ಮುಂಬೈ: ಕಳೆದ 6 ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 100 ಕ್ಕಿಂತ ಹೆಚ್ಚು ಏರಿಕೆಯನ್ನು ನೀಡಿದ ಕೆಲವು ಕಂಪನಿಗಳ ಪೈಕಿ ಐನಾಕ್ಸ್ ವಿಂಡ್ ಲಿಮಿಟೆಡ್ (INOX Wind Limited) ಕೂಡ ಒಂದು. ಹೂಡಿಕೆದಾರರಿಗೆ ಬಂಪರ್​ ಲಾಭ ನೀಡಿರುವ ಈ ಕಂಪನಿಯು ಈಗ ಮತ್ತೊಂದು ದೊಡ್ಡ ಕೊಡುಗೆ ನೀಡುತ್ತಿದೆ. ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಲು ಹೊರಟಿದೆ. ಕಂಪನಿಯು 1 ಷೇರಿಗೆ 3 ಬೋನಸ್ ಷೇರುಗಳನ್ನು ಉಚಿತವಾಗಿ ನೀಡುತ್ತಿದೆ.
ಈ ಬೋನಸ್ ಷೇರಿನ ದಾಖಲೆ ದಿನಾಂಕವನ್ನೂ ಪ್ರಕಟಿಸಲಾಗಿದೆ. ಕಂಪನಿಯು ಮೇ 20 ರ ಮೊದಲು ಷೇರು ಮಾರುಕಟ್ಟೆಯಲ್ಲಿ ಎಕ್ಸ್-ಡಿವಿಡೆಂಡ್ ಅನ್ನು ವ್ಯಾಪಾರ ಮಾಡುತ್ತದೆ.
ಮೇ 4 ರಂದು, ಐನಾಕ್ಸ್​ ವಿಂಡ್ ಲಿಮಿಟೆಡ್ ಕಂಪನಿಯು 10 ರೂ ಮುಖಬೆಲೆಯ ಒಂದು ಷೇರಿನ ಮೇಲೆ 3 ಷೇರುಗಳನ್ನು ಬೋನಸ್ ಆಗಿ ನೀಡಲು ನಿರ್ಧರಿಸಿದೆ. ಈ ಬೋನಸ್ ವಿತರಣೆಗೆ ಕಂಪನಿಯು ದಾಖಲೆಯ ದಿನಾಂಕವಾಗಿ ಮೇ 18 ಅನ್ನು ನಿಗದಿಪಡಿಸಿದೆ. ಮೊದಲ ಬಾರಿಗೆ ಕಂಪನಿಯು ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿದೆ.
ಶುಕ್ರವಾರ, ಬಿಎಸ್‌ಇಯಲ್ಲಿ ಕಂಪನಿಯ ಷೇರುಗಳ ಬೆಲೆ ಶೇಕಡಾ 1 ಕ್ಕಿಂತ ಹೆಚ್ಚು ಕುಸಿತದೊಂದಿಗೆ 614.90 ರೂ. ಮುಟ್ಟಿದವು. ಕಳೆದ 3 ತಿಂಗಳ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ಶೇ. 21ಕ್ಕೂ ಹೆಚ್ಚು ಏರಿಕೆ ಕಂಡಿದೆ. 6 ತಿಂಗಳ ಅವಧಿಯಲ್ಲಿ 186.80 ಪ್ರತಿಶತದಷ್ಟು ಹೆಚ್ಚಳ ಕಂಡಿದೆ.
ಐನಾಕ್ಸ್​ ವಿಂಡ್​ ಲಿಮಿಟೆಡ್​ ಷೇರಿನ ಬೆಲೆಯು ಕಳೆದ ಒಂದು ವರ್ಷದಲ್ಲಿ ಶೇಕಡಾ 449.20 ಲಾಭ ನೀಡಿದೆ. ಕಂಪನಿಯ 52 ವಾರಗಳ ಗರಿಷ್ಠ ಬೆಲೆ ರೂ 663 ಮತ್ತು ಕನಿಷ್ಠ ಬೆಲೆ ರೂ 107.30 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 20,042.57 ಕೋಟಿ ರೂ. ಇದೆ.

1,045ರಿಂದ 330ಕ್ಕೆ ಕುಸಿದ ಷೇರುಗಳ ಬೆಲೆ: ಈಗ ಮತ್ತೆ ಸ್ಟಾಕ್​ಗೆ ಡಿಮ್ಯಾಂಡು ಏಕೆ

ಮೇ 8ರವರೆಗೆ ರೇವಣ್ಣ ಎಸ್​ಐಟಿ ಕಸ್ಟಡಿಗೆ: ಜಡ್ಜ್​ ಕಟ್ಟಿಮನಿ ಆದೇಶ

ಪಿಎಸ್​ಯು ಷೇರುಗಳ ಮೇಲೆ ದುಪ್ಪಟ್ಟಾದರೂ ಅಗ್ಗ: ಸರ್ಕಾರಿ ಕಂಪನಿ ಸ್ಟಾಕ್​ ಖರೀದಿಗೆ ತಜ್ಞರ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
