ತ್ರಿಶೂರ್:ಒಂದೇ ಕುಟುಂಬದ ಮೂವರು ಲಾಡ್ಜ್ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.
ಇದನ್ನೂ ಓದಿ:ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಂದ ಮತ್ತೆ ನೋಟಿಸ್​
ಘಟನೆಯು ಕೆಎಸ್​ಆರ್​ಟಿಸಿ ಬಸ್ ಡಿಪೋ ಬಳಿಯ ಲಾಡ್ಜ್​​ನಲ್ಲಿ ನಡೆದಿದ್ದು, ಚೆನ್ನೈ ಮೂಲದ ಸಂತೋಷ್ ಪೀಟರ್, ಸುನಿ ಪೀಟರ್ ಮತ್ತು ಅವರ ಮಗಳು (ಗುರುತು ಪತ್ತೆಯಾಗಿಲ್ಲ) ಮೃತಪಟ್ಟ ದುರ್ದೈವಿಗಳು. ಸ್ಥಳದಲ್ಲಿ ಡೆತ್​ನೊಟ್​ ಪತ್ತೆಯಾಗಿದ್ದು, ಹಣಕಾಸಿನ ಸಮಸ್ಯೆಯೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 4ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಲಾಡ್ಜ್‌ನಲ್ಲಿ ಕೊಠಡಿ ತೆಗೆದುಕೊಂಡ ಕುಟುಂಬಸ್ಥರು, ಜೂನ್ 7ರ ರಾತ್ರಿ ಚೆಕ್​ ಔಟ್ ಮಾಡುವುದಾಗಿ  ಹೋಟೆಲ್ ಸಿಬ್ಬಂದಿಗೆ ಮೊದಲೇ ತಿಳಿಸಿದ್ದರು. ಆ ದಿನ ಲಾಡ್ಜ್​​ ಸಿಬ್ಬಂದಿ ಸಂತೋಷ್​​ಗೆ ಕರೆ ಮಾಡಲು ಪದೇ ಪದೇ ಪ್ರಯತ್ನಿಸಿದರೂ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಕೊನೆಗೆ ಲಾಡ್ಜ್​ ಸಿಬ್ಬಂದಿ ರೂಮ್​ ಬಳಿ ಹೋದಾಗ ಬಾಗಿಲು ಒಳಗಿನಿಂದ ಲಾಕ್​ ಆಗಿತ್ತು. ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 20 =
Remember me
