸ್ಥೆ ಒದಗಿಸಲಿವೆ. ಕಾರ್ವಿುಕರ ಹಿತಾಸಕ್ತಿಯನ್ನು ಕಾಪಾಡುವುದರ ಜತೆಗೆ ಅವರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುತ್ತವೆ ಎಂದು ತಿಳಿಸಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಬಳಿಕ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ.
ಸಾಮಾಜಿಕ ಸುರಕ್ಷತಾ ಮಸೂದೆ:ಕಾರ್ವಿುಕರಿಗೆ ಇಎಸ್​ಐಸಿ ಅಡಿಯಲ್ಲಿ ಆರೋಗ್ಯ ಭದ್ರತೆ ಹಕ್ಕನ್ನು ಒದಗಿಸುವ ಗುರಿ ಹೊಂದಿದ್ದು, ದೇಶದ ಎಲ್ಲ 740 ಜಿಲ್ಲೆಗಳಲ್ಲಿ ಈಗ ಇಎಸ್​ಐಸಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಪ್ರಸ್ತುತ 566 ಜಿಲ್ಲೆಗಳಲ್ಲಿ ಮಾತ್ರ ಈ ಸೌಲಭ್ಯ ಇದೆ. ಇನ್ನುಮುಂದೆ 20 ಕಾರ್ವಿುಕರನ್ನು ಹೊಂದಿರುವ ಎಲ್ಲ ಸಂಸ್ಥೆಗಳಲ್ಲಿ ಇಪಿಎಫ್​ಒ ವ್ಯಾಪ್ತಿ ಅನ್ವಯವಾಗುತ್ತದೆ. ಪ್ಲಾಟ್​ಫಾಮ್ರ್ ವರ್ಕರ್ ಅಥವಾ ಗಿಗ್ ವರ್ಕರ್​ನಂತಹ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ರಚಿಸಲಾದ ಹೊಸ ರೀತಿಯ ಉದ್ಯೋಗಗಳನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರುವ ಕೆಲಸವನ್ನು ಈ ಕಾಯ್ದೆಯಲ್ಲಿ ಮಾಡಲಾಗಿದೆ. ಈ ವರ್ಗದ ಕಾರ್ವಿುಕರನ್ನು ಸಾಮಾಜಿಕ ಭದ್ರತೆಗೆ ಒಳಪಡಿಸುವ ಅಭೂತಪೂರ್ವ ಹೆಜ್ಜೆ ಇಟ್ಟ ಕೆಲವೇ ದೇಶಗಳಲ್ಲಿ ಭಾರತವೂ ಒಂದು.
ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ವಾತಾವರಣ ಮಸೂದೆ: ಕಾರ್ವಿುಕರಿಗಾಗಿ ಉದ್ಯೋಗದಾತರಿಂದ ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಲಾಗುತ್ತದೆ. ಕಾರ್ವಿುಕರಿಗೆ ಮೊದಲ ಬಾರಿಗೆ ನೇಮಕಾತಿ ಪತ್ರವನ್ನು ಪಡೆಯುವ ಕಾನೂನು ಹಕ್ಕನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಜತೆಗೆ ಸಿನಿ ವರ್ಕರ್​ಗಳನ್ನು ಆಡಿಯೊ ವಿಷಲ್ ವರ್ಕರ್​ಗಳು ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಹೆಚ್ಚು ಹೆಚ್ಚು ಕಾರ್ವಿುಕರು ಒಎಚ್​ಎಸ್ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ. ಈ ಮೊದಲು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಕಲಾವಿದರಿಗೆ ಮಾತ್ರ ಈ ಭದ್ರತೆ ನೀಡಲಾಗುತ್ತಿತ್ತು.
ಕೈಗಾರಿಕೆ ಕುರಿತ ಮಸೂದೆ:ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಒಬ್ಬ ಸದಸ್ಯರ ಬದಲು ಇಬ್ಬರು ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಒಬ್ಬ ಸದಸ್ಯರ ಅನುಪಸ್ಥಿತಿಯಲ್ಲಿ, ಮತ್ತೊಬ್ಬ ಸದಸ್ಯರು ಕೆಲಸಗಳನ್ನು ನಡೆಸಬಹುದು. ರಾಜಿ ಹಂತದಲ್ಲಿ ವಿವಾದಗಳು ಬಗೆಹರಿಯದಿದ್ದಲ್ಲಿ ಅಂಥಹ ವಿಷಯಗಳ್ನು ನೇರವಾಗಿ ನ್ಯಾಯಮಂಡಳಿಗೆ ಕೊಂಡೊಯ್ಯಲು ಅವಕಾಶವಿದೆ. ಇದಕ್ಕೂ ಮೊದಲು ಯಾವುದೇ ವಿವಾದ ಪ್ರಕರಣವನ್ನು ಸರ್ಕಾರದ ಮೂಲಕ ನ್ಯಾಯಮಂಡಳಿಗೆ ನೀಡಲಾಗುತ್ತಿತ್ತು.
