ನವದೆಹಲಿ:ಎರಡನೇ ಬ್ಯಾಚ್​ನ ರಫೇಲ್ ಯುದ್ಧ ವಿಮಾನ ಫ್ರಾನ್ಸ್ ನಿಂದ ಭಾರತಕ್ಕೆ ಬುಧವಾರ ರವಾನೆಯಾಗಿದೆ. ಮೂರು ರಫೆಲ್ ಜೆಟ್​ಗಳು ಫ್ರಾನ್ಸ್ ನಿಂದ ನೇರವಾಗಿ ಗುಜರಾತ್ ವಾಯುನೆಲೆಗೆ ಬಂದಿದೆ.
ಫ್ರಾನ್ಸ್​ನ ಸಮೀಪ ಆಗಸದಲ್ಲೇ ವಿಮಾನ ಇಂಧನ ತುಂಬಿಸಿಕೊಂಡಿದೆ. ಹೊಸ ಮೂರು ಜೆಟ್​ಗಳ ಸೇರ್ಪಡೆ ಬಳಿಕ ಭಾರತೀಯ ವಾಯುಪಡೆಗೆ 8 ಅತ್ಯಾಧುನಿಕ ರಫೆಲ್ ಜೆಟ್​ಗಳ ಬಲ ಬಂದಂತಾಗಿದೆ. ಇದಕ್ಕೂ ಮೊದಲು ಜುಲೈ 29 ರಂದು 5 ರಫೆಲ್ ವಿಮಾನಗಳ ಮೊದಲ ಬ್ಯಾಚ್​ನ್ನು ಭಾರತ ಸ್ವೀಕರಿಸಿತ್ತು.
ಸೆಪ್ಟೆಂಬರ್ 10ರಂದು ನಡೆದ ಕಾರ್ಯಕ್ರಮದಲ್ಲಿ ಅವುಗಳನ್ನು ಅಧಿಕೃತವಾಗಿ ವಾಯುಪಡೆಗೆ ನಿಯೋಜಿಸಲಾಯಿತು. 59,000 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್​ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, ಇದರ ಅನ್ವಯ ಹಂತ ಹಂತವಾಗಿ 2022ರ ವೇಳೆಗೆ ಎಲ್ಲ ಜೆಟ್​ಗಳನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಫ್ರಾನ್ಸ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
