ದೆಹಲಿ:ಸಾರ್ವಜನಿಕ ಪ್ರದೇಶದಲ್ಲಿ ಗನ್​ ತೋರಿಸಿ ವಯೋವೃದ್ಧನಿಂದ 1 ಲಕ್ಷ ರೂ. ದೋಚಿರುವ ಘಟನೆ ದೆಹಲಿಯ ಮಂಡೋಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಸಹೋದರಿ ಮೃತದೇಹ ನೋಡ್ತಿದ್ದಂತೆ ಕುಸಿದು ಪ್ರಾಣ ಬಿಟ್ಟ ಸ್ಟಾರ್​ ನಟನ ಅಣ್ಣ; ಒಂದೇ ದಿನ ನಡೆಯಿತು ಒಡಹುಟ್ಟಿದವರ ಅಂತ್ಯಕ್ರಿಯೆ
68 ವರ್ಷದ ಆಸುಪಾಸಿನ ವಯೋವೃದ್ಧನೊಬ್ಬ ಜನನಿಬಿಡ ರಸ್ತೆಯ ಪಕ್ಕದ ಶೆಡ್‌ನ ಕೆಳಗೆ ನಿಂತಿರುವುದನ್ನು ಕಂಡ ಇಬ್ಬರು ದುಷ್ಕರ್ಮಿಗಳು ಆತನ ಬಳಿಗೆ ಬಂದಿದ್ದಾರೆ. ಈ ವೇಳೆ ಒಬ್ಬನು ಆತನಿಂದ ಚೀಲವನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದರೆ, ಇನ್ನೊಬ್ಬ ಸುತ್ತಲಿನ ಜನರನ್ನು ಹೆದರಿಸಿದ್ದಾನೆ.
ದುಷ್ಕರ್ಮಿಗಳ ಹೆದರಿಕೆಗೆ ಜಗ್ಗದ ವಯೋವೃದ್ಧ ತನ್ನ ಪ್ರಾಣವನ್ನು ಲೆಕ್ಕಿಸದೇ ಚೀಲವನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದಾನೆ. ಈ ವೇಳೆ ವೃದ್ಧ ಚೀಲವನ್ನು ಕೊಡದೇ ಇದ್ದಾಗ, ಆತನನ್ನು ರಸ್ತೆಯ ಮೇಲೆಯೇ ಎಳೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಮೆಟ್ಟಿಲು ಹತ್ತುತ್ತಲೇ ಕುಸಿದು ಬಿದ್ದ ವಿದ್ಯಾರ್ಥಿನಿ: ಸಾವಿನ ರಹಸ್ಯ ಬಿಚ್ಚಿಟ್ಟ ವೈದ್ಯ
ಕೊನೆಗೆ ವ್ಯಕ್ತಿಯ ಬಳಿಯಿದ್ದ ಬಳಿಯಿದ್ದ ಬ್ಯಾಗನ್ನು ಕಸಿದುಕೊಂಡ ದುಷ್ಕರ್ಮಿಗಳು ರಸ್ತೆಯ ಇನ್ನೊಂದು ಬದಿಗೆ ಓಡಿ ಹೋಗಿದ್ದು, ಬೈಕ್‌ನಲ್ಲಿ ಮೂರನೇ ದುಷ್ಕರ್ಮಿ ಕಾಯುತ್ತಿದ್ದವನ ಜತೆಗೆ ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೆಹಲಿ ಪೊಲೀಸ್‌ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು, ಕೊಲೆ, ಸುಲಿಗೆ, ದರೋಡೆಗಳ ಕುರಿತು ನೂರಾರು ದೂರು ದಾಖಲಾಗುತ್ತಿವೆ. ಕೆಲ ದಿನಗಳ ಹಿಂದೆ ಗೂಂಡಾಗಳ ಗುಂಪೊಂದು ದೆಹಲಿಯ ಪ್ರಗತಿ ಮೈದಾನದ ಸುರಂಗದಲ್ಲಿ ಚಲಿಸುತ್ತಿದ್ದ ಕ್ಯಾಬ್​ನ್ನು ನಿಲ್ಲಿಸಿ, ಅದರಲ್ಲಿದ್ದ ಪ್ರಯಾಣಿಕರಿಗೆ ಬಂದೂಕು ತೋರಿಸಿ ಲೂಟಿ ಮಾಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಕ್ರೈಂ ಬ್ರಾಂಚ್ 4 ಆರೋಪಿಗಳನ್ನು ಬಂಧಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 4 =
Remember me