ರಾಷ್ಟ್ರಪತಿಗೆ ಪ್ರತಿಪಕ್ಷಗಳ ಮನವಿ
ಸಂಸತ್ತು ಅಂಗೀಕರಿಸಿರುವ ಕೃಷಿ ಮಸೂದೆಗಳಿಗೆ ಒಪ್ಪಿಗೆ ನೀಡದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಮನವಿ ಮಾಡಿದ್ದಾರೆ. ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಎಲ್ಲ ವಿಪಕ್ಷಗಳ ಪರವಾಗಿ ರಾಷ್ಟ್ರಪತಿ ಕೋವಿಂದ ಅವರನ್ನು ಆಜಾದ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೃಷಿ ಮಸೂದೆಗಳು ಅಸಂವಿಧಾನಿಕ ರೀತಿಯಲ್ಲಿ ಅಂಗೀಕರಿಸಲ್ಪಟ್ಟಿವೆ. ಸದನದಲ್ಲಿ ಉಂಟಾದ ಕೋಲಾಹಲಕ್ಕೆ ಸರ್ಕಾರ ಕಾರಣವೇ ಹೊರತು ವಿಪಕ್ಷಗಳಲ್ಲ ಎಂದು ಆಜಾದ್ ಹೇಳಿದ್ದಾರೆ.
ಪಾಸಾದ ಮಸೂದೆಗಳು
ರಾಜ್ಯಸಭೆಯಲ್ಲಿ ಶೇ.100 ಉತ್ಪಾದಕತೆ
ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಶೇ.100 ಉತ್ಪಾದಕತೆಯನ್ನು ದಾಖಲಿಸಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕುಗೊಂಡಿದ್ದರಿಂದ ನಿಗದಿತ 18 ಕಲಾಪಗಳ ಬದಲಾಗಿ 10 ಕಲಾಪಗಳು ನಡೆದಿವೆ. ಮೇಲ್ಮನೆಯಲ್ಲಿ ಒಟ್ಟು 25 ಮಸೂದೆಗಳನ್ನು ಅಂಗೀಕರಿಸಲಾಗಿದೆೆ. ಕಳೆದ ಎರಡು ದಿನಗಳಲ್ಲಿ ವಿಪಕ್ಷಗಳ ಅನುಪಸ್ಥಿತಿಯಲ್ಲಿ 15 ಮಸೂದೆಗಳು ಅಂಗೀಕಾರವಾಗಿವೆ.
ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ
ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆಗೆ ಸಂಸತ್ ಒಪ್ಪಿಗೆ ನೀಡಿದೆ. ಇನ್ನು ಮುಂದೆ ಧಾನ್ಯಗಳು, ಬೇಳೆ-ಕಾಳುಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆ ಮುಂತಾದ ವಸ್ತುಗಳು ಅಗತ್ಯ ವಸ್ತುಗಳ ವಿಭಾಗದಲ್ಲಿ ಬರುವುದಿಲ್ಲ. ಇದರಿಂದಾಗಿ ಖಾಸಗಿ ಹೂಡಿಕೆದಾರರು ಯಾವುದೇ ಹಸ್ತಕ್ಷೇಪ ಇಲ್ಲದೆ ವಹಿವಾಟು ನಡೆಸಬಹುದು. ಇದರಿಂದ ಕೃಷಿಯಲ್ಲಿ ಪೂರೈಕೆಯ ಸರಪಳಿ ಬಲಗೊಂಡು ಹೂಡಿಕೆಗೆ ಉತ್ತೇಜನ ಸಿಗಲಿದೆ ಎನ್ನಲಾಗಿದೆ. 1950ರ ದಶಕದಲ್ಲಿ ದೇಶದಲ್ಲಿ ಗೋಧಿ ಮತ್ತು ಭತ್ತದಂತಹ ಧಾನ್ಯಗಳ ತೀವ್ರ ಕೊರತೆ ಇತ್ತು. ಇದರೊಂದಿಗೆ ಇತರ ಕೆಲವು ಅಗತ್ಯ ವಸ್ತುಗಳ ಕೊರತೆಯೂ ಇತ್ತು. ಹೀಗಾಗಿ ಅಗತ್ಯ ಸರಕುಗಳು ಅಥವಾ ಉತ್ಪನ್ನಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವಸ್ತುಗಳ ಕಾಯ್ದೆಯನ್ನು 1955ರಲ್ಲಿ ಸಂಸತ್​ನಲ್ಲಿ ಅಂಗೀಕರಿಸಲಾಗಿತ್ತು. ಆದರೀಗ ಅದರಲ್ಲಿ ತಿದ್ದುಪಡಿ ತರುವ ಮೂಲಕ ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲಾಗುತ್ತಿದೆ. ಜತೆಗೆ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ ಎಂದು ಸರ್ಕಾರ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
