ಲಖನೌ:ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಇಂದು ಮಧ್ಯಾಹ್ನ ಕಚ್ಚಾ ಬಾಂಬ್​ ಒಂದು ಸ್ಫೋಟಗೊಂಡಿದ್ದು ಮೂರು ವಕೀಲರು ಗಾಯಾಳುಗಳಾಗಿದ್ದಾರೆ. ಮೂರು ಕಚ್ಚಾ ಬಾಂಬ್​ಗಳು ಪತ್ತೆಯಾಗಿರುವುದು ವರದಿಯಾಗಿದೆ.
ಎರಡು ವಕೀಲರ ಗುಂಪಿನ ನಡುವೆ ನಡೆಯುತ್ತಿರುವ ಪೈಪೋಟಿಯ ಕಾರಣದಿಂದಾಗಿ ಈ ಬಾಂಬ್​ ಸ್ಫೋಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಸ್ಫೋಟಗೊಂಡ ಬಾಂಬ್​ ಅಲ್ಲದೆ ಒಟ್ಟು ಮೂರು ಕಚ್ಚಾ ಬಾಂಬ್​ಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಇದು ತನ್ನ ಹತ್ಯೆಗೆಂದೇ ಮಾಡಿರುವ ಸ್ಫೋಟ ಎಂದು ಲಖನೌ ಬಾರ್ ಅಸೋಸಿಯೇಷನ್ ​​ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಲೋಧಿ ಆರೋಪಿಸಿದ್ದಾರೆ. 10 ಜನರ ಗುಂಪೊಂದು ತನ್ನ ಚೇಂಬರ್​ನ ಬಳಿ ಮೂರು ಬಾಂಬ್​ಗಳನ್ನು ಎಸೆದಿದ್ದು ಅದರಲ್ಲಿ ಒಂದು ಮಾತ್ರ ಸ್ಫೋಟಗೊಂಡಿದೆ ಎಂದಿರುವ ಸಂಜೀವ್​ ನ್ಯಾಯಾಲಯದ ಆವರಣದಲ್ಲಿ ಭದ್ರತೆಯನ್ನು ಪ್ರಶ್ನಿಸಿದ್ದಾರೆ. ಬಾಂಬ್​ ಸ್ಥಳೀಯವಾಗಿ ತಯಾರಿಸಲ್ಪಟ್ಟಿದ್ದು, ಸ್ಫೋಟದಿಂದಾಗಿ ಒಬ್ಬ ವಕೀಲನಿಗೆ ಗಂಭೀರ ಗಾಯವಾಗಿದೆ. ಸಂಜೀವ್​ ಸೇರಿದಂತೆ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಜನವರಿ 7ರಂದು ಲಖನೌನ ವಕೀಲ ಶೇಖರ್​ ತ್ರಿಪಾಠಿ (32) ಅವರನ್ನು ಐವರು ಕೋಲುಗಳಿಂದ ಹೊಡೆದು ಕೊಂದಿದ್ದರು. ಡಿಸೆಂಬರ್​ 17ರಂದು ಬಿಜ್ನೋರ್​ನ ಸಿಜೆಎಂ ನ್ಯಾಯಾಲಯದಲ್ಲಿ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿದ್ದರಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಈ ಎಲ್ಲ ಪ್ರಕರಣಗಳಿಂದ ಸಿಟ್ಟಿಗೆದ್ದಿದ್ದ ವಕೀಲರು ತಮ್ಮ ಮೇಲೆ ನಡೆಯುತ್ತಿದ್ದ ದಾಳಿಯನ್ನು ಖಂಡಿಸಿ ಕಳೆದ ತಿಂಗಳು ಪ್ರತಿಭಟನೆಯನ್ನು ನಡೆಸಿದ್ದರು.(ಪಿಟಿಐ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eleven =
Remember me
