ನವದೆಹಲಿ:ವಿಆರ್​ಎಲ್ ಮೀಡಿಯಾ ಸಂಸ್ಥೆಯ ದಿಗ್ವಿಜಯ 24/7 ನ್ಯೂಸ್​ನ ಸಾಮಾಜಿಕ ಕಳಕಳಿಯ ವರದಿಗಳು ಮತ್ತೊಮ್ಮೆ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದು, ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿವಾಹಿನಿಗಳ ಸಾಧನೆಯನ್ನು ಪರಿಗಣಿಸಿ ಪ್ರತಿವರ್ಷ ನೀಡಲಾಗುವ ಎನ್​ಬಾ (ಉಘಆಅ-ಎಕ್ಸ್​ಚೇಂಜ್ ಫಾರ್ ಮೀಡಿಯಾ ನ್ಯೂಸ್ ಬ್ರಾಡ್​ಕಾಸ್ಟಿಂಗ್ ಅವಾರ್ಡ್ಸ್) ಪ್ರಶಸ್ತಿಗಳ ಮೂರು ವಿಭಾಗದಲ್ಲಿ ದಿಗ್ವಿಜಯ ನ್ಯೂಸ್ ಭಾಜನವಾಗಿದೆ.
ಶನಿವಾರ ದೆಹಲಿಯ ಇಂಪೀರಿಯಲ್ ಹೊಟೇಲ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಕ್ಸ್​ಚೇಂಜ್ ಫಾರ್ ಮೀಡಿಯಾ ಸಂಸ್ಥೆಯ ಮುಖ್ಯಸ್ಥ ಅನುರಾಗ್ ಬತ್ರಾ ಹಾಗೂ ಗಣ್ಯರು ದಿಗ್ವಿಜಯ ನ್ಯೂಸ್​ಗೆ ಪ್ರಶಸ್ತಿ ನೀಡಿ ಗೌರವಿಸಿದರು. ವಿಜಯವಾಣಿ-ದಿಗ್ವಿಜಯ ನ್ಯೂಸ್ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಮತ್ತು ವಿಆರ್​ಎಲ್ ಮೀಡಿಯಾ ದೆಹಲಿ ಬ್ಯೂರೋದ ಚೀಫ್ ಜನರಲ್ ಮ್ಯಾನೇಜರ್ ದೀಪಕ್ ಭಾಟಿಯಾ ದಿಗ್ವಿಜಯ ನ್ಯೂಸ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ENBA ಪ್ರಶಸ್ತಿ ಕುರಿತು:ಎಕ್ಸ್​ಚೇಂಜ್ ಫಾರ್ ಮೀಡಿಯಾ ಸಂಸ್ಥೆ 2008ರಿಂದ ಎಕ್ಸ್​ಚೇಂಜ್ ಫಾರ್ ಮೀಡಿಯಾ ನ್ಯೂಸ್ ಬ್ರಾಡ್​ಕಾಸ್ಟಿಂಗ್ ಅವಾರ್ಡ್ಸ್ (ಪ್ರಶಸ್ತಿ) ನೀಡುತ್ತಾ ಬಂದಿದೆ. ಅತ್ಯುತ್ತಮ ಸುದ್ದಿ ವಾಹಿನಿ, ವರ್ಷದ ಟಿವಿ ಸಂಪಾದಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವರ್ಷದ ಸಂಪಾದಕ ಮಂಡಳಿ ಮುಖ್ಯಸ್ಥ, ಟಿವಿ ವರದಿಗಾರ ಹಾಗೂ ವಿವಿಧ ಗಮನ ಸೆಳೆಯುವ ವರದಿ, ಕಾರ್ಯಕ್ರಮಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಪ್ರಶಸ್ತಿ ಪುರಸ್ಕೃತ ಕಾರ್ಯಕ್ರಮಗಳು:ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ಅವಲೋಕಿಸಿ ಸತ್ಯ-ಮಿಥ್ಯ ಕಾರ್ಯಕ್ರಮ ಮೂಲಕ ಜನರಿಗೆ ವಾಸ್ತವವನ್ನು ದಿಗ್ವಿಜಯ ನ್ಯೂಸ್​ನಲ್ಲಿ ವಿವರಿಸಲಾಗುತ್ತಿತ್ತು. ಪ್ರಮುಖವಾಗಿ ಕರೊನಾ ಮಹಾಮಾರಿ ವಿಪರೀತವಾಗಿ ಹಬ್ಬಿದ್ದ ಸಂದರ್ಭದಲ್ಲಿ ಜನರಿಗೆ ಸತ್ಯ ಕಂಡುಕೊಳ್ಳಲು ಬಹಳ ಸಹಕಾರಿಯಾಗಿತ್ತು. ಜನಪರ ಮತ್ತು ಸಾಮಾಜಿಕ ಕಾಳಜಿಯ ಈ ಕಾರ್ಯಕ್ರಮ ಎನ್​ಬಾದ ದಕ್ಷಿಣ ಭಾರತದ ಪ್ರಾದೇಶಿಕ ಸುದ್ದಿವಾಹಿನಿಗಳ ಸಮಗ್ರ ಸರಣಿ ವಿಭಾಗದಲ್ಲಿ ರಜತ ಪ್ರಶಸ್ತಿಗೆ ಪಾತ್ರವಾಗಿದೆ.
ದಿಗ್ವಿಜಯ ನ್ಯೂಸ್​ನಲ್ಲಿ ‘ಹೃದಯವಂತರು’ ಕಾರ್ಯಕ್ರಮ ಪ್ರಸಾರವಾಗಿತ್ತು. ಕರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಸಂತ್ರಸ್ತರು, ಸಾಮಾನ್ಯ ಜನರಿಗೆ ಹತ್ತಾರು ಮಂದಿ ನೆರವಾಗಿ, ದುಃಖ-ನೋವಿಗೆ ಸ್ಪಂದಿಸಿದರು. ಕರೊನಾ ಪೀಡಿತರ ಬಳಿ ತೆರಳಲೇ ಹಿಂದೇಟು ಹಾಕುತ್ತಿದ್ದ ಜನರ ಮಧ್ಯೆ ಈ ವ್ಯಕ್ತಿಗಳ ಸಾಧನೆ ಮೆಚ್ಚುವಂಥದ್ದು. ಅಂಥವರನ್ನು ಗುರುತಿಸಿದ ದಿಗ್ವಿಜಯ ನ್ಯೂಸ್, ಅವರ ಬಗ್ಗೆ ವಿಸõತ, ವಿಶೇಷ ವರದಿಗಳನ್ನು ಪ್ರಸಾರ ಮಾಡಿತ್ತು. ಇದು ಕೂಡ ಸಾಮಾಜಿಕ ಕಳಕಳಿಗಾಗಿ ಅತ್ಯುತ್ತಮ ಅಭಿಯಾನ ವಿಭಾಗದಲ್ಲಿ ಎನ್​ಬಾದ ರಜತ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ.
ಕರೊನಾ ಸಂದರ್ಭ ಆಂಬುಲೆನ್ಸ್​ಗಳ ಕೊರತೆಯಿಂದಾಗಿ ನೂರಾರು ಮಂದಿ ತೊಂದರೆಗೀಡಾಗಿದ್ದರು. ಅದರಲ್ಲೂ 2ನೇ ಅಲೆ ತೀವ್ರವಾಗಿದ್ದ ವೇಳೆ ಬೆಂಗಳೂರಿನಲ್ಲಿ ಒಂದೇ ಆಂಬುಲೆನ್ಸ್​ನಲ್ಲಿ ಮೂರು ಹೆಣಗಳನ್ನು ಸಾಗಣೆ ಮಾಡುತ್ತಿದ್ದ ಬಗ್ಗೆ ದಿಗ್ವಿಜಯ ಎಕ್ಸ್​ಕ್ಲೂಸೀವ್ ವರದಿ ಪ್ರಸಾರ ಮಾಡಿತ್ತು. ಇದು ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಭಾವ ಬೀರಿ ತುರ್ತು ಕ್ರಮಕ್ಕೆ ಕಾರಣವಾಗಿತ್ತು. ಇದಕ್ಕೆ ಉತ್ಕೃಷ್ಟ ಸುದ್ದಿ ಪ್ರಸಾರ ವಿಭಾಗದಲ್ಲಿ ಕಂಚಿನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಆಜಾನ್​ಗೆ ಓಂಕಾರದ ಸವಾಲು; 1 ಸಾವಿರ ದೇವಸ್ಥಾನಗಳಲ್ಲಿ ಲೌಡ್​ಸ್ಪೀಕರ್​ನಲ್ಲಿ ಸುಪ್ರಭಾತ

ಒಂದು ಫೋಟೋ ಪೋಸ್ಟ್ ಮಾಡಿ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ನಿರ್ದೇಶಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 3 =
Remember me
